ತೂಕ ಇಳಿಸಲು ಸುಲಭವಾದ ತಂತ್ರಗಳು!

ನಾವೀಗ ತೂಕ ಇಳಿಸಲು ಇರುವಂತಹ ಸುಲಭವಾದ ತಂತ್ರಗಳನ್ನು ತಿಳಿಯೋಣ. ಈ ತಂತ್ರಗಳನ್ನು ಪಾಲಿಸುವುದರಿಂದ ನಿಮ್ಮ ಬೊಜ್ಜು ಕರಗುವುದರ ಜೊತೆಗೆ, ಆಹಾರದ ಮೇಲೆ ನಿಮ್ಮ ಪ್ರೀತಿಯು ಹೆಚ್ಚಾಗುತ್ತದೆ. ನಿಮಗೆ ಸರಿಹೊಂದುವ ತಂತ್ರವನ್ನು ಕಂಡುಕೊಳ್ಳಲು, ಇವನ್ನು ಒಂದೊಂದಾಗಿಯೇ ಪಾಲಿಸಿ.

#ವ್ಯಾಯಾಮ: ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರದ ಜೊತೆಗೆ ಲಘು ವ್ಯಾಯಾಮವೂ ಬಹಲ್ ಮುಖ್ಯ. ದೈಹಿಕ ವ್ಯಾಯಾಮ ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳ ಸಹಾಯಕವಾಗಿದೆ

#ಹಣ್ಣಿನ ಜ್ಯೂಸ್ ಕುಡಿಯಬೇಡಿ ಬದಲಾಗಿ ಇಡೀ ಹಣ್ಣನ್ನು ಹಾಗೆಯೇ ತಿನ್ನಿ. ಹಣ್ಣಿನ ಜ್ಯೂಸನ್ನು ಬೇಕಾದರೆ ಮನೆಯಲ್ಲೇ ಮಾಡಿರಲಿ, ಅದು ಸಕ್ಕರೆ ಸೇರಿಸದ ಜ್ಯೂಸ್‌ ಆಗಿರಲಿ ಇಲ್ಲವೇ ಹಣ್ಣಿನ ಸತ್ವ ಕಳೆದುಹೋಗಬಾರದೆಂದು ಸೋಸದೆ ಇರುವ ಜ್ಯೂಸ್‌ ಆದರೂ ಸರಿಯೇ, ಅದನ್ನು ಕುಡಿಯದಿರುವುದೇ ಒಳಿತು. ಹಣ್ಣಿನ ಜ್ಯೂಸ್ ಎಂಬುದು, ಇಡೀ ಹಣ್ಣನ್ನು ಸಂಸ್ಕರಿಸಿ/ಕತ್ತರಿಸಿ-ಹಿಂಡಿದ ಮೇಲೆ ಸಿಗುವ ಪದಾರ್ಥ, ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು, ಜೊತೆಗೆ ನಿಮ್ಮ ದೇಹದ ಒಳಗೆ ಕೊಬ್ಬಿನ ರೂಪದಲ್ಲಿ ಶೇಖರಣೆ ಆಗಬಹುದು

#ಪ್ರೋಟಿನ್‍ಗಳುಡಯಟ್ ಮಾಡುವವರು ದೇಹಕ್ಕೆ ಪ್ರೋಟೀನ್ ಅಗತ್ಯವನ್ನು ಪೂರೈಸುವಲ್ಲಿ ವಿಫಲರಾಗುತ್ತಾರೆ. ಸ್ನಾಯುಗಳ ಬಲ ಮತ್ತು ಆರೋಗ್ಯಕ್ಕೆ ಪ್ರೋಟಿನ್ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ. ಅಲ್ಲದೆ ಹೆಚ್ಚಿನ ಪ್ರೋಟೀನ್ ಆಹಾರವು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

#ದೇಹದ ತೂಕ ಇಳಿಸಲು ಓಟ್ಸ್ ಸೇವಿಸುವುದು ಉತ್ತಮ ಆಯ್ಕೆ. ತೂಕ ಇಳಿಸಲು ಹಲವರು ಪಥ್ಯ ಮಾಡುತ್ತಾರೆ. ಆದರೆ ಆಹಾರ ಪಥ್ಯದಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುವುದಿಲ್ಲ. ಹೀಗಾಗಿ ಪಥ್ಯದ ಜೊತೆಗೆ ಹೆಚ್ಚು ಪೌಷ್ಟಿಕಾಂಶ ಇರುವ ಆಹಾರ ದೇಹಕ್ಕೆ ಹೋಗಬೇಕು. ಇದರಿಂದ ಓಟ್ಸ್ ಒಳ್ಳೆಯ ಆಯ್ಕೆ. ಬೆಳಿಗ್ಗೆ ತಿಂಡಿಗೆ (Break Fast) ಓಟ್ಸ್ ಸೇವಿಸುವುದರಿಂದ ಪದೇ ಪದೇ ಹಸಿವಾಗಲ್ಲ. ಇದರಿಂದ ಮಧ್ಯ ಮಧ್ಯ ಆಹಾರ ಸೇವಿಸುವ ಅಗತ್ಯವೂ ಇರಲ್ಲ

#ಕೊಬ್ಬಿನಾಂಶಗಳು:ನಮ್ಮ ಮೆದುಳಿನ ಚಟುವಟಿಕೆಗೆಗಳಿಗೆ ಕೊಬ್ಬು ಬಹಳ ಮುಖ್ಯವಾಗಿ ಬೇಕಿದೆ. ನಮ್ಮ ಮೆದುಳು ಸಂಪೂರ್ಣ ಕೊಬ್ಬಿನಿಂದಲೇ ನಿರ್ಮಾಣವಾಗಿದೆ. ದೇಹದ ತೂಕಕ್ಕೂ ಕೊಬ್ಬಿನಾಂಶಗಳಿಗೂ ಸಂಬಂಧವಿದೆ. ಹಾರ್ಮೋನುಗಳನ್ನು ಬಿಡುಗಡೆ, ಜೀವಸತ್ವಗಳನ್ನು ಸಂಗ್ರಹಿಸುವುದು ಮತ್ತು ಶಕ್ತಿಯನ್ನು ಒದಗಿಸುವುದರಿಂದ ಕೊಬ್ಬುಗಳು ದೇಹಕ್ಕೆ ಅವಶ್ಯಕ.

#ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ಈ ರೀತಿ ಮಾಡಲು ಸಾಧ್ಯವಾಗದವರು 10 ಸಾವಿರ ಹೆಜ್ಜೆಗಳನ್ನು ನಡೆಯಿರಿ. ಇದರಿಂದ ಬೇಸರವಾಗುತ್ತಿದ್ದರೆ ಬೆಳಿಗ್ಗೆ ನಿಮ್ಮ ಸ್ನೇಹಿತರ ಜೊತೆ ವಾಕಿಂಗ್ ಹೋಗಿ. ಇದರಿಂದ ಮಾತನಾಡುತ್ತಾ ವಾಕ್ ಮಾಡಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group