ದೇಹಕ್ಕೆ ತಂಪೆರೆಯಲು ಸೀಬೆ ಹಣ್ಣಿನ ಜ್ಯೂಸ್ ಕುಡಿಯಿರಿ!

ಸೀಬೆ ಹಣ್ಣಿನ ಜ್ಯೂಸು ಬೇಸಿಗೆ ಬಿಸಿಲಿಗೆ ಮನುಷ್ಯನ ದೇಹದಲ್ಲಿ ಇರುವ ನೀರಿನ ಅಂಶವನ್ನು ಹೆಚ್ಚಿಸುತ್ತದೆ . ಸೀಬೆ ಹಣ್ಣಿನಲ್ಲಿ ವಿಟಮಿನ್ ‘ ಸಿ ‘ ಅಂಶ ಹೇರಳವಾಗಿದ್ದು ದೇಹದ ಜೀರ್ಣ ಶಕ್ತಿಗೆ ಪುಷ್ಟಿ ಕೊಡುತ್ತದೆ . ಕಿತ್ತಳೆ ಹಣ್ಣಿಗೆ ಹೋಲಿಸಿದರೆ ಸೀಬೆ ಹಣ್ಣಿನಲ್ಲಿ ಸುಮಾರು 4 ಪಟ್ಟು ಹೆಚ್ಚು ವಿಟಮಿನ್ ‘ ಸಿ ‘ ಅಂಶವಿದೆ . ಫೈಬರ್ ನ ಅಂಶವೂ ಹೆಚ್ಚಿಗೆ ಇರುವುದರಿಂದ ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ಫ್ಲೇವರ್ ಮತ್ತು ಆರ್ಟಿಫಿಷಿಯಲ್ ಸ್ವೀಟೆನೇರ್ ಹಾಕಿ ತಯಾರಿಸಿದ ಮತ್ತು ಧೀರ್ಘ ಕಾಲದಿಂದ ಶೇಖರಿಸಿದ ಹಣ್ಣಿನ ರಸ ಕುಡಿಯುವುದಕ್ಕಿಂತ ಮನೆಯಲ್ಲೇ ಫ್ರೆಶ್ ಆದ ಸೀಬೆ ಹಣ್ಣುಗಳಿಂದ ಮಾಡಿದ ಜ್ಯೂಸು ಆರೋಗ್ಯದ ರೀತಿಯಲ್ಲಿ ಗಮನಿಸಿದರೆ ಬಹಳ ಒಳ್ಳೆಯದು .
#ಈ ಎಲೆಗಳು ಪ್ರೋಟೀನ್, ವಿಟಮಿನ್ ಸಿ, ಗ್ಯಾಲಿಕ್ ಆಮ್ಲ ಮತ್ತು ಫೀನಾಲಿಕ್ ಸಂಯುಕ್ತಗಳ ಅತ್ಯುತ್ತಮ ಮೂಲವಾಗಿವೆ, ಜೊತೆಗೆ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಸಹ ಇವು ಹೊಂದಿದೆ.
#ಸೀಬೆ ಎಲೆಗಳ ನೀರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ಇದರ ಎಲೆಗಳ ನೀರಿನ ಕಷಾಯವು ಅಧಿಕ ಬಿಪಿ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ.
#ಯಾರು ಈಗಾಗಲೇ ಶೀತ ಮತ್ತು ಕೆಮ್ಮು ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಅಂತಹವರಿಗೆ ಇದು ತುಂಬಾ ಪ್ರಯೋಜನಕಾರಿ. ಸೀಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕ್ರಮೇಣವಾಗಿ ಸೋಂಕುಗಳು ಕೂಡ ಕಡಿಮೆಯಾಗುತ್ತದೆ ಮತ್ತು ಆಂತರಿಕವಾಗಿ ರೋಗನಿರೋಧಕ ಶಕ್ತಿಯ ವೃದ್ಧಿಯಾಗುತ್ತದೆ.
#ವಿಟಮಿನ್ ಎ, ಬಿ ಹಾಗೂ ಸಿ ಮತ್ತು ಪೊಟಾಶಿಯಂ ಅಂಶಗಳನ್ನು ಹೊಂದಿರುವ ಸೀಬೆಕಾಯಿ, ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದಂತೆ. ಇದಕ್ಕಾಗಿ ಸೀಬೆ ಎಲೆಗಳ ಪೇಸ್ಟ್ ಮಾಡಿ, ಅದನ್ನ ಮುಖಕ್ಕೆ ಹಚ್ಚಿ ತೊಳೆದಲ್ಲಿ ಜಿಡ್ಡಿನಾಂಶ ಮಾಯವಾಗಿ ಚರ್ಮ ಬಿಗಿಯಾಗಿ ಕಾಂತಿಯುಕ್ತವಾಗುತ್ತದೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್.
#ಸೀಬೆ ಹಣ್ಣುಗಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಅಪಾರ ಪ್ರಮಾಣದಲ್ಲಿ ಕಂಡುಬಂದರೂ ಕೂಡ ಕ್ಯಾಲೊರಿ ಅಂಶಗಳು ಮಾತ್ರ ನಿಯಂತ್ರಣದಲ್ಲಿ ಉಳಿಯುತ್ತವೆ.