ನಿಮ್ಮ ಕಣ್ಣಿನ ದೃಷ್ಟಿ ಸಮಸ್ಯೆ ನಿವಾರಣೆ ಮಾಡಲು ಇಲ್ಲಿದೆ ಸುಲಭ ಸಲಹೆ!

ಇತ್ತೀಚಿನ ದಿನದಲ್ಲಿ ತುಂಬಾ ಜನರಿಗೆ ದೃಷಿದೋಷದ ಸಮಸ್ಯೆ ಕಾಡುತ್ತಿದೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಕನ್ನಡಕ ಸಮಸ್ಯೆ ಕಂಡು ಬರುತ್ತಿದೆ ಆದರೆ ಹಿಂದಿನ ಕಾಲದ ಜನರಿಗೆ ದೃಷ್ಟಿ ದೋಷದ ಸಮಸ್ಯೆ ಕಂಡು ಬರುತ್ತಿಲ್ಲ ಕಾರಣವೆಂದರೆ ಹಿಂದಿನ ಕಾಲದವರು ಆರೋಗ್ಯಯುತ ಆಹಾರ ಸೇವಿಸುತ್ತಿದ್ದರು ಹಾಗಾಗಿ ದೇಹಕ್ಕೆ ಬೇಕಾದ ವಿಟಮಿನ್ಸ್ ಗಳು ಸಿಗುತ್ತಿತ್ತು ಇದರಿಂದ ದೃಷ್ಟಿ ದೋಷದ ಸಮಸ್ಯೆ ಕಂಡು ಬರುತ್ತಿರಲ್ಲ. ಒಂದು ವೇಳೆ ದೃಷ್ಟಿ ಸಮಸ್ಯೆ ಎದುರು ಆದರೆ ಈ ಉಪಾಯಗಳನ್ನು ಮಾಡಿ!
#ಕಣ್ಣಿನ ವಿಶ್ರಾಂತಿ ಅಗತ್ಯ :ಕಣ್ಣುಗಳನ್ನು ಆರಾಮಗೊಳಿಸಲು ಅತ್ಯುತ್ತಮ ವಿಧಾನಗಳು: ಸರಿಯಾದ ನಿದ್ರೆ . ಪಡೆಯುವುದು ಮತ್ತು 20-20-20 ನಿಯಮವನ್ನು ಅನುಸರಿಸುವುದು.ಅಂದರೆ ಪ್ರತಿ 20 ನಿಮಿಷಕ್ಕೊಮ್ಮೆ ಲ್ಯಾಪ್ ಟಾಪ್ ಪರದೆಯನ್ನು ದಿಟ್ಟಿಸದೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿ ಏನನ್ನೋ ನೋಡಬೇಕು
#ಕಣ್ಣಿನ ವ್ಯಾಯಾಮಗಳು ಸ್ನಾಯುಗಳನ್ನು ಬಲಗೊಳಿಸಲು:ವ್ಯಾಯಾಮ 1: ಕುರ್ಚಿಯ ಮೇಲೆ ಕುಳಿತು. ದೇಹವನ್ನು ವಿಶ್ರಾಂತಿಯಿಂದ ಮತ್ತು ಬೆನ್ನನ್ನು ನೇರವಾಗಿರಿಸಿ. ಒಂದು ಕಣ್ಣನ್ನು ಕೈಯಿಂದ ಮುಚ್ಚಿ. ಒಂದು ಪೆನ್ ತೆಗೆದುಕೊಂಡು ಕಣ್ಣಿನ ಮಟ್ಟಕ್ಕೆ ತನ್ನಿ. ಅದರ ತುದಿಯ ಮೇಲೆ ಗಮನ ಹರಿಸಿ. ಪೆನ್ನನ್ನು ದೂರಕ್ಕೆ ಸರಿಸಿ, ಕಣ್ಣುಗಳಿಗೆ ಹತ್ತಿರವಾಗಿ, ಅದರ ತುದಿಯ ಮೇಲೆ ಗಮನ ವನ್ನು ಕೇಂದ್ರೀಕರಿಸಿ. ಇದನ್ನು ಇನ್ನೊಂದು ಕಣ್ಣಿನಿಂದ ಪುನರಾವರ್ತಿಸಿ. ಪ್ರತಿ ಕಣ್ಣಿಗೆ 5 ರೆಪ್ಸ್ .
#ಸ್ಟ್ರಾಬೆರಿ ಹಣ್ಣು . ಸ್ಟ್ರಾಬೆರ್ರಿಯಲ್ಲಿರುವ ಫ್ಲೆವನಾಯ್ಡ್ಸ್. ಫಿನಾಲಿಕ್. ಪೈಟೊ ಕೆಮಿಕಲ್ಸ್. ಮತ್ತು ಎಲಾಜಿಕ್ ಆ್ಯಸಿಡ್.ಗಳು ಕಣ್ಣಿನ ಸಮಸ್ಯೆ ನಿವಾರಣೆಗೆ ಅತಿ ಉಪಯುಕ್ತವಾಗಿದೆ.
#ನುಗ್ಗೆಸೊಪ್ಪಿನಲ್ಲಿ ಕ್ಯಾಲ್ಸಿಯಂ. ಪೊಟ್ಯಾಸಿಯಂ. ವಿಟಮಿನ್ ಸಿ. ವಿಟಮಿನ್ ಎ ಹೇರಳವಾಗಿ ಇರುವುದರಿಂದ ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು
#ಶುದ್ಧ ಜೇನುತುಪ್ಪವನ್ನು ದಿನಕ್ಕೆ ಒಂದು ಬಾರಿ 1-2 ಹನಿಗಳಷ್ಟು ಕಣ್ಣಿಗೆ ಹಾಕಬೇಕು.
#ಶುದ್ಧ ಹರಳೆಣ್ಣೆಯನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತಲೂ ಮೇಲಿನ ಮತ್ತು ಕೆಳಗಿನ ರೆಪ್ಪೆಗಳಿಗೆ ಲೇಪಿಸಿ ಮಲಗಿದರೆ ಡ್ರೈ ಐ ಸೇರಿದಂತೆ, ಕಣ್ಣಿನ ಉರಿ, ನೋವು. ದೃಷ್ಟಿ ಸಮಸ್ಯೆ ಹೋಗುತ್ತದೆ.
#ಶುದ್ಧ ಗುಲಾಬಿ ಜಲವನ್ನು ಕಂಗಳಿಗೆ 4 ಹನಿಗಳಷ್ಟು ನಿತ್ಯ 1-2 ಬಾರಿ ಹಾಕಿದರೆ ಶೀತಲ ಗುಣದಿಂದಾಗಿ ಕಣ್ಣಿನ ದೋಷಗಳನ್ನು ನಿವಾರಿಸುತ್ತದೆ.
#ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನ ಆಮ್ಲಗಳ ತುಂಬಿಕೊಂಡಿರುವ ಮೀನನ್ನು ಸೇರಿಸಿ.ಸೇವಿಸಿದರೆ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ.
#ಮೊಟ್ಟೆಗಳು ನಿಮ್ಮ ಸರಿಯಾದ ದೃಷ್ಟಿಗೆ ಮತ್ತು ಕುರುಡು ಮಾಡಬಲ್ಲ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
#ಕ್ಯಾರೆಟ್, ಏಪ್ರಿಕಾಟ್ ಮತ್ತು ಬೆರಿಹಣ್ಣುಗಳು ಇಂತಹ ಕಣ್ಣಿನ ಆರೋಗ್ಯ ಹೆಚ್ಚಿಸುವ ಆಹಾರಗಳು ನಿಮ್ಮ ಕಣ್ಣುಗಳಿಗೆ ಪುಷ್ಟಿ ನೀಡುತ್ತವೆ. ಈ ಎಲ್ಲಾ ಆಹಾರಗಳಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಕಣ್ಣುಗಳು ಒಳ್ಳೆಯದು.