ಕುರದ ನೋವಿಗೆ ತಕ್ಷಣ ಪರಿಹಾರ ಇಲ್ಲಿವೆ ನೋಡಿ!

ಕುರದ ನೋವನ್ನ ಯಾರಿಗೂ ಸಹ ವಿವರಣೆ ನಿಡೋಕೆ ಸಾಧ್ಯವೇ ಇಲ್ಲ. ಅಂತಹ ನೋವು ಇರತ್ತೆ. ಆ ಕುರ ಒಂದು ಕಡೆ ಓಪನ್ ಆಗತ್ತೆ ಇದರಿಂದ ಕೀವು ಹೊರಗೆ ಬರತ್ತೆ ಅತಿಯಾದ ನೋವು ಇರತ್ತೆ ಹಾಗೆ ಈ ನೋವಿನಿಂದ ಕೆಲವರಿಗೆ ಜ್ವರ ಕೂಡ ಬರುವ ಸಾಧ್ಯತೆ ಹೆಚ್ಚು ಇರತ್ತೆ.ಹಾಗಾದ್ರೆ ಇದಕ್ಕೆ ಮನೆ ಮದ್ದು ಏನು ಅಂತ ನೋಡುವ.

#ಅರಿಶಿನ:ಏರಡು ಚಿಕ್ಕಚಮಚ ಅರಿಶಿನ ಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಹಾಕಿ ಚೆನ್ನಾಗಿ ಕಲಕಿ ನಿತ್ಯವೂ ಕುಡಿಯುವ ಮೂಲಕ ಕೀವುಗುಳ್ಳೆ, ಕುರಗಳು ಶೀಘ್ರವಾಗಿ ವಾಸಿಯಾಗುತ್ತವೆ. ಜೊತೆಗೇ ಕೊಂಚ ನೀರಿನಲ್ಲಿ ಅರಿಶಿನ ಪುಡಿಯನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಗುಳ್ಳೆ ಅಥವಾ ಕುರದ ಮೇಲೆ ಮತ್ತು ಸುತ್ತಲಿನ ಭಾಗದ ಚರ್ಮಕ್ಕೆ ಸವರಿ ಇದರ ಮೇಲೆ ತೆಳುವಾದ ಬಟ್ಟೆಯ ಪಟ್ಟಿಯನ್ನು ಕಟ್ಟಬೇಕು. ನಿತ್ಯವೂ ಈ ಪಟ್ಟಿಯನ್ನು ಬದಲಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಶೀಘ್ರವೇ ಉಪಶಮನ ದೊರಕುತ್ತದೆ.

#ಕೃಷ್ಣಜೀರಿಗೆ ಎಣ್ಣೆ (Black Seed Oil):ನೀವು ಕುಡಿಯುವ ನಿತ್ಯದ ಯಾವುದೇ ಬಿಸಿ ಅಥವಾ ತಣ್ಣನೆಯ ಪೇಯ ಅಥವಾ ಹಸಿರು ಟೀಯಲ್ಲಿ ಅರ್ಧ ಚಿಕ್ಕಚಮಚ ಕೃಷ್ಣಜೀರಿಗೆ ಎಣ್ಣೆಯನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದರಿಂದ ಕುರಗಳು ಶೀಘ್ರವೇ ಗುಣವಾಗುವುದು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮರುಕಳಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

#ಕಹಿಬೇವು:ಒಂದು ಹಿಡಿಯಷ್ಟು ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ನೀರಿನೊಂದಿಗೆ ನುಣ್ಣಗೆ ಅರೆಯಿರಿ. ಈ ಲೇಪವನ್ನು ಕುರ ಮತ್ತು ಕೀವುಗಳ್ಳೆಯ ಮೇಲೆ ಮತ್ತು ಪಕ್ಕದ ಚರ್ಮಭಾಗಕ್ಕೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪದ ಮೇಲೆ ತೆಳುವಾದ ಬಟ್ಟೆಯನ್ನು ಅಥವಾ ಬ್ಯಾಂಡೇಜ್ ಪಟ್ಟಿಯನ್ನು ಕಟ್ಟಿ. ದಿನಕ್ಕೆರಡು ಬಾರಿ ಹೊಸ ಪಟ್ಟಿಯನ್ನು ಬದಲಿಸಿ. ಕುರ ಪೂರ್ಣವಾಗಿ ಇಲ್ಲವಾಗುವವರೆಗೂ ಮುಂದುವರೆಸಿ.

#ಬಾಹ್ಯವಾಗಿ ಕುರು ಆಗಿದ್ದು ಕಂಡರೆ ಅದಕ್ಕೆ ಲೇಪವನ್ನು ಕೂಡ ಮಾಡಬಹುದು. ವೀಳ್ಯದೆಲೆ ಅದನ್ನ ಪೇಸ್ಟ್ ಮಾಡಿ ಸ್ವಲ್ಪ ಬಿಸಿ ಮಾಡಿ ಕುರು ಆದ ಜಾಗದಲ್ಲಿ ಹಚ್ಚಿದರೆ ಬೇಗ ಕುರು ಪಕ್ವವಾಗಿ ಕೀವು ಸೋರಿ ಹೊರಗೆ ಬಂದು ಕಡಿಮೆ ಆಗತ್ತೆ. ನಂತರ ಅಲ್ಲಿ ಹೊಸ ಚರ್ಮ ಬೆಳೆಯುತ್ತದೆ. ಇವುಗಳನ್ನ ಮಾಡಿ ನೋಡಿ ಆದರೂ ಕಡಿಮೆ ಆಗದೆ ಇದ್ದಲ್ಲಿ ಹತ್ತಿರದ ವೈದ್ಯರನ್ನು ಭೇಟಿ ಆಗಿ.

#ಮೊದಲಾಗಿ ಸ್ವಚ್ಛತೆಯೇ ಇದಕ್ಕೆ ಪರಿಹಾರ. ಪ್ರತಿ ಬಾರಿ ವ್ಯಾಯಾಮ ಮಾಡಿದ ಬಳಿಕ ಅಥವಾ ಯಾವುದೇ ದೈಹಿಕ ಶ್ರಮದ ಕೆಲಸ, ಬೆವರುವಿಕೆ ಉಂಟಾಗುವ ಪರಿಸ್ಥಿತಿಗಳಲ್ಲಿ ಸ್ನಾನ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಬೇಕಾಗಿ ಬರಬಹುದು. ದೈಹಿಕ ಶ್ರಮದ ಯಾವುದೇ ಕೆಲಸದಲ್ಲಿ ದೇಹ ಬಿಸಿಯಾಗುತ್ತದೆ ಹಾಗೂ ಇದನ್ನು ತಂಪುಗೊಳಿಸಲು ದೇಹ ತ್ವಚೆಯ ಸೂಕ್ಷ್ಮರಂಧ್ರಗಳನ್ನು ವಿಶಾಲವಾಗಿ ತೆರೆದು ಬೆವರು ಹೊರಹರಿಯಲು ಅನುವು ಮಾಡಿಕೊಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group