ಸುಟ್ಟ ಗಾಯಗಳು ಆದಾಗ ಈ ಮನೆಮದ್ದು ಬಳಸಿ!

ಸಾಮಾನ್ಯವಾಗಿ ಮೂರು ರೀತಿಯ ಚರ್ಮ ಬೊಕ್ಕೆಗಳಿರುತ್ತದೆ. ಮೊದಲನೇಯದು ಮೊದಲನೇ ದರ್ಜೆ ಸುಡುವಿಕೆ. ಸಣ್ಣ ಮಟ್ಟದ ಸುಟ್ಟಗಾಯಗಳು ಚರ್ಮದ ಹೊರಚರ್ಮದ ಪದರದ ಮೇಲೆ ಊತ ಉಂಟುಮಾಡುತ್ತದೆ. ಇಂತಹ ಸುಟ್ಟಗಾಯಗಳನ್ನು ಮನೆಮದ್ದಿನಿಂದ ವಾಸಿಮಾಡಬಹುದು ಮತ್ತು ಇದು ಗಂಭೀರವಾಗಿರುವುದಿಲ್ಲ. ಇತರ ಎರಡೆಂದರೆ ಎರಡನೇ ದರ್ಜೆ ಸುಟ್ಟಗಾಯ ಮತ್ತು ಮೂರನೇ ದರ್ಜೆ ಸುಟ್ಟಗಾಯ. ಇವುಗಳು ಚರ್ಮದ ಅಂಗಾಂಶಗಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದಕ್ಕೆ ಪರಿಣಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಬೇಕು.ಈ ಲೇಖನದಲ್ಲಿ ನಾವು ಮೊದಲನೇ ದರ್ಜೆ ಸುಟ್ಟಗಾಯಗಳನ್ನು ವಾಸಿಮಾಡಬಲ್ಲ ಔಷಧಿ ಬಗ್ಗೆ ಚರ್ಚಿಸುವ. ಇದನ್ನು ಕೆಲವೊಂದು ಮನೆಮದ್ದು ಉಪಯೋಗಿಸಿ ನಿವಾರಿಸಬಹುದು. ಒಳ್ಳೆಯ ಮದ್ದುಗಳು ಇಲ್ಲಿವೆ.
#ಈರುಳ್ಳಿಯನ್ನು ಪೇಸ್ಟ್ ಮಾಡಿ, ರಸವನ್ನು ಬೇರ್ಪಡಿಸಿ, ಈ ರಸವನ್ನು ಸುಟ್ಟ ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ಶಮನವಾಗುತ್ತದೆ.ಕ್ಯಾರೆಟ್‍ರಸ ಮತ್ತು ಅರ್ತ ಪ್ರಮಾಣದಷ್ಟು ನಿಂಬೆ ರಸವನ್ನು ಮಿಶ್ರಣ ಮಾಡಿ ಸುಟ್ಟಗಾಯಗಳಾದ ಜಾಗಕ್ಕೆ ಹಚ್ಚಿದ್ದರೆ ಗಾಯ ಬೇಗನೇ ಗುಣಮುಖವಾಗುತ್ತದೆ.
#ಅಡಿಗೆಗೆ ಬಳಸುವ ಎಣ್ಣೆಗೆ ಸ್ವಲ್ಪ ಪ್ರಮಾಣದಲ್ಲಿ ಪುಡಿ ಉಪ್ಪನ್ನು ಮಿಶ್ರಣ ಮಾಡಿ ಸುಟ್ಟ ಗಾಯಳಾದಾಗ ಜಾಗಕ್ಕೆ ಹಚ್ಚುವುದರಿಂದ ಗಾಯ ಬೇಗನೇ ಕಡಿಮೆಯಾಗುತ್ತದೆ. ಸುಟ್ಟ ಗಾಯಕ್ಕೆ ಗಾಯಕ್ಕೆ ಈ ಮನೆಮದ್ದನ್ನು ಸುಟ್ಟ ಗಾಯಕ್ಕ ಹಾಕಿದರೆ ಸ್ವಲ್ಪ ಉರಿ ಬರುತ್ತದೆ.ಆದರೆ ಗಾಯ ಬೇಗನೇ ವಾಸಿಯಾಗುತ್ತದೆ.
#ಲೋಳೆಸರದ ತಿರುಳು ಮೊದಲ ದರ್ಜೆಯ ಗಾಯಕ್ಕೆ ಈ ತಿರುಳು ಅತ್ಯುತ್ತಮ ಪರಿಹಾರವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ ಈ ತಿರುಳನ್ನು ಎರಡನೆಯ ದರ್ಜೆಯ ಗಾಯಗಳಿಗೂ ಹಚ್ಚಬಹುದು. ಲೋಳೆಸರ ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ಈ ಗುಣ ಉರಿಯುತ್ತಿರುವ ಗಾಯವನ್ನು ತಣಿಸಿ ಉರಿಯನ್ನು ಇಲ್ಲವಾಗಿಸುತ್ತದೆ. ಅಲ್ಲದೇ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಇದಕ್ಕಾಗಿ ತಾಜಾ ಲೋಳೆಸರದ ಕೋಡೊಂದನ್ನು ತೆರೆದು ತಿರುಳನ್ನು ಸಂಗ್ರಹಿಸಿ ನೇರವಾಗಿ ಸುಟ್ಟಭಾಗದ ಮೇಲೆ ಹಚ್ಚಬೇಕು.
#ಇನ್ನು ಮನೆಯಲ್ಲಿ ಜೇನು ತುಪ್ಪ ಅಥವಾ ಅಲೋವಿರಾ ಜೆಲ್ಗಳಿದ್ದರೆ ಸುಟ್ಟಗಾಯಗಳಾದಾಗ ಮನೆ ಮದ್ದಾಗಿ ಬಳಸಿಕೊಳ್ಳಬಹುದು. ಜೇನಿನಲ್ಲಿರುವ ಔಷಧೀಯ ಅಂಶಗಳು ಸುಟ್ಟಗಾಯಗಳನ್ನೂ ಸರಿಪಡಿಸಿ ಹೊಸಚರ್ಮ ಬೆಳೆಯಲು ನೆರವಾಗುತ್ತವೆ
#ನಿಂಬೆ ಮತ್ತು ಟೊಮೆಟೋ ರಸವು ನಿಜಕ್ಕೂ ಸಹಾಯ ಮಾಡುತ್ತದೆ. ನಿಧಾನವಾಗಿ ಸುಟ್ಟ ಗಾಯದ ಮೇಲಿನ ಸತ್ತ ಚರ್ಮವನ್ನು ತೆಗೆಯುತ್ತದೆ ಮತ್ತು ಹೊಸ ಚರ್ಮದ ಹುಟ್ಟುವಿಕೆಗೆ ನೆರವಾಗುತ್ತದೆ. ನಿಂಬೆಯಲ್ಲಿ ಆಸಿಡಿಕ್ ಗುಣಗಳಿವೆ ಇವು ಕಲೆ ನಿವಾರಕವಾಗಿ ಕೆಲಸ ಮಾಡುತ್ತದೆ. ತಾಜಾವಾಗಿ ರಸ ತೆಗೆದ ಟೊಮೆಟೋ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ ಮತ್ತು ಸುಟ್ಟ ಕಲೆಗಳನ್ನು ನಿವಾರಿಸುತ್ತದೆ