ಅಗಸೆ ಬೀಜದ ಈ ಆರೋಗ್ಯ ಪ್ರಯೋಜನ ತಿಳಿಯಿರಿ!

ಅಗಸೆ ಬೀಜದ ಉತ್ಪನ್ನಗಳು ಬಟ್ಟೆ ಉದ್ಯಮ ಮತ್ತು ಆಹಾರದಲ್ಲಿ ಮುಖ್ಯ ಘಟಕಾಂಶವಾಗಿದೆ ಸಸ್ಯವಾಗಿ ಬಳಸುವ ಸಸ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಅಗಸೆ ಬೀಜ, ಇದು ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಪ್ರಯೋಜನಗಳನ್ನು ಒದಗಿಸುತ್ತದೆ ಮತ್ತು ಸೌಂದರ್ಯಕ್ಕೆ ಆರೈಕೆ ನೀಡುತ್ತದೆ ಒಂದು ಪ್ರಸಿದ್ಧ ಉತ್ಪನ್ನವು ಹೆಚ್ಚಾಗುವ ಪೋಷಕಾಂಶಗಳನ್ನು ಹೊಂದಿದೆ ಎಂದು ಸಾಬೀತಾಗಿದೆ ಆಗಿಹೋಗಿದೆ. ಈ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಪೂರಕಗಳಾಗಿವೆ ಇದು ಸೇವೆ ಮಾಡುವ ಇತರ ಪ್ರಮುಖ ವಸ್ತುಗಳಿಂದ ಸಮೃದ್ಧವಾಗಿದೆ. ನಿಮ್ಮ ಆರೋಗ್ಯ ಇದನ್ನು ಗುಣಪಡಿಸಲು ಅಗಸೆ ಬೀಜದಿಂದ ನಿಮಗೆ ಹೆಚ್ಚಿನ ಸಹಾಯ ಸಿಗುತ್ತದೆ.
#ನೀರಿನ ಜೊತೆ ಪ್ರತಿ ದಿನ ಸೇವಿಸಿಈ ಬೀಜಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿದ್ದು, ವೈದ್ಯಕೀಯ ಲಾಭಗಳು ಕೂಡ ಸಾಕಷ್ಟಿವೆ.ಇಂದಿಗೂ ಸಹ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅದ್ಭುತ ಬೀಜಗಳು ಎಂದು ಇವು ಹೆಸರಾಗಿವೆ. ಇವು ಮಾನವನ ದೇಹವನ್ನು ಬೆಚ್ಚಗೆ ಮಾಡುತ್ತವೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಇದನ್ನು ಪುಡಿ ಮಾಡಿ ಸೇವಿಸಬಹುದು. ಇದನ್ನು ಹಾಗೆಯೇ ಸೇವಿಸಿದರೆ ಜೀರ್ಣ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ.ಪುಡಿ ಮಾಡಿದ ಅಗಸೆ ಬೀಜಗಳನ್ನು ನೀರಿನ ಜೊತೆ ಪ್ರತಿದಿನವೂ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಒದಗಿಸುತ್ತದೆ. ಇವುಗಳನ್ನು ಸೇವಿಸಿದ ಸಂದರ್ಭದಲ್ಲಿ ತಪ್ಪದೆ ನೀರನ್ನು ಹೆಚ್ಚು ಸೇವಿಸುತ್ತಾ ಇರಿ. ನಿಮಗೆ ಬೇಕಾದಲ್ಲಿ ಇದನ್ನು ಕರಿದುಕೊಂಡು ಸಹ ಸೇವಿಸಬಹುದು.
#ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯಕ:ಆಂಟಿ ಆಕ್ಸಿಡೆಂಟ್‌ಗಳು ಮತ್ತು ಫೈಟೋ ಕೆಮಿಕಲ್‌ಗಳನ್ನು ನೀವು ಆಂಟಿ ಏಜಿಂಗ್ ಕ್ರೀಮ್ ಜಾಹೀರಾತುಗಳು ಬಂದಾಗ ಕೇಳಿರಬಹುದು. ಇವೆಲ್ಲವೂ ನಿಮ್ಮ ಫ್ಲಾಕ್ಸ್ ಬೀಜಗಳಲ್ಲಿ ಹೆಚ್ಚಿನ ಸುಂಕವಿಲ್ಲದೆ ಬರುತ್ತವೆ!. ಇವುಗಳಲ್ಲಿ ಲಿಗನ್‌ಗಳು ಇರುತ್ತವೆ. ಇವು ಕರುಳುಗಳಲ್ಲಿ ಕೆಲಸ ಮಾಡುತ್ತವೆ ಮತ್ತು ಹೆಂಗಸರ ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಇವುಗಳು ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇವು ಸ್ತನ ಕ್ಯಾನ್ಸರ್ ಮತ್ತು ಪೆರಿ ಮೆನೋಫಾಸಲ್ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
#ಅಗಸೆ ಬೀಜ ನಮ್ಮ ದೇಹದ ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ ಹಾಗಾಗಿ ಇದನ್ನ ತಿನ್ನುವುದರಿಂದ ದೇಹದ ಹೆಚ್ಚು ತೂಕವನ್ನು ಕಡಿಮೆ ಮಾಡುತ್ತದೆ. ಬಾಡಿ ಬಿಲ್ಡರ್ಸ್ ಮಸಲ್ಸ್ ಬರಲು ಅಗಸೆಬೀಜ ತಿನ್ನಬೇಕು ಅಗಸೆ ಬೀಜವನ್ನು ತಿನ್ನುತ್ತೇನೆಂದು ಜಾಸ್ತಿ ತಿನ್ನಬಾರದು. ದಿನಕ್ಕೆ ಒಂದು ಬಾರಿ 1 ಸ್ಪೂನ್ ತಿನ್ನಬೇಕು.
#ಅಗಸೆ ಬೀಜಗಳು ದೇಹದ ಕೊಲೆಸ್ಟ್ರಾಲ್(Cholesterol) ಅನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ .ಡಾಕ್ಟರ್ಸ್ ಪ್ರಕಾರ ಪ್ರತಿದಿನ ಅಗಸೆ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು 6 ರಿಂದ 11 ರಷ್ಟು ಕಡಿಮೆ ಮಾಡಬಹುದು. ಇದರಲ್ಲಿ ಹೆಚ್ಚಾಗಿ ಫೈಬರ್ ಮತ್ತು ಲಿಗ್ನಿನ್ ಅಂಶವನ್ನು ಹೊಂದಿರುವುದರಿಂದ ನಮ್ಮ ದೇಹದ ಕೊಲೆಸ್ಟ್ರಾಲ್(Cholesterol) ಅನ್ನು ಅತಿ ಬೇಗ ಕಡಿಮೆಮಾಡುತ್ತದೆ .