ಬಾಳೆಹಣ್ಣಿನ ಸಿಪ್ಪೆಯನ್ನು ತಿಂದ್ರೆ ಸಿಗೋ ಪ್ರಯೋಜನಗಳು

ಪ್ರತಿದಿನ ಬಾಳೆಹಣ್ಣು (Banana) ತಿನ್ನುವುದರಿಂದ ಅಸಂಖ್ಯಾತ ಪ್ರಯೋಜನಗಳಿವೆ (Benefits) ಎಂದು ನಮಗೆಲ್ಲರಿಗೂ ತಿಳಿದಿದೆ. ಬಾಳೆಹಣ್ಣು ತಿಂದ ನಂತರ ಹೆಚ್ಚಿನವರು ಬಾಳೆಹಣ್ಣಿನ ಸಿಪ್ಪೆ (Banana Peel) ಸುಲಿದು ಬಿಟ್ಟು ಹೋಗುತ್ತಾರೆ. ಆದರೆ ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನಗಳನ್ನು ಒಮ್ಮೆ ತಿಳಿದರೆ ಅದನ್ನು ಬಿಸಾಡುವುದಿಲ್ಲ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಕೂಡ ಸಮೃದ್ಧವಾಗಿವೆ, ಈ ಸಿಪ್ಪೆಗಳಲ್ಲಿ ಆ್ಯಂಟಿ ಫಂಗಲ್ ಕಾಂಪೌಂಡ್, ಆ್ಯಂಟಿಬಯೋಟಿಕ್, ನಾರಿನಂಶ, ಪೋಷಕಾಂಶಗಳು ಮತ್ತು ಆರೋಗ್ಯವನ್ನು ಉತ್ತೇಜಿಸುವ ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಒಳಗಿನ ಚರ್ಮದ ಬಿಳಿ ಭಾಗವನ್ನು ನಾವು ತಿನ್ನಬಹುದು. ಇದನ್ನು ಕೇಳಿ ಆಶ್ಚರ್ಯವಾದರೂ ಸತ್ಯ. ಈ ಬಾಳೆಹಣ್ಣಿನ ಸಿಪ್ಪೆಯನ್ನು (Banana Peel benefits) ತಿಂದ್ರೆ ಯಾವೆಲ್ಲಾ ಪ್ರಯೋಜನ ಸಿಗುತ್ತದ ಎಂಬುದು ಇಲ್ಲಿದೆ.

#ಬಾಳೆ ಹಣ್ಣಿನ ಸಿಪ್ಪೆ ತಿನ್ನಬಹುದೇ?ಸಾಮಾನ್ಯವಾಗಿ ಒಂದು ಬಾಳೆ ಹಣ್ಣನ್ನು ತೆಗೆದುಕೊಂಡರೆ ಹಣ್ಣಿಗೂ ಮತ್ತು ಸಿಪ್ಪೆಗೂ ಬಹಳ ವ್ಯತ್ಯಾಸ ವಿರುತ್ತದೆ. ಬಾಳೆಹಣ್ಣು ನೋಡಲು ಬೆಳ್ಳಗೆ, ತಿನ್ನಲು ಸಿಹಿಯಾಗಿ ಮತ್ತು ಮೃದುವಾಗಿರುತ್ತದೆ. ಅದೇ ಅದರ ಸಿಪ್ಪೆ ಮಾತ್ರ ಮುಟ್ಟಲು ಗಟ್ಟಿಯಾಗಿ, ನಾರಿನ ಅಂಶದಿಂದ ಕೂಡಿ ಮತ್ತು ತಿನ್ನಲು ಸ್ವಲ್ಪ ಕಹಿಯಾಗಿ ಗೋಚರ ವಾಗುತ್ತದೆ. ಹಾಗೆಂದು ಬಾಳೆ ಹಣ್ಣಿನ ಸಿಪ್ಪೆಯನ್ನು ತಿನ್ನುವುದನ್ನು ಬಿಟ್ಟೆವು ಎಂದರೆ ಖಂಡಿತ ನಮ್ಮ ದೇಹಕ್ಕೆ ಸಹಕಾರಿಯಾಗಿರುವ ಅನೇಕ ರೀತಿಯ ಪೋಷಕಾಂಶಗಳನ್ನು ನಾವೇ ನಮ್ಮ ಕೈಯಾರೆ ಬಿಟ್ಟು ಕೊಡುತ್ತಿದ್ದೇವೆ ಎಂದೇ ಅರ್ಥ. ಹಾಗೆಂದು ಬಾಳೆ ಹಣ್ಣಿನ ಸಿಪ್ಪೆಯನ್ನು ಹಾಗೇ ತಿನ್ನುವುದಕ್ಕೆ ಕೂಡ ಆಗುವುದಿಲ್ಲ. ಇದನ್ನು ತಿನ್ನಬೇಕಾದರೆ ಬ್ಲೆಂಡರ್ ನಲ್ಲಿ ಚೆನ್ನಾಗಿ ರುಬ್ಬಿ ಪೇಸ್ಟ್ ನ ರೀತಿಯಲ್ಲಿ ತಯಾರು ಮಾಡಿ, ಅಥವಾ ಎಣ್ಣೆಯಲ್ಲಿ ಕರಿದು ಅಥವಾ ಚೆನ್ನಾಗಿ ಬೇಯಿಸಿ ಇಲ್ಲವೆಂದರೆ ನೀರಿನಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ನಂತರ ಬೇಕಾದರೆ ತಿನ್ನಬಹುದು

#ಬಾಳೆಹಣ್ಣಿನ ಸಿಪ್ಪೆಯ ಸ್ಕ್ರಬ್ಬರ್ : ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾರಕ್ಕೊಮ್ಮೆಯಾದರೂ ಸ್ಕ್ರಬ್ ಅನ್ನು ಬಳಸುವುದು ನಿಜವಾಗಿಯೂ ಮುಖ್ಯವಾಗಿದೆ. ಏಕೆಂದರೆ ಇದು ಯಾವುದೇ ರೀತಿಯ ಶುಷ್ಕತೆಯಿಂದ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಸಹಾಯ ಮಾಡುತ್ತದೆ. ಅರಿಶಿನದೊಂದಿಗೆ ಬಾಳೆಹಣ್ಣಿನ ಸಿಪ್ಪೆಯು ಸೂಪರ್ ಪರಿಣಾಮಕಾರಿ ಸ್ಕ್ರಬ್ ಅನ್ನು ರೂಪಿಸುತ್ತದೆ. ಒಂದೆಡೆ, ಬಾಳೆಹಣ್ಣಿನ ಸಿಪ್ಪೆಗಳು ಪ್ರೋಟೀನ್, ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಟನ್‌ಗಳಷ್ಟು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತವೆ, ಇದು ನಿಮ್ಮ ಚರ್ಮವನ್ನು ಪೋಷಣೆ ಮತ್ತು ಪೂರಕವಾಗಿರಿಸುತ್ತದೆ. ಮತ್ತೊಂದೆಡೆ, ಅರಿಶಿನವು ಕಂದುಬಣ್ಣವನ್ನು ಕಡಿಮೆ ಮಾಡಲು, ಮೊಡವೆಗಳ ವಿರುದ್ಧ ಹೋರಾಡಲು, ಹಗುರಗೊಳಿಸಲು ಮತ್ತು ಸತ್ತ ಚರ್ಮವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.

#ಬಿಳಿ ಹಲ್ಲುಗಳಿಗಾಗಿ : ನಿಮ್ಮ ಹಲ್ಲುಗಳು ಪಳಪಳ ಹೊಳೆಯಬೇಕಿದ್ದಲ್ಲಿ ಬಾಳೆ ಹಣ್ಣಿನ ಸಿಪ್ಪೆಯಿಂದ ಒಂದು ನಿಮಿಷ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ. ಒಂದು ವಾರ ಈ ರೀತಿ ಮಾಡಿದರೆ ಹಳದಿಗಟ್ಟಿದ ನಿಮ್ಮ ಹಲ್ಲುಗಳು ಶುಭ್ರವಾಗಿ ಕಾಣಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group