ಕಾಳು ಮೆಣಸಿನ ಈ ಬಾರಿ ಪ್ರಯೋಜನ ತಿಳಿಯಿರಿ!

ಭಾರತೀಯ ಅಡುಗೆಯಲ್ಲಿ ಮಸಾಲೆ ಪದಾರ್ಥಗಳಿಗೆ ಪ್ರಾಮುಖ್ಯತೆ ಹೆಚ್ಚು.ಜಗತ್ತಿನಾದ್ಯಂತ ಹೆಸರು ಪಡೆದ ಖಾದ್ಯಗಳನ್ನು ಭಾರತೀಯರು ತಯಾರಿಸುತ್ತಾರೆ.ಸಂಬಾರ ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸು ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ಅಷ್ಟೇ ಸಹಾಯಕವಾದುದು. ಪ್ರತಿನಿತ್ಯ ಅಡುಗೆಯಲ್ಲಿ ಖಾರಕ್ಕಾಗಿ ಬಳಸುವ ಪದಾರ್ಥಗಳಲ್ಲಿ ಕಾಳುಮೆಣಸು ಕೂಡ ಒಂದು.ಮೆಣಸಿನ ಪುಡಿಯ ಬದಲು ಕಾಳುಮೆಣಸು ಅಥವಾ ಕರಿ ಮೆಣಸನ್ನು ಬಳಸುವುದರಿಂದ ಸಾಕಷ್ಟು ಅನುಕೂಲತೆಗಳಿವೆ.ಕಾಳುಮೆಣಸು ಆಹಾರಕ್ಕೆ ಕೇವಲ ಫ್ಲೇವರ್ ನೀಡುವುದು ಮಾತ್ರವಲ್ಲ. ಇನ್ನೂ ಸಾಕಷ್ಟು ಉಪಯೋಗಗಳು ಇದರಲ್ಲಿವೆ. ಅವುಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

#ಕರಿಮೆಣಸು ಜೀರ್ಣಕಾರಿ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ.ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಮೆಣಸಿನಕಾಯಿಗಳನ್ನು ಸೇರಿಸಿಕೊಳ್ಳಬೇಕು.ಇದರ ಕಟುವಾದ ಪರಿಮಳವು ಮೂಗು ಹಾಗೂ ಗಂಟಲಿನಲ್ಲಿರು ಲೋಳೆಯು ಬಿಡುಗಡೆಯಾಗುತ್ತದೆ.ಈ ಕಾಯಿಗಳು ಹೆರಿಗೆಯಾದ ಮಹಿಳೆಯರಿಗೆ ಆಂತರಿಕ ವ್ಯವಸ್ಥೆಯನ್ನು ಗುಣಪಡಿಸುತ್ತವೆ ಮತ್ತು ಹೀಗಾಗಿ ಮೆಣಸು ಸಮೃದ್ಧವಾಗಿರವ ಆಹಾರವನ್ನು ಹೊಸ ತಾಯಂದರಿಗೆ ನೀಡಲಾಗುತ್ತದೆ. ಮೆಣಸಿನಲ್ಲಿ ಪೈಪರೀನ್ ಎಂಬ ಕಿಣ್ವವಿದೆ, ಇದು ವಿಟಮಿನ್ ಬಿ, ಸೆಲೆನಿಯಂ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಅತಿಸಾರ, ಮಲಬದ್ಧತೆ, ಕೀಲು ನೋವು, ಅಜೀರ್ಣ, ಹಲ್ಲು ಹುಟ್ಟುವದು, ಹಲ್ಲಿನ ನೋವು ಮುಂತಾದ ಕಾಯಿಲೆಗಳಲ್ಲಿ ಸಹಕಾರಿ. ಜೀರ್ಣಕಾರಿ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹವನ್ನು ಕ್ಯಾನ್ಸರ್ ಮತ್ತು ಇತರ ರೋಗಗಳಿಂದ ಮುಕ್ತಗೊಳಿಸುತ್ತದೆ.

#ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕಪ್ಪು ಮೆಣಸು ಮತ್ತು ಜೇನುತುಪ್ಪವನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡಿಕೊಳ್ಳಬಹುದು.ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟೇ. ಸ್ಟವ್ ಮೇಲೆ ಪ್ಯಾನ್ ನಲ್ಲಿ ಒಂದು ಲೋಟ ನೀರನ್ನು ಕುದಿಯಲು ಇಡಿ.ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ ಮತ್ತು ಅರ್ಧ ಟೀಚಮಚ ಚೆನ್ನಾಗಿ ಕುಟ್ಟಿ ಪುಡಿ ಮಾಡಿದ ಕಪ್ಪು ಕಾಳು ಮೆಣಸನ್ನು ಹಾಕಿ.ಸ್ವಲ್ಪ ಹೊತ್ತು ಕುದಿಸಿದ ನಂತರ ಸಾಮಾನ್ಯ ಕೊಠಡಿಯ ತಾಪಮಾನಕ್ಕೆ ಆರಿಸಿ, ಶೋಧಿಸಿ ನಂತರ ಸೇವನೆ ಮಾಡಿ.

#ತೂಕ ಕಳೆದುಕೊಳ್ಳಲು ಸಹಕರಿಸುತ್ತದೆಕಾಳುಮೆಣಸು ಆಹಾರಕ್ಕೆ ಸರಿಯಾದ ಸಮೀಕರಣ (ಪೋಷಕಾಂಶಗಳನ್ನು ಹೊರತೆಗೆಯಲು) ಮಾಡಲು ಸಹಕರಿಸುತ್ತದೆ.ಇದರಲ್ಲಿ ಪ್ರಬಲವಾದ ಫೈಟೋನ್ಯೂಟ್ರಿಯೆಂಟ್ಸ್ ಅಂಶ ಇರುವುದರಿಂದ ಇದು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ.ಜೊತೆಗೆ ಇದು ದೇಹದ ಕಲ್ಮಶವನ್ನು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ,ಬೆವರು ಇವುಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.ಇದರಿಂದ ದೇಹದ ತೂಕ ಕಡಿಮೆ ಆಗಲು ಸಹಾಯಕವಾಗುತ್ತದೆ.ಆಹಾರ ಪದಾರ್ಥಗಳ ಮೇಲೆ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.ಆದರೆ ಹೆಚ್ಚು ಖಾರ ತಿನ್ನಬೇಡಿ ಇದರಿಂದ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group