ಬಾಯಿಯ ದುರ್ಗಂಧ ಸಮಸ್ಯೆಯನ್ನು ನಿವಾರಿಸಲು ಇವು ಸಹಾಯಕ!

ಇದು ಪ್ರತಿಯೊಬ್ಬರೂ ಎದುರಿಸುವ ಸಾಮಾನ್ಯ ಸಮಸ್ಯೆ (Problem). ಆದರೆ ಪರಿಸ್ಥಿತಿ ಬಿಗಡಾಯಿಸುವುದು (Critical) ಯಾವಾಗ ಗೊತ್ತಾ, ಈ ಸಮಸ್ಯೆ ಇನ್ನೂ ಮುಂದುವರೆದು ನೀವು ಯಾವುದೋ ಮೀಟಿಂಗ್ನಲ್ಲಿ (Meeting) ಪಾಲ್ಗೊಳ್ಳುತ್ತಿರುವಾಗ, ಸ್ನೇಹಿತರೊಂದಿಗೆ ಅಥವಾ ಇನ್ನು ಯಾವುದೇ ವ್ಯಕ್ತಿಯೊಂದಿಗೆ ಮಾತನಾಡುವಾಗ ವಾಸನೆ ಹೊರಹೊಮ್ಮುತ್ತಿದೆ ಅಂದಾಗ. ಇದು ನಿಮ್ಮನ್ನು ಆತಂಕಕ್ಕೆ ತಳ್ಳುತ್ತದೆ ಮತ್ತು ಮಾತನಾಡಲು ಹಿಂಜರಿಯುವಂತೆ ಮಾಡುತ್ತದೆ. ಆದರೆ ಈ ಸಮಸ್ಯೆಗೆ ಸುಲಭ ಪರಿಹಾರವಿದೆ.
#ಆಹಾರ ಬದಲಾಯಿಸಿ:ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮೊದಲಾದ ಮಸಾಲೆ ಪದಾರ್ಥ, ಸಕ್ಕರೆಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆಗೊಳಿಸಿ. ಆ್ಯಪಲ್, ಮೊಸರಿನಂತಹ ಪದಾರ್ಥಗಳನ್ನು ಬೆಳಗ್ಗಿನ ಆಹಾರದೊಂದಿಗೆ ಸೇವಿಸುವುದರಿಂದ ಬಾಯಿ ವಾಸ ನೆಯನ್ನು ತಡೆಗಟ್ಟಬಹುದು.
#ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸುವುದನ್ನು ರೂಢಿ ಮಾಡಿಕೊಳ್ಳಿ. ಉಗುರು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದು ಹಲ್ಲು, ಬಾಯಿ ಹಾಗೂ ಗಂಟಲು ಸ್ವಚ್ಛತೆಗೆ ಅನುಕೂಲ. ಇಲ್ಲದಿದ್ದರೆ ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗುವ ಮೌಥ್ ವಾಷ್ ಗಳನ್ನು ಉಪಯೋಗಿಸಬಹುದು.
#ನಿಂಬೆ ಹಣ್ಣಿನ ರಸ ಮತ್ತು ಉಪ್ಪು, ಹುಣಸೆ ಹಣ್ಣಿನ ರಸದಲ್ಲಿ ಬಾಯಿ ಸ್ವಚ್ಛಗೊಳಿಸಬಹುದು.– ಬಾಯಿಯ ದುರ್ಗಂಧ ಮುಕ್ತಿಗೆ ಇದು ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ.
#ತಂಬಾಕು ಸೇವನೆ, ಧೂಮಪಾನ ಮಾಡುವುದರಿಂದ ಬಾಯಿಯ ವಾಸನೆ ಕೆಲವರಲ್ಲಿ ಸ್ವಚ್ಛಗೊಳಿಸಿದರೂ ಹಾಗೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ
#ಪ್ರತಿನಿತ್ಯ 2 ಲವಂಗ ಮತ್ತು ಒಂದು ಏಲಕ್ಕಿಯನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
#ಉಪ್ಪುನೀರು (Salt water)ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿಕೊಂಡು ಬಾಯಿ ಮುಕ್ಕಳಿಸುವುದರಿಂದ (Gargle) ಬಾಯಿಂದ ಹೊರ ಹೊಮ್ಮುವ ದುರ್ವಾಸನೆಯನ್ನು ಖಂಡಿತವಾಗಿಯೂ ನಿವಾರಣೆ ಮಾಡಿಕೊಳ್ಳಬಹುದು. ಬರೀ ಬಾಯಿ ವಾಸನೆ ಅಷ್ಟೇ ಅಲ್ಲ, ನಿಮಗೆ ಸ್ವಲ್ಪ ಗಂಟಲಿನಲ್ಲಿ ಕಿರಿಕಿರಿ ಅಥವಾ ಗಂಟಲು ನೋವು ಕಾಣಿಸಿಕೊಳ್ಳುತ್ತದೆ ಎಂದಾಗ ಬೆಚ್ಚಗಿನ ಉಪ್ಪು ನೀರನ್ನು ಗಂಟಲಿನ ಭಾಗದಲ್ಲಿ ಹಾಕಿ ಮುಕ್ಕಳಿಸುವುದರಿಂದ ಈ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
#ದಾಲ್ಚಿನ್ನಿಯ ತೊಗಟೆ (Cinnamon bark)ಇದನ್ನಂತೂ ನೀವು ಪ್ರತಿನಿತ್ಯ ಅಡುಗೆ ಮಾಡಲು ಬಳಸುತ್ತೀರ. ಮಸಾಲೆಯುಕ್ತ ಪದಾರ್ಥಗಳಿಗೆ ದಾಲ್ಚಿನ್ನಿ ಬಳಸಿದರೆ ರುಚಿ ಹೆಚ್ಚುವುದು. ಅಷ್ಟೇ ಅಲ್ಲ, ಇದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ. ದುರ್ಗಂಧ ಬೀರುವ ರೋಗಾಣುಗಳನ್ನು ದಾಲ್ಚಿನ್ನಿ ಸಂಪೂರ್ಣ ನಿವಾರಣೆ ಮಾಡುತ್ತದೆ. ಇದಕ್ಕಾಗಿ ನೀವು ಬಹಳ ಸರಳ ಕೆಲಸ ಮಾಡಬೇಕು. ದಾಲ್ಚಿನ್ನಿಯ ಸಣ್ಣ ತುಂಡೊಂದನ್ನು ಬಾಯಿಯಲ್ಲಿ ಸ್ವಲ್ಪ ಸಮಯದ ಕಾಲ ಇಟ್ಟುಕೊಳ್ಳಿ, ನಂತರ ಇದನ್ನು ಉಗಿಯಿರಿ. ಅಷ್ಟೇ, ಅಲ್ಲಿಗೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.