ಕೆಸುವಿನ ಎಲೆಗಳ ಈ ಅದ್ಭುತ ಪ್ರಯೋಜನ ತಿಳಿಯಿರಿ!

ಕರಾವಳಿ ಭಾಗದಲ್ಲಿ ಅದೂ ಈ ಮಳೆಗಾಲದಲ್ಲಿ ಹೆಚ್ಚಾಗಿ ಸಿಗಲ್ಪಡುವ ಗಿಡ ಈ ಕೆಸು. ಕೆಸುವಿನ ಎಲೆ, ದಂಟು, ಗಡ್ಡೆ ಹೀಗೆ ಪ್ರತಿಯೊಂದು ಕೂಡ ತಿನ್ನೋದಕ್ಕೆ ಎಷ್ಟು ರುಚಿಯೋ ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯದು. ಕೆಸುವಿನಲ್ಲಿ, ಕರಿ ಕೆಸು, ಬೆಳಿ ಕೆಸು, ಉದ್ದನೆಯ ಕೆಸು, ಮರಗೆಸು ಹೀಗೆ ಸಾಕಷ್ಟು ವಿಧಗಳಿವೆ. ಈ ಎಲ್ಲವೂ ಒಂದಿಲ್ಲೊಂದು ಅಡುಗೆಯಲ್ಲಿ ಬಳಸಬಹುದಾಗಿದೆ. ಇದರ ಪ್ರಯೋಜನಗಳನ್ನು ಹೀಗ ತಿಳಿಯೋಣ ಬನ್ನಿ!
#ತೂಕ ಇಳಿಕೆಗೆ ಕೂಡ ಕೆಸು ಅತ್ಯುತ್ತಮ ಆಹಾರ. ಕೆಸು ತಿಂದರೆ ಬೇಗ ಹಸಿವು ಆಗುವುದಿಲ್ಲ ಹಾಗಾಗಿ ನಾವು ದಿನದಲ್ಲಿ ಸೇವಿಸುವ ಕ್ಯಾಲೋರಿ ಪ್ರಮಾಣ ಕಡಿಮೆ ಆಗುತ್ತದೆ. ಕೆಸುವಿನ ದಂಟಿನಲ್ಲಿ ವಿಟಮಿನ್ ಸಿ ಅಂಶವಿದೆ ಇದು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ನೆರವಾಗುತ್ತದೆ. ಅಲ್ಲದೇ ಮಧುಮೇಹಿಗಳೂ ಕೂಡ ಕೆಸುವನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿನಬಲ್ಲ ಕೆಸು, ಚರ್ಮದ ಸುಕ್ಕು ನಿವಾರಿಸಲು ಕೂಡ ಸಹಾಯಕ. ಕೆಸುವಿನ ದಂಟನ್ನು ಇದಕ್ಕಾಗಿ ಬಳಸಬಹುದು. ಕೆಸುವಿನಲ್ಲಿರುವ ನಾರಿನಾಂಡ ದೇಹದ ಜೀರ್ಣಕ್ರಿಯೆಯನ್ನೂ ಕೂಡ ಸುಲಭಗೊಳಿಸುತ್ತದೆ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ಕೆಸುವನ್ನು ಆಗಾಗ್ಗೆ ಸೇವಿಸುವುದು ಅತ್ಯಂತ ಒಳ್ಳೆಯದು
#ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ನಿವಾರಣೆ ಮಾಡಿ ಅನಿಮಿಯ ಸಮಸ್ಯೆಯನ್ನು ದೂರ ಮಾಡುವಲ್ಲಿ ಕೆಸವೆ ದಂಟಿನ ಮಹತ್ತರ ಪಾತ್ರವನ್ನು ಮರೆಯುವಂತಿಲ್ಲ.
#100ಗ್ರಾಂ ಕೆಸುವಿನ ಎಲೆಯಲ್ಲಿ 100ಕ್ಯಾಲೋರಿ, 70ಗ್ರಾಂ ನೀರು, 2.2ಗ್ರಾಂ ಪ್ರೊಟೀನ್, 0.1 ಗ್ರಾಂ ಲಿಪಿಡ್ ಫ್ಯಾಟ್, 23ಗ್ರಾಂ ಕಾರ್ಬೋಹೈಡ್ರೇಟ್ಸ್, 1.9 ಗ್ರಾಂ ಡಯಟರಿ ಫೈಬರ್, 38 ಮಿಗ್ರಾಂ ಕ್ಯಾಲ್ಸಿಯಂ, 0.8 ಮಿಗ್ರಾಂ ಕಬ್ಬಿಣದಂಶ, 52 ಮಿಗ್ರಾಂ ಮೆಗ್ನಿಷ್ಯಿಯಂ, 267 ಮಿಗ್ರಾಂ ಪೊಟಾಷ್ಯಿಯಂ, 30 ಮಿಗ್ರಾಂ ಸೋಡಿಯಂ, 1.6 ಮಿಗ್ರಾಂ ಸತುವಿನಂಶವಿದೆ. ಅಲ್ಲದೆ ಇದರಲ್ಲಿ ವಿಟಮಿನ್‌ಗಳಾದ 0.02 ಮಿಗ್ರಾಂ ವಿಟಮಿನ್ ಬಿ1, 0.02 ಮಿಗ್ರಾಂ ವಿಟಮಿನ್ ಬಿ2, ವಿಮಿನ್ ಸಿ ಹಾಗೂ ವಿಟಮಿನ್ ಇ ಅಂಶಗಳಿವೆ.
#ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತದೆದೇಹದಲ್ಲಿ ಕಶ್ಮಲಗಳು ಹೆಚ್ಚಾದಾಗ ದೇಹದಲ್ಲಿ ಫ್ರೀ ರ‍್ಯಾಡಿಕಲ್ ಸಂಗ್ರಹವಾಗುತ್ತಾ ಸಾಗುತ್ತದೆ. ಇದರಿಂದಾಗಿ ಹೃದಯ ತೊಂದರೆ, ಸಂಧಿವಾತ, ಕ್ಯಾನ್ಸರ್ ಮುಂತಾದ ಸಮಸ್ಯೆ ಉಂಟಾಗುವುದು. ಫ್ರೀ ರ‍್ಯಾಡಿಕಲ್ಸ್ ಆಹಾರ ವಿಭಜನೆ ಆಗುವಾಗ ಅಥವಾ ತಂಬಾಕು, ಧೂಮಪಾನ ಅಥವಾ ವಿಕಿರಣಗಳು ಸೋಕಿದಾಗ ಉಂಟಾಗುತ್ತದೆ.
#ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು:ವಿಟಮಿನ್ ಇ ವಯಸ್ಸಾದಾಗ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಬೀಟಾ ಕೆರೋಟಿನ್, ವಿಟಮಿನ್ ಸಿ, ಸತು ಈ ಅಂಶಗಳು ದೃಷ್ಟಿ ದೋಷ ಉಂಟಾಗುವುದನ್ನು ತಡೆಗಟ್ಟುವಲ್ಲಿ ಸಹಕಾರಿ. ವಿಟಮಿನ್ ಎ ಮತ್ತು ವಿಟಮಿನ್ ಇ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.
#ಸ್ನಾಯು ಸೆಳೆತ ತಡೆಗಟ್ಟುತ್ತದೆ:ಮೆಗ್ನಿಷ್ಯಿಯಂ ಬೆನ್ನು ನೋವು ಕಡಿಮೆ ಮಾಡುತ್ತದೆ. ಕಿಡ್ನಿಗೆ ಒತ್ತಡ ಬೀಳದಂತೆ ತಡೆಗಟ್ಟುತ್ತದೆ, ಸ್ನಾಯುಗಳ ನರಗಳ ಆರೋಗ್ಯ ವೃದ್ಧಿಸುತ್ತದೆ. ಮೆಗ್ನಿಷ್ಯಿಯಂ ಕೊರತೆ ಉಂಟಾದರೆ ತಲೆಸುತ್ತು, ಕಾಲುಗಳಲ್ಲಿ ಸ್ನಾಯು ಸೆಳೆತ ಮುಂತಾದ ಸಮಸ್ಯೆ ಕಮಡು ಬರುವುದು.
#ಹೀಮೋಗ್ಲೋಬಿನ್ ಉತ್ಪತ್ತಿಗೆ ಸಹಕಾರಿ:ದೇಹದಲ್ಲಿ ಹೀಮೋಗ್ಲೋಬಿನ್ ಉತ್ಪತ್ತಿಗೆ ಕಬ್ಬಿಣದಂಶ ಅವಶ್ಯಕ. ಕಬ್ಬಿಣದಂಶ ರಕ್ತಹೀನತೆ ಸಮಸ್ಯೆ ಉಂಟಾಗದಂತೆ ತಡೆಗಟ್ಟುವಲ್ಲಿ ಸಹಕಾರಿ.