ನುಗ್ಗೆ ಸೊಪ್ಪಿನ ಈ ಆರೋಗ್ಯ ಪ್ರಯೋಜನ ತಿಳಿಯಿರಿ!

ತೆಂಗಿನಮರದಂತೆಯೇ ನುಗ್ಗೆಯ ಮರದ ಪ್ರತಿಯೊಂದೂ ಭಾಗ ವಿವಿಧ ರೀತಿಯಲ್ಲಿ ನಮಗೆ ಪ್ರಯೋಜನಕಾರಿಯಾಗಿದೆ. ಅಜೀರ್ಣತೆ ಅಥವಾ ಹೊಟ್ಟೆಯಲ್ಲಿ ನೋವು ಇರುವ ವ್ಯಕ್ತಿಗಳಿಗೆ ನುಗ್ಗೆಕಾಯಿಯ ಸೇವನೆ ಉತ್ತಮ ಪರಿಹಾರ ಒದಗಿಸುತ್ತದೆ. ಮಧುಮೇಹಿಗಳಿಗೂ ನುಗ್ಗೆ ಎಲೆಗಳು ಸೂಕ್ತವಾಗಿವೆ. ಮರದ ಕಾಂಡದ ತೊಗಟೆಯ ಬಿರುಕುಗಳಿಂದ ಒಸರುವ ಗೋಂದು ಸಹಾ ಗಾಯಗಳನ್ನು ಮಾಗಿಸಲು ನೆರವಾಗುತ್ತದೆ. ತೊಗಟೆ ಹಲ್ಲುಗಳನ್ನು ಗಟ್ಟಿಗೊಳಿಸಿದರೆ ಎಲೆಗಳಲ್ಲಿರುವ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಹಲವು ರೀತಿಯ ಪೋಷಣೆ ಒದಗಿಸುತ್ತವೆ…
#ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:ನಮ್ಮ ದೇಹದ ಮೇಲೆ ಸತತವಾಗಿ ಧಾಳಿ ಎಸಗುವ ಕ್ರಿಮಿಗಳಿಂದ ರಕ್ಷಣೆ ಪಡೆಯಬೇಕಾದರೆ ನಮ್ಮ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕು. ಈ ಶಕ್ತಿಯನ್ನು ಅತ್ಯುತ್ತಮವಾಗಿರಿಸಬೇಕೆಂದರೆ ನುಗ್ಗೆ ಎಲೆಗಳ ಖಾದ್ಯವನ್ನು ದಿನಕ್ಕೆರಡು ಬಾರಿಯಂತೆ ಸತತವಾಗಿ ನಾಲ್ಕು ವಾರ ಸೇವಿಸಬೇಕು.
#ಕಬ್ಬಿಣಾಂಶದ ಕೊರತೆಯಿಂದ ಪ್ರೌಢಾವಸ್ಥೆಯಲ್ಲಿ ಹಾಗೂ ಮಹಿಳೆಯರಲ್ಲಿ ಕಾಣಬರುವ ಅನೀಮಿಯ ಕಡಿಮೆ ಮಾಡುವಲ್ಲಿ ಒಳ್ಳೆಯ ಔಷಧಿಯಾಗಿ ಕಾರ್ಯ ನಿರ್ವಹಿಸುವುದು.
#ಕಬ್ಬಿಣಾಂಶದ ಕೊರತೆಯಿಂದ ಪ್ರೌಢಾವಸ್ಥೆಯಲ್ಲಿ ಹಾಗೂ ಮಹಿಳೆಯರಲ್ಲಿ ಕಾಣಬರುವ ಅನೀಮಿಯ ಕಡಿಮೆ ಮಾಡುವಲ್ಲಿ ಒಳ್ಳೆಯ ಔಷಧಿಯಾಗಿ ಕಾರ್ಯ ನಿರ್ವಹಿಸುವುದು.
#ನುಗ್ಗೆ ಸೊಪ್ಪಿನಿಂದ ಕ್ಯಾನ್ಸರ್ ಕಾಯಿಲೆಯ ನಿವಾರಣೆ:ಕ್ಯಾನ್ಸರ್ ಒಂದು ಗುಣಪಡಿಸಲಾಗದ ಮಾರಕ ಕಾಯಿಲೆ ಎಂಬುದು ಎಲ್ಲರಿಗೂ ಗೊತ್ತು. ಒಬ್ಬ ಮನುಷ್ಯನಿಗೆ ಒಮ್ಮೆ ಕ್ಯಾನ್ಸರ್ ಬಂತು ಎಂದರೆ ಆ ವ್ಯಕ್ತಿ ಸಾವಿಗೆ ತೀರಾ ಹತ್ತಿರದಲ್ಲಿ ಇದ್ದಾನೆ ಎಂದೇ ಅರ್ಥ. ಆದರೆ ಇಷ್ಟೊಂದು ದುಃಸ್ವಪ್ನವಾಗಿ ಕಾಡುವ ಈ ಕಾಯಿಲೆಗೆ ಇಂದಿಗೂ ಕೂಡ ಔಷಧಿಯೇ ಇಲ್ಲ. ಹಲವಾರು ಸಂಶೋಧನೆಗಳು ಕ್ಯಾನ್ಸರ್ ಕಾಯಿಲೆ ಉಂಟು ಮಾಡುವ ಕೋಶಗಳ ಮೇಲೆ ನಡೆಯುತ್ತಲೇ ಇದ್ದರೂ, ಮನುಷ್ಯನ ದೇಹದಿಂದ ಕ್ಯಾನ್ಸರ್ ಕೋಶಗಳನ್ನು ಶಾಶ್ವತವಾಗಿ ತೆಗೆದು ಹಾಕುವ ಯಾವುದೇ ಪರಿಹಾರ ಇದುವರೆಗೂ ಲಭ್ಯವಾಗಿಲ್ಲ.
#ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಕ:ಅಧಿಕ ರಕ್ತದೊತ್ತಡದ ದೂರುಗಳನ್ನು ಹೊಂದಿರುವ ಜನರಿಗೆ ಡ್ರಮ್ ಸ್ಟಿಕ್ ಎಲೆಗಳು ತುಂಬಾ ಪ್ರಯೋಜನಕಾರಿ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಅದನ್ನು ಆರೋಗ್ಯಕರವಾಗಿಸುತ್ತದೆ.ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಮತ್ತು ದೇಹವನ್ನು ರೋಗ ಮುಕ್ತವಾಗಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ