ಕುಂಬಳಕಾಯಿ ಸೇವನೆಯು ಆರೋಗ್ಯಕ್ಕೆ ಎಷ್ಟೂ ಪ್ರಯೋಜನ?

ಕುಂಬಳಕಾಯಿ ಎಂದರೇನೇ ಹಲವರು ದೂರ ಉಳಿಯುತ್ತಾರೆ. ಆದರೆ ಇದೇ ಕುಂಬಳಕಾಯಿ ಸೇವನೆಯಿಂದ ಅತ್ಯುತ್ತಮ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೆಮ್ಮು, ಶೀತ ಮತ್ತು ಹವಾಮಾನದ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳನ್ನು ಕುಂಬಳಕಾಯಿ ಸೇವನೆಯಿಂದ ನಿವಾರಿಸಬಹುದು. ಇದರಲ್ಲಿ ಕ್ಯಾರೋಟಿನ್, ಕ್ಸಾಂಥೈನ್ ಮತ್ತು ಕ್ಸಾಂಥೈನ್‌ನ ಇದ್ದು, ಅದರ ಜೊತೆಗೆ ವಿಟಮಿನ್-ಎ ಕೂಡ ಕಂಡು ಬರುತ್ತವೆ. ಇದು ಸೋಂಕಿನ ವಿರುದ್ಧ ಹೋರಾಡಲು, ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಲು ಮತ್ತು ಅನಾರೋಗ್ಯ ಸಮಸ್ಯೆ ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ ಈಗ ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ ಬನ್ನಿ.
# ಕುಂಬಳಕಾಯಿಯಲ್ಲಿರುವ ಅನೇಕ ಪೋಷಕಾಂಶಗಳಲ್ಲಿ ಹೆಚ್ಚಿನ ಮಟ್ಟದ ಮೆಗ್ನೀಸಿಯಮ್ ಅಂಶವು ರಕ್ತದೊತ್ತಡವನ್ನು ಕಡಿಮೆ ಮಾಡುವ ಅಥವಾ ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಆಹಾರದಲ್ಲಿ ಅತ್ಯಧಿಕ ಮೆಗ್ನೀಸಿಯಮ್ ಸೇರಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡಬಹುದು. ಕುಂಬಳಕಾಯಿ ಬೀಜಗಳು ಹೃದ್ರೋಗ ಮತ್ತು ಪಾರ್ಶ್ವವಾಯುವಿನಂತಹ ಅಪಾಯಕಾರಿ ಕಾಯಿಲೆಗಳಿಂದ ರಕ್ಷಿಸುತ್ತದೆ.
#ಮೂತ್ರವರ್ಧಕವಾಗಿ ಕುಂಬಳ ಕಾಯಿಯ ಬಳಕೆ:ನಿಸರ್ಗದಲ್ಲಿ ಅತ್ಯುತ್ತಮವಾದ ಮೂತ್ರವರ್ಧಕ ಎಂದರೆ ಎಳನೀರು. ಆದರೆ ಎಳನೀರು ಎಲ್ಲಾ ಸಮಯದಲ್ಲಿ ಸಿಗದೇ ಇದ್ದಲ್ಲಿ ಅದರ ಬಳಿಕ ಸ್ಥಾನ ಪಡೆದಿರುವ ಕುಂಬಳ ಕಾಯಿಯನ್ನು ಉಪಯೋಗಿಸಬಹುದು. ಇದರಿಂದ ಶರೀರದಲ್ಲಿರುವ ವಿಷಕಾರಿ ವಸ್ತುಗಳು ಮತ್ತು ಅನಗತ್ಯ ತ್ಯಾಜ್ಯಗಳು ಶೀಘ್ರವಾಗಿ ದೇಹದಿಂದ ಹೊರಹೋಗಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಕುಂಬಳಕಾಯಿ ಒಂದು ನೈಸರ್ಗಿಕವಾದ ನಿರ್ವಿಷಗೊಳಿಸುವ ಆಹಾರವಾಗಿದೆ. ಎಚ್ಚರ: ಬೇಸಿಗೆ ಕಾಲದ ರೋಗ ಹಾವಳಿಯ ಬಗ್ಗೆ ನಿಗಾ ಇರಲಿ!
#ಕುಂಬಳ ಕಾಯಿ ಬೀಜಗಳಿಂದ ಸುಖವಾದ ನಿದ್ದೆ ಬರುತ್ತದೆಉತ್ತಮ ಆರೋಗ್ಯಕ್ಕೆ ಸುಖವಾದ (ಅಂದರೆ ತಡೆರಹಿತವಾದ ಮತ್ತು ಗಾಢವಾದ) ನಿದ್ದೆ ಅವಶ್ಯವಾಗಿದೆ. ನಿದ್ದೆಯ ಕೊರತೆಯಿಂದಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕುಂಬಳಕಾಯಿಯ ಬೀಜಗಳಲ್ಲಿ ಟ್ರಿಪ್ಟೋಫಾನ್ (tryptophan) ಎಂಬ ಅಮೈನೋ ಆಮ್ಲವಿದೆ. ಈ ಆಮ್ಲ ಸುಖವಾದ ನಿದ್ದೆಯನ್ನು ನೀಡಲು ಸಮರ್ಥವಾದ ನೈಸರ್ಗಿಕ ಪೋಷಕಾಂಶವಾಗಿದೆ. ಇದಕ್ಕಾಗಿ ರಾತ್ರಿ ಊಟದ ಬಳಿಕ ಕೆಲವು ಬೀಜಗಳನ್ನು ಸೇವಿಸಿ ಕೊಂಚ ದೂರ (ಸುಮಾರು ಇಪ್ಪತ್ತು ನಿಮಿಷಗಳು) ನಡೆದು ಹಿಂದಿರುಗಿ ಮುಖ ಮತ್ತು ಪಾದಗಳನ್ನು ತಣ್ಣೀರಿನಿಂದ ತೊಳೆದುಕೊಂಡು ಪವಡಿಸುವ ಮೂಲಕ ಕೆಲವೇ ನಿಮಿಷಗಳಲ್ಲಿ ಗಾಢ ನಿದ್ದೆಗೆ ಜಾರಬಹುದು.
#ಕುಂಬಳಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ತುಂಬಾ ಇರುತ್ತವೆ. ಇದು ನಮ್ಮ ದೇಹದಲ್ಲಿ ಇರುವ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ನಮ್ಮ ಡಯೆಟ್ ಲಿಸ್ಟ್ ನಲ್ಲಿ ಹೆಚ್ಚು ಹೆಚ್ಚು ಕುಂಬಳ ಕಾಯಿಯ ಪಲ್ಯ ಹಾಗೂ ಜ್ಯೂಸ್ ಗಳನ್ನು ಸೇರಿಸಿಕೊಂಡರೆ ಒಳ್ಳೆಯದು. ಕುಂಬಳಕಾಯಿ ಸೇವನೆಯಿಂದ ನಾವು ನಮ್ಮ ದೇಹದ ಒತ್ತಡ, ಕೋಪ, ಖಿನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು.