ಪಪ್ಪಾಯಿ ಬೀಜದ ಈ ಪ್ರಯೋಜನ ತಿಳಿಯಿರಿ!

ಸಾಮಾನ್ಯವಾಗಿ ಯಾವುದೇ ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸುವಾಗ ಅದರೊಳಗಿನ ಬೀಜಗಳನ್ನು ನಾವು ಎಸೆಯುತ್ತೇವೆ. ಆದರೆ ಈ ಬೀಜಗಳು ಹೆಚ್ಚು ಉಪಯುಕ್ತವೆಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವಾಸ್ತವವಾಗಿ, ಈ ಬೀಜಗಳು ತುಂಬಾ ಪೌಷ್ಟಿಕವೆಂದು ನಂಬಲಾಗಿದೆ. ಅವು ಸಾಕಷ್ಟು ಪ್ರಮಾಣದ ಫೈಬರ್, ಕೊಬ್ಬು, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದರಿಂದಾಗಿ ಅವುಗಳನ್ನು ಯಾವುದೇ ಭಕ್ಷ್ಯದಲ್ಲಿ ಸೇರಿಸಬಹುದು. ಹಾಗಾದರೆ ಅಂತಹ ಬೀಜಗಳು ಯಾವುವು ಮತ್ತು ಅವುಗಳನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ.

#ಜಂತು ನಿವಾರಕ:ಹಿಂದೆ ಮಕ್ಕಳಲ್ಲಿ ಜಂತು ಹುಳುಗಳ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿತ್ತು. ಹೆಚ್ಚು ಸಿಹಿ ಸೇವಿಸಿದರೆ ಜಂತು ಹುಳು ಕಾಣಿಸಿಕೊಳ್ಳುತ್ತವೆ. ಪರಂಗಿ ಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಜಂತುಹುಳು ನಿವಾರಣೆ ಯಾಗುತ್ತವೆ. ಊಟಕ್ಕೆ ಮುಂಚೆ ಮೂವತ್ತು ಪರಂಗಿ ಬೀಜಗಳನ್ನು ಹಣ್ಣಿನ ತಿರುಳಿನೊಂದಿಗೆ ಸೇವಿಸುವುದರಿಂದ ಕೂಡ ಜಂತು ನಿವಾರಣೆ ಆಗುತ್ತವೆ.

#ಜೀರ್ಣಶಕ್ತಿ ವೃದ್ಧಿಗೆ ರಾಮಬಾಣ ಪಪ್ಪಾಯಿ ಹಣ್ಣು:ಊಟವಾದ ನಂತರ ಪರಂಗಿ ಹಣ್ಣಿನ (ಪಪ್ಪಾಯಿ ಹಣ್ಣು ) ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಪರಂಗಿ ಗಿಡದ ಎಲೆಗಳನ್ನು ಕಿತ್ತು ತೊಳೆದು ತಿನ್ನುವುದರಿಂದ ಕರುಳಿನಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ.5. ಪರಂಗಿ ಹಣ್ಣಿನ (ಪಪ್ಪಾಯಿ ಹಣ್ಣು ) ಸೇವನೆಯಿಂದ ಮೂಲವ್ಯಾದಿ ಹಾಗೂ ಯಕೃತ್ ದೋಷಗಳು ಕೂಡ ನಿವಾರಣೆಯಾಗುತ್ತವೆ.

#ಕಿಡ್ನಿಸ್ಟೋನಗೆ ಸಂಭಂದಿಸಿದ ಕಾಯಿಲೆ ಬಳಲುತ್ತಿದ್ದರೆ ಈ ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಖಂಡಿತವಾಗಿಯೂ ಕೆಲವು ದಿನಗಳಲ್ಲಿ ನೋವು ಕಡಿಮೆ ಆಗುತ್ತದೆ. ಇನ್ನೂ ಕಿಡ್ನಿಸ್ಟೋನ್ ಗೆ ಸಂಭಂದಿಸಿದ ಹಲವಾರು ಕಾಯಿಲೆಗಳು ಮಾಯವಾಗುತ್ತವೆ. ಪಪ್ಪಾಯಿ ಬೀಜಗಳನ್ನು ನಿರಂತವಾಗಿ ಬಳಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಮತ್ತು ಜೀರ್ಣಕ್ರಿಯೆಯ ಶಕ್ತಿ ಹೆಚ್ಚಾಗುತ್ತದೆ. ಗ್ಯಾಸ್ ಪ್ರಾಬ್ಲಮ್ ಕೂಡ ಆಗುವುದಿಲ್ಲ. ಈ ಔಷಧವನ್ನು ಸತತವಾಗಿ ಇಪ್ಪತೈದು ದಿನಗಳ ಕಾಲ ತೆಗೆದುಕೊಂಡರೆ ತುಂಬಾ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳಿಗೆ ಎಲ್ಲರೂ ತುಂಬಾ ದುಬಾರಿ ಮಾತ್ರೆಗಳನ್ನು ತಿನ್ನುತ್ತಾರೆ. ಆದರೆ ಈ ಪಪ್ಪಾಯಿ ಹಣ್ಣುಗಳ ಬೀಜಗಳು ಸಿಂಪಲ್ಲಾಗಿ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ನಮಗೆ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ದೊಡ್ಡ ಕಾಯಿಲೆ ಎಂದರೆ ಕ್ಯಾನ್ಸರ್. ಈ ಕಾಯಿಲೆಗೆ ಇನ್ನುವರೆಗು ಲಸಿಕೆಯನ್ನು ಕಂಡುಹಿಡಿದಿಲ್ಲ. ಇಂತಹ ಪಪ್ಪಾಯಿ ಬೀಜ ಕ್ಯಾನ್ಸರ್ ಗೆ ಮನೆಮದ್ದು. ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು.

#ರಾಡಿಕಲ್ ವಿರುದ್ಧ ಹೋರಾಡುತ್ತದೆಪಪ್ಪಾಯಿ ಬೀಜಗಳು ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿವೆ ಇದು ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಸೋಂಕುಗಳಿಂದ ಮತ್ತು ಅನೇಕ ದೀರ್ಘಕಾಲದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.

#ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ:ಪಪ್ಪಾಯಿ ಹಣ್ಣಿನ ಬೀಜಗಳು ನಾರಿನಂಶವನ್ನು ಹೊಂದಿರುತ್ತವೆ, ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಬೊಜ್ಜು ತಡೆಗಟ್ಟಲು ಸಹಾಯ ಮಾಡುತ್ತದೆ. ಫೈಬರ್ ರಕ್ತದೊತ್ತಡವನ್ನು ಸಹ ಪರಿಶೀಲಿಸುತ್ತದೆ, ಅದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group