ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸಲು ಕೆಲವು ಸಲಹೆ!

ವ್ಯಕ್ತಿಯ ಮೆದುಳಿನ ಕಾರ್ಯವಿಧಾನ ಆತನ ನೆನಪಿನ ಶಕ್ತಿಯಿಂದಾಗಿ ಆತ ಎಲ್ಲಾ ವಿಧವಾದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಹಾಗಾಗಿಯೇ ಪ್ರತಿಯೊಬ್ಬರೂ ತಮ್ಮ ನೆನಪಿನ ಶಕ್ತಿಯನ್ನು ಬೆಳೆಸಿಕೊಳ್ಳಲು ಸದಾ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಪ್ರತಿಯೊಬ್ಬ ಪೋಷಕರೂ ಕೂಡಾ ತಮ್ಮ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ನಾನಾ ಆಹಾರ ಕ್ರಮಗಳ ಮೊರೆ ಹೋಗುತ್ತಾರೆ. ಅಂತಹ ನೆನಪಿನ ಶಕ್ತಿ ವೃಧಿಸಲು ಈ ಸಲಹೆಗಳನ್ನು ಅನುಸರಿಸಿ!
#ಧ್ಯಾನ ಮಾಡಿ:ವಿದ್ಯಾರ್ಥಿಗಳು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಹೆಚ್ಚು ಅವಶ್ಯಕ. ಹಾಗಾಗಿ ಬೆಳಗ್ಗೆ ಮತ್ತು ಸಂಜೆ ಅಧ್ಯಯನಕ್ಕೆ ಕೂರುವ ಮುನ್ನ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಿ ಇದರಿಂದ ಮೆದುಳು ಮತ್ತು ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ಪ್ರತಿನಿತ್ಯ ಅಧ್ಯಯನವನ್ನು ಯಾವುದೇ ರೀತಿಯ ದ್ವಂದ್ವಗಳಿಲ್ಲದೆ ಮತ್ತು ಆಯಾಸವಿಲ್ಲದೆ ಸುಲಭವಾಗಿ ಮಾಡಬಹುದು.
#ಬೆಳೆಯುವ ಮಕ್ಕಳಿಗೆ ಆರೋಗ್ಯಯುತ ಆಹಾರ ನೀಡುವುದು ಅತ್ಯಂತ ಮುಖ್ಯವಾಗಿದೆ. ಅವರಿಗೆ ನೀಡುವ ಆಹಾರದಲ್ಲಿ ಪ್ರೊಟೀನ್ ಗಳು, ವಿಟಮಿನ್ ಗಳು ಮತ್ತು ಪೋಷಕಾಂಶಗಳು ಇರಬೇಕಾಗುತ್ತದೆ. ಇದರಿಂದ ಮಕ್ಕಳ ದೇಹದ ಮತ್ತು ಮೆದುಳಿನ ಬೆಳವಣಿಗೆಗೆ ಯಾವುದೇ ರೀತಿಯ ಅಡೆತಡೆ ಉಂಟಾಗುವುದಿಲ್ಲ. ಗರ್ಭಿಣಿಯರು ಇರುವಾಗಲೇ ಪೋಷಕಾಂಶಗಳು ಇರುವ ಆಹಾರವನ್ನು ತಿನ್ನಬೇಕು. ಇದರಿಂದ ಮಕ್ಕಳ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ. ಹಾಗೆಯೇ ಮೂರರಿಂದ ನಾಲ್ಕು ಚಮಚ ನೆಲ್ಲಿಕಾಯಿಯ ರಸಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
#ನೀರು ಮತ್ತು ಆಹಾರ ಸೇವನೆ ಮುಖ್ಯ:ಆರೋಗ್ಯ ಚೆನ್ನಾಗಿದ್ದರೆ ಮಾತ್ರ ವಿದ್ಯಾರ್ಥಿಗಳು ಅಂದಿನ ಪಾಠವನ್ನು ಅಂದೇ ಅಧ್ಯಯನ ಮಾಡಲು ಸಾಧ್ಯ ಮತ್ತು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯ. ಹಾಗಾಗಿ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ವಹಿಸಿ. ಪ್ರತಿನಿತ್ಯ ಹೆಚ್ಚು ನೀರು ಕುಡಿಯಿರಿ ಮತ್ತು ಉತ್ತಮ ಆಹಾರ ಸೇವನೆಯನ್ನು ಮಾಡಿ. ಮೆದುಳಿನ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರವನ್ನು ಹೆಚ್ಚು ಸೇವಿಸಿ.
#ಮನಸ್ಸಿಗೆ ರಿಲ್ಯಾಕ್ಸ್ ಆಗುವ ಸಂಗೀತ ಕೇಳಿ:ವಿದ್ಯಾರ್ಥಿಗಳು ಎಂದ ಮಾತ್ರಕ್ಕೆ ಎಲ್ಲ ವಿಷಯಗಳಿಂದಲೂ ದೂರವಿರಬೇಕೆಂದಿಲ್ಲ. ಮನಸ್ಸಿಗೆ ಮುದ ನೀಡವ ಆಸಕ್ತಿಗೆ ಪೂರಕವಾಗುವಂತಹ ಸಂಗೀತವನ್ನು ಕೇಳಿ. ಅಧ್ಯಯನ ನಡುವೆ ವಿರಾಮ ತೆಗೆದುಕೊಳ್ಳುವಂತಹ ಸಮಯದಲ್ಲಿ ವಿದ್ಯಾರ್ಥಿಗಳು ಈ ರೀತಿ ಮಾಡಿದರೆ ಮನಸ್ಸು ಉಲ್ಲಾಸವಾಗಿರುತ್ತದೆ ಜೊತೆಗೆ ರಿಲ್ಯಾಕ್ಸ್ ಕೂಡ ಸಿಗುತ್ತದೆ. ತದನಂತರ ಅಧ್ಯಯನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು.
#ಊಟದ ನಂತರ ಸ್ವಲ್ಪ ಕೊತ್ತುಂಬರಿ ಬೀಜದ ಪುಡಿಗೆ ಜೇನುತುಪ್ಪ ಸೇರಿಸಿ ತಿನ್ನಬೇಕು. ಇದರಿಂದ ಕೂಡ ನೆನಪಿನ ಶಕ್ತಿ ಹೆಚ್ಚುತ್ತದೆ. ಭಜೆಯ ಚೂರ್ಣವನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು. ಇದರಿಂದ ಜ್ಞಾಪಕಶಕ್ತಿ ಕ್ರಮೇಣವಾಗಿ ಹೆಚ್ಚುತ್ತದೆ. ಹಾಗೆಯೇ ಹಾಲಿಗೆ ಎಲಕ್ಕಿ ಪುಡಿ ಬೆರೆಸಿ ಅದಕ್ಕೆ ಜೇನುತುಪ್ಪ ಹಾಕಿ ಕುಡಿಯಬೇಕು. ಒಂದೆಲಗದ ರಸವನ್ನು ಸೇವಿಸಬೇಕು. ಈ ಎಲೆಯನ್ನು 42ದಿನಗಳ ಕಾಲ ದಿನನಿತ್ಯ ಬೆಳಿಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
#ಸಮರ್ಪಕ ನಿದ್ರೆ ಅಥವ ವಿಶ್ರಾಂತಿ: ನಮ್ಮೆಲರ ಜ್ಞಾನದ ಭಂಡಾರ ಮೆದುಳು ಅಲ್ಲಲ್ಲಿ ಓದಿ ಸಿಕ್ಕಿಸಿಕೊಂಡ ಜ್ಞಾನಗಳನ್ನೆಲ್ಲ ಕ್ರಮಾನುಗತವಾಗಿ ಜೋಡಿಸುವುದು. ಅದು ವಿಶ್ರಾಂತ ಸ್ಥಿತಿಯಲ್ಲಿ ಹಾಗಾಗಿ ಮೆದುಳು ಹೆಚ್ಚು ವಿಶ್ರಾಂತಿ ಪಡೆಯಲೇ ಬೇಕು ಅದು ಇಡೀ ದೇಹವನ್ನು ಮತ್ತು ಮನಸನ್ನು ಸಮಸ್ಥಿತಿಯಲ್ಲಿ ಇಡಬಲ್ಲದು ಅದು ಬಹಳ ಮುಖ್ಯ ವ್ಯಕ್ತಿತ್ವ ವಿಕಸನಕ್ಕೆ.