ಆರೋಗ್ಯಕ್ಕೆ ಜೇನುತುಪ್ಪದ ಉಪಯೋಗವೇನು?

ಆಯುರ್ವೇದದ ಪ್ರಕಾರ ಜೇನುತುಪ್ಪವು ತನ್ನದೇ ಆದ ಶಕ್ತಿಯನ್ನು ಹೊಂದಿಲ್ಲವಂತೆ. ಆದರೆ ಅದನ್ನು ಇತರ ಪದಾರ್ಥಗಳ ಜೊತೆ ಸಂಯೋಜಿಸಿದಾಗ ಉಪಯೋಗ ಹೆಚ್ಚು ಎನ್ನಲಾಗ್ತಿದೆ.
#ಅಜೀರ್ಣದಿಂದುಟಾಗುವ ರೋಗಗಳು ನಿವಾರಣೆಯಾಗುವವು, ಅತಿಸಾರ ಮಲಬದ್ಧತೆಗಳೂ ನಿವಾರಣೆಯಾಗುವವು,
#ಜೇನು ತುಪ್ಪವನ್ನು ಕಣ್ಣುಗಳಿಗೆ ಅಂಜನದಂತೆ ಹಚ್ಚಿದರೆ ಕಣ್ಣುರಿ ಶಾಂತವಾಗುವದು.
#ಜ್ಞಾನಶಕ್ತಿ ಕಡಿಮೆ ಇರುವವರು ನಿತ್ಯವೂ ಊಟವಾದ ನಂತರ ೧-೨ ಸಣ್ಣ ಚಮಚೆ ಜೇನುತುಪ್ಪವನ್ನು ಸೇವಿಸಲೇಬೇಕು.
#ಚರ್ಮದ ಸೋಂಕುಗಳನ್ನು ಎದುರಿಸುತ್ತದೆ: ತ್ವಚೆ ಮತ್ತು ನೆತ್ತಿಯ ಯೋಗಕ್ಷೇಮದ ಮೇಲೆ ಜೇನುತುಪ್ಪವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಚರ್ಮದ ಸೊಂಕು (Skn allergy), ತುರಿಕೆಯ ಸಮಸ್ಯೆ ನಿವಾರಣೆಯಾಗುತ್ತದೆ. ಗಾಯಗಳಿಗೆ ಜೇನು ತುಪ್ಪ ಹಚ್ಚಿದರೆ ಎರಡು ವಾರಗಳಲ್ಲಿ ಕಣ್ಮರೆಯಾಗುತ್ತದೆ. ರೋಗಿಗಳ ಕೂದಲು ಉದುರುವಿಕೆಯ ಸ್ಥಿತಿಯೂ ಸುಧಾರಿಸುತ್ತದೆ.
#ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಲು ಜೇನುತುಪ್ಪ ಬಹಳ ಪ್ರಯೋಜನಕಾರಿಯಾಗಿದೆ.
#ಜೇನುತುಪ್ಪವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.>> ಜೇನುತುಪ್ಪವನ್ನು ತಿನ್ನುವುದರಿಂದ ದೃಷ್ಟಿ ಹೆಚ್ಚಾಗುತ್ತದೆ.
#ಜೇನುತುಪ್ಪದ ಒಂದು ಮುಖ್ಯ ಉಪಯೋಗ ಏನೆಂದರೆ ಈ ಜೇನಿಗೆ ಗಾಯವನ್ನು ಗುಣಪಡಿಸುವ ಸಾಮರ್ಥ್ಯವಿದೆ.ಹಾಗಾಗಿ ಬಾಯಿಹುಣ್ಣು ಆದ ಸಂದರ್ಭದಲ್ಲಿ ನಾಲ್ಕು ಚಮಚದಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ. ಅಥವಾ ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.