ನಿಮ್ಮ ಕಣ್ಣಿನ ಹುಬ್ಬು ಉದರದೆ ಇರಲು ಇಲ್ಲಿವೆ ಮನೆಮದ್ದು!

ಹುಬ್ಬಿಗೆ ಒಂದೊಳ್ಳೆ ಆಕಾರ ಕೊಡುವವರು ಬ್ಯೂಟಿಷನ್ ಗಳು. ಆದರೆ ಅವರು ಕೂದಲನ್ನು ಥ್ರೆಡ್ಡಿಂಗ್ ಮಾಡುವಾಗ ಕೆಲವರಿಗೆ ಆ ನೋವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಮನೆಯಲ್ಲಿಯೇ ಪ್ಲಕ್ಕಿಂಗ್ ಮಾಡುತ್ತಾರೆ. ಹೀಗೆ ಕೂದಲನ್ನು ಪ್ಲಕ್ಕಿಂಗ್, ಥ್ರೆಡ್ಡಿಂಗ್ ಮಾಡುವಾಗ ಕೂದಲನ್ನು ಪದೆ ಪದೆ ಎಳೆದು ಕೂದಲಿನ ಕಿರುಚೀಲಗಳು ಶಾಶ್ವತವಾಗಿ ಹಾನಿಗೊಳಗಾಗುತ್ತವೆ. ಹೊಸ ಕೂದಲು ಹುಟ್ಟುವುದಿಲ್ಲ. ಅಂತಹ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ ನೋಡಿ!
#ಒತ್ತಡ:ಒತ್ತಡದಿಂದಾಗಿ ತಲೆ ಕೂದಲು ಉದುರುವಂತೆ ಹುಬ್ಬುಗಳ ಕೂದಲು ಕೂಡ ಉದುರಲು ಆರಂಭವಾಗುವುದು. ಮಾನಸಿಕ ಅಥವಾ ದೈಹಿಕ ಒತ್ತಡ ಏನೇ ಆಗಿದ್ದರೂ ಹುಬ್ಬುಗಳ ಕೂದಲು ಉದುರುವುದು. ಅಂತಹ
#ಹರಳೆಣ್ಣೆಯಲ್ಲಿ ಕ್ಯೂ ಟಿಪ್ ನ್ನು ಮುಳುಗಿಸಿ *ಈ ನೈಸರ್ಗಿಕ ಎಣ್ಣೆಯನ್ನು ನಿಮ್ಮ ಕಣ್ಣುಗಳ ಹುಬ್ಬಿನ ಸುತ್ತಲು ಹಚ್ಚಿ. *40-45 ನಿಮಿಷ ಕಾಲ ಹಾಗೆ ಬಿಡಿ. *ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ.*lದಿನದಲ್ಲಿ ಒಂದು ಸಲ ಬಳಸಿದರೆ ಹುಬ್ಬಿನ ಕೂದಲು ಬೆಳೆಯುವುದು.
#ಈರುಳ್ಳಿ ರಸ:ಒಂದು ಈರುಳ್ಳಿ ರಸ ತೆಗೆಯಿರಿ. *ಈ ರಸದಲ್ಲಿ ಕ್ಯೂ ಟಿಪ್ ಮುಳುಗಿಸಿ* ಹುಬ್ಬುಗಳಿಗೆ ಸರಿಯಾಗಿ ಈ ರಸ ಹಚ್ಚಿಕೊಳ್ಳಿ.*20 ನಿಮಿಷ ಕಾಲ ಇದನ್ನು ಹಾಗೆ ಬಿಡಿ. *ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ತೊಳೆಯಿರಿ.*ಹುಬ್ಬಿನ ಕೂದಲು ಬೇಗನೆ ಬೆಳೆಯಬೇಕು ಎಂದಾದರೆ ವಾರದಲ್ಲಿ 4-5 ಸಲ ಇದನ್ನು ಬಳಸಲು ಮರೆಯಬೇಡಿ.
#ಅಲೋವೆರಾ:ಅಲೋವೆರಾ ಜೆಲ್ ಎಲೆಯನ್ನು ನೇರವಾಗಿ ಬಳಸುವುದರಿಂದ ಕೂದಲಿನ ಕಿರುಚೀಲಗಳು ಮತ್ತೆ ಬೆಳೆಯಲು ಸಹಾಯವಾಗುತ್ತದೆ. ಅಲೋವೆರಾ ಎಲೆಯಿಂದ ಜೆಲ್ ತೆಗೆಯಿರಿ ಅಥವಾ ನಿಮ್ಮ ಸ್ಥಳೀಯ ಔಷಧಿ ಅಂಗಡಿಯಲ್ಲಿ ಸಿಗುವ ಸಾವಯವ ಅಲೋವೆರಾ ಜೆಲ್ ಬಳಸಿ. ಹುಬ್ಬುಗಳಿಗೆ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. 30 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
#ಮೆಂತೆ ಕಾಳುಗಳು: 1/2 ಚಮಚ ಮೆಂತೆ ಕಾಳುಗಳನ್ನು ಹುಡಿ ಮಾಡಿ 2 ಚಮಚ ನೀರು ಹಾಕಿ ಅದರ ಪೇಸ್ಟ್ ಮಾಡಿಕೊಳ್ಳಿ. *ಈ ಪೇಸ್ಟ್ ನ್ನು ಹುಬ್ಬುಗಳ ಮೇಲೆ ಹಚ್ಚಿಕೊಳ್ಳಿ.*40-45 ನಿಮಿಷ ಕಾಲ ಹಾಗೆ ಬಿಡಿ.*ಬಳಿಕ ಉಗುರುಬೆಚ್ಚಗಿನ ನೀರು ಮತ್ತು ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ.* ವಾರದಲ್ಲಿ 3-4 ಸಲ ಇದನ್ನು ಬಳಸಿದರೆ ಫಲಿತಾಂಶ ಖಚಿತ