ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾದದ್ದು..!

ಎಳ ನೀರಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದು ಅತಿ ಹೆಚ್ಚಿನ ಪೋಷಕಾಂಶಗಳಿರುವ ಕಾರಣ ಇದೊಂದು ಅದ್ಭುತ ಜೀವಜಲವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳು, ಅಮೈನೋ ಆಮ್ಲ, ಕಿಣ್ವಗಳು, ಬಿ-ಕಾಂಪ್ಲೆಕ್ಸ್ ವಿಟಮಿನ್ನುಗಳು, ವಿಟಮಿನ್ ಸಿ ಹಾಗೂ ಖನಿಜಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೀಶಿಯಂ, ಮ್ಯಾಂಗನೀಸ್ ಮೊದಲಾದವುಗಳಿವೆ.

#ಬಾಯಾರಿಕೆಯಾದಾಗ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಎಳನೀರಿಗಿಂತ ಬೇರಾವ ದ್ರವವೂ ಸರಿಸಾಟಿಯಾಗಲಾರದು. ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದೇಹ ಕಳೆದುಕೊಂಡಿರುವ ನೀರು ಮತ್ತು ಶಕ್ತಿಯನ್ನು ಮರುತುಂಬಿಸಲು ನೆರವಾಗುತ್ತವೆ. ವಿಶೇಷವಾಗಿ ಆಮಶಂಕೆ, ವಾಂತಿ, ಅತಿ ಹೆಚ್ಚಿನ ಬೆವರುವಿಕೆ ಮೊದಲಾದ ಸಂದರ್ಭದಲ್ಲಿ ದೇಹ ಕಳೆದುಕೊಂಡಿದ್ದ ನೀರಿನ ಅಂಶವನ್ನು ಮರುಪಡೆಯಲು ಸಹಾ ಈ ನೀರೇ ಅತ್ಯುತ್ತಮವಾಗಿದೆ.

#ಇದರಲ್ಲಿರುವ ಪೋಟಾಷಿಯಂ ನಿಂದ ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆ ಕಡಿಮೆ. ಬಿಪಿ ಹಾಗೂ ಕೊಲೆಸ್ಟ್ರಾಲನ್ನು ಕಡಿಮೆಗೊಳಿಸುತ್ತದೆ. ಯಕೃತ್ತಿ ಹಾಗೂ ಕಿಡ್ನಿ ಸ್ಟೋನ್ ಇರುವವರಿಗೆ ಕೂಡ ಇದು. ಒಳ್ಳೆಯದೂ

#ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದ್ದು ತೂಕ ಇಳಿಕೆಯ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅಗತ್ಯವಿರುವ ಶಕ್ತಿಯನ್ನು ತಕ್ಷಣವೇ ಒದಗಿಸುವುದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ಸೂಕ್ಷ್ಮಜೀವಿಗಳಿಂದ ರಕ್ಷಣೆ ಒದಗಿಸುವುದು,

#ಸಂಧಿವಾತಕ್ಕೂ ಇದು ಉತ್ತಮ ಔಷಧಿ. ಇನ್ನು ಶುಂಠಿಯಲ್ಲಿ ಪೊಟ್ಯಾಶಿಯಮ್, ಮ್ಯಾಗ್ನೀಷಿಯಂ, ಮ್ಯಾಂಗನೀಸ್ ಸಮೃದ್ಧವಾಗಿವೆ. ಜೀರ್ಣಾಂಗವ್ಯೂಹದ ತೊಂದರೆ ನಿವಾರಿಸುವಲ್ಲಿ ಶುಂಠಿ ಪರಿಣಾಮಕಾರಿ. ಇದನ್ನೂ ಎಳನೀರಿನೊಂದಿಗೆ ಸೇವಿಸಬಹುದು. ಹಾಗೆಯೇ ಪಾದರಲವಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಳನೀರಿಗೆ ಬೆರೆಸಿ ಕುಡಿಯಬಹುದು. ಹಾಗೆಯೇ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ಬಲಗೊಳ್ಳುತ್ತದೆ.

#ಇದು ದೇಹದ ದೌರ್ಬಲ್ಯ ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

#ಎಳನೀರು ಸುಮಾರು 600 ಮಿಲಿಗ್ರಾಂ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ, ಅಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group