ಹೃದಯದ ಆರೋಗ್ಯಕ್ಕೆ ಒಳ್ಳೆಯದು ಈ ಹಣ್ಣುಗಳು!

ಹಣ್ಣುಗಳು ಹೃದಯದ ಆರೋಗ್ಯ ಸುಧಾರಿಸುವ ಶಕ್ತಿ ಹೊಂದಿವೆ. ಏಕೆಂದರೆ ಹಣ್ಣುಗಳು ಎಲ್ಲಾ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹಣ್ಣಿನ ಸೇವನೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ ಆಗಿದೆ. ಇದು ಹೃದಯದ ಆರೋಗ್ಯಕ್ಕೆ ಹಾನಿಕಾರಕ ಅಂಶಗಳನ್ನು ತಡೆಯುತ್ತದೆ. ಅಂತಹ ಹಣ್ಣುಗಳ ಪಟ್ಟಿ ಇಲ್ಲಿವೆ ನೋಡಿ!
#ಕಲ್ಲಂಗಡಿ: ಒಂದು ಬಟ್ಟಲು ಕಲ್ಲಂಗಡಿ ಹಣ್ಣು, ನಿಮ್ಮ ಸಂಜೆಯ ತಿಂಡಿಗೆ ಹೊಸತನವನ್ನು ಕೊಡಬಹುದು
#ಅನಾನಸ್: ಸ್ವಲ್ಪ ಹುಳಿ ಸ್ವಲ್ಪ ಸಿಹಿಯಾಗಿ ಬಹಳ ಸವಿಯಾದ ಈ ಹಣ್ಣನ್ನು ಹಾಗೇ ತಿನ್ನಬಹುದು ಇಲ್ಲವೇ ಜ್ಯೂಸ್ ಮಾಡಿ ಕುಡಿಯಬಹುದು
#ಪರಂಗಿ ಹಣ್ಣು: ಸಲಾಡ್ ಇಲ್ಲವೇ ಆ್ಯಪಟೈಜರ್ ಆಗಿ ತಿನ್ನಲು ಇದಕ್ಕಿಂತ ಸವಿಯಾದ ಹಣ್ಣು
#ಬೇಕೇಪೇರ್: ನಿಮ್ಮ ಹೃದಯ ಹಾಗೂ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, 1 ಸಣ್ಣ ಪೇರ್‌ನಲ್ಲಿರುವ ಪೋಷಕಾಂಶಗಳು ಸಾಕು
#ಬೆರಿಗಳು: ಸ್ಟ್ರಾಬೆರಿ ಹಾಗೂ ಚೆರಿಗಳನ್ನು, ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ನಡುವೆ ಸ್ನ್ಯಾಕ್‌ನಂತೆ ತಿನ್ನಿ
#ಸೇಬು: ದಿನಕ್ಕೊಂದು ಸೇಬು, ಇಡುವುದು ಡಾಕ್ಟರನ್ನು ದೂರ!
#ಕಿತ್ತಳೆ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುವ ಫೈಬರ್ ಪೆಕ್ಟಿನ್ ಇದೆ. ಕಿತ್ತಳೆ ಹಣ್ಣು ಕೊಲೆಸ್ಟ್ರಾಲ್ನ ಆಕ್ಸಿಡೀಕರಣ ತಡೆಯಲು ಸಹಾಯ ಮಾಡುತ್ತದೆ. ಆಕ್ಸಿಡೀಕೃತ ಕೊಲೆಸ್ಟ್ರಾಲ್ ಅಪಧಮನಿಗಳ ಗೋಡೆಗಳಿಗೆ ಅಂಟಿಕೊಳ್ಳುತ್ತದೆ. ಪ್ಲೇಕ್ ಅನ್ನು ರೂಪಿಸುತ್ತದೆ. ಪ್ಲೇಕ್ ಸಣ್ಣ ರಕ್ತನಾಳಗಳಲ್ಲಿ ರಕ್ತದ ಹರಿವನ್ನು ತಡೆಯುತ್ತವೆ. ಹಾಗಾಗಿ ಇದು ದೊಡ್ಡದಾಗಿ ಬೆಳೆದು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣ ಆಗುತ್ತದೆ.
#ಬ್ಲ್ಯಾಕ್ ಬೆರ್ರಿಬ್ಲ್ಯಾಕ್ ಬೆರ್ರಿ ಆಂಥೋಸಯಾನಿನ್ ಹೊಂದಿದೆ. ಅದು ಹೃದಯಕ್ಕೆ ರಕ್ಷಣೆ ನೀಡುತ್ತದೆ. ಬ್ಲ್ಯಾಕ್ ಬೆರ್ರಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಸಮೃದ್ಧ ಮೂಲಗಳಾಗಿವೆ. ಆರೋಗ್ಯಕರ ಹೃದಯರಕ್ತನಾಳದ ವ್ಯವಸ್ಥೆ ಚೆನ್ನಾಗಿರಿಸುತ್ತದೆ.
#ಮಧ್ಯಮ ಗಾತ್ರದ ಸೇಬಿನಲ್ಲಿ ಸರಿಸುಮಾರು 25 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 1 ಗ್ರಾಂ ಪ್ರೋಟೀನ್ ಮತ್ತು ಯಾವುದೇ ಕೊಬ್ಬು ಇರುವುದಿಲ್ಲ. ಅಲ್ಲದೇ ಸೇಬು ಉತ್ತಮ ರೋಗನಿರೋಧಕ ಶಕ್ತಿ ಮತ್ತು ಆರೋಗ್ಯವನ್ನು ಹೊಂದಿದೆ. ಸೇಬಿನಲ್ಲಿ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟುಗಳು, ಫ್ಲೇವನಾಯ್ಡುಗಳು ಹಾಗೂ ಪೋಷಕಾಂಶಗಳಿದ್ದು, ಕ್ಯಾನ್ಸರ್ ಅಭಿವೃದ್ದಿಕೊಳ್ಳುವ, ಹೃದಯದ ಕಾಯಿಲೆ ಹಾಗೂ ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.