ಮೊಳಕೆ ಬಂದ ಕಾಳು ಗಳನ್ನ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನ!

ಮೊಳಕೆ ಬಂದ ಕಾಳು ಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಖನಿಜಗಳು ಲವಣಗಳು ಕ್ಯಾಲ್ಷಿಯಂ ಪೊಟ್ಯಾಶಿಯಂ ಎಲ್ಲವೂ ಆಹಾರದ ಮೂಲಕ ಸಿಗುತ್ತದೆ. ಮೊಳಕೆ ಅನ್ನು ನೀವು ಯಾವುದಾದರೂ ಕಾಳುಗಳವುಗಳನ್ನು ಕಟ್ಟಬಹುದು. ಇನ್ನೂ ಮೊಳಕೆ ಬಂದ ಕಾಳುಗಳನ್ನು ಯಾವ ಸಮಯದಲ್ಲಿ ಸೇವನೆ ಮಾಡುವುದು ಸೂಕ್ತ ಅಂತ ಹೇಳುವುದಾದರೆ, ಬೆಳಿಗ್ಗೆ ಉಪಹಾರದ ಮುನ್ನವೇ ಇವುಗಳನ್ನು ಸೇವನೆ ಮಾಡಿದರೆ ಉತ್ತಮ. ಇನ್ನೂ ಈ ಮೊಳಕೆ ಕಟ್ಟಿದ ಕಾಳುಗಳುನ್ನು ಏಕೆ ಸೇವನೆ ಮಾಡಬೇಕು ಅಂತ ವೈದ್ಯರು ಸಲಹೆಯನ್ನು ನೀಡುತ್ತಾರೆ ಅಂದರೆ, ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಸ್ನಾಯುಗಳನ್ನು ಮೂಳೆ ಮಾಂಸ ಖಂಡಗಳನ್ನು ಬಲ ಪಡಿಸುತ್ತದೆ. ಹಾಗೂ ದಷ್ಟ ಪುಷ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ ಅಂತ ಇಂತಹ ಕಾಳುಗಳನ್ನು ನಾವು ಸೇವನೆ ಮಾಡುವುದು ಬಹಳ ಒಳ್ಳೆಯದು. ತೂಕವನ್ನು ಇಳಿಸಿಕೊಳ್ಳಲು ಬಯಸುವ ಜನರಿಗೆ ಇಂತಹ ಕಾಳುಗಳು ಬಹಳ ಉಪಯುಕ್ತವಾಗಿದೆ.

#ಚರ್ಮಕ್ಕೆ ಲಾಭಗಳು:ಮೊಳಕೆಯೊಡೆದ ಕಾಳುಗಳು ಫ್ರೀ ರ್ಯಾಡಿಕಲ್ ನ್ನು ಕೊಂದು ಹಾಕುತ್ತದೆ. ಇದರಿಂದ ಚರ್ಮದ ಕ್ಯಾನ್ಸರ್ ನಂತಹ ರೋಗವನ್ನು ತಡೆಯುತ್ತದೆ. ಮೊಳಕೆಯೊಡೆದ ಕಾಳುಗಳಲ್ಲಿ ಇರುವಂತಹ ವಿಟಮಿನ್ ಸಿ ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸುವುದು. ಇದರಿಂದ ಚರ್ಮದಲ್ಲಿ ಸ್ಥಿತಿಸ್ಥಾಪಕತ್ವವು ನಿರ್ಮಾಣವಾಗಿ ನೀವು ಯುವಕರಂತೆ ಕಾಣುತ್ತೀರಿ.

#ಮಧುಮೇಹ ಹೊಂದಿದವರಿಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಲು ಸಲಹೆ ನೀಡಲಾಗುವುದು. ಮೊಳಕೆ ಭರಿಸಿದ ಕಾಳುಗಳು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು. ಅವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಜೊತೆಗೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸಹ ಸಾಭೀತು ಪಡಿಸಿವೆ.

#ಕ್ಯಾನ್ಸರ್ ತಡೆಗಟ್ಟುವುದು;ದೇಹದಲ್ಲಿ ಹೆಚ್ಚಿನ ಆಮ್ಲೀಯತೆ ಉಂಟಾಗುವುದರಿಂದ ಕ್ಯಾನ್ಸರ್ ನಂತಹ ಹಲವಾರು ರೋಗಗಳು ಬರುತ್ತದೆ. ಮೊಳಕೆ ಭರಿಸಿದ ಧಾನ್ಯಗಳು ದೇಹದಲ್ಲಿರುವ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.

#ಹಾರ್ಮೋನ್ ಏರುಪೇರಿಗೆ ಫುಲ್‌ಸ್ಟಾಪ್:ಹಾರ್ಮೋನ್‌ಗಳ ಅಸಮತೋಲನದಿಂದ ತೂಕ ಹೆಚ್ಚುವುದು, ಕೂದಲುದುರುವುದು, ಸುಖಾಸುಮ್ಮನೆ ಸಿಟ್ಟು ಬರುವುದು, ಒತ್ತಡ, ದೇಹದ ಉಷ್ಣತೆ ಏರುಪೇರು, ನಿದ್ರಾ ಸಮಸ್ಯೆ ಮುಂತಾದವು ಕಂಡುಬರುತ್ತವೆ. ಆದರೆ ಪ್ರತಿನಿತ್ಯ ಮೊಳಕೆಕಾಳುಗಳ ಸೇವನೆಯಿಂದ ಈ ಹಾರ್ಮೋನ್‌ಗಳ ಅಸಮತೋಲನ ತಡೆಯಬಹುದು.

#ಇವುಗಳಲ್ಲಿ ಫೈಬರ್ ಅಂಶವು ಸಾಕಷ್ಟಿರುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

ಗಮನಿಸಿ: ಮೊಳಕೆ ಬರಿಸಿದ ಕಾಳುಗಳು ಸರಿಯಾಗಿ ಜೀರ್ಣವಾಗದೆ ಇದ್ದರೆ ಹೊಟ್ಟೆ ಉಬ್ಬರ, ಮಲಬದ್ಧತೆ ಹಾಗೂ ಹೊಟ್ಟೆನೋವಿಗೆ ಕಾರಣವಾಗಬಹುದು.ಆದ್ದರಿಂದ ವೃದ್ಧರು, ಅನಾರೋಗ್ಯ ಇರುವವರು ಹಾಗೂ ದುರ್ಬಲ ಜೀರ್ಣಕ್ರಿಯೆ ಹೊಂದಿರುವವರು ಇವುಗಳ ಸೇವನೆ ತಪ್ಪಿಸುವುದು ಒಳ್ಳೆಯದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group