ನಿಮ್ಮ ಕೂದಲ ಆರೈಕೆಗೆ ಇಲ್ಲಿವೆ ಸಿಂಪಲ್ ಟಿಪ್ಸ್!

ಕಾಂತಿಯುತವಾದ, ಸೊಂಪಾದ, ಉದ್ದಾದ ಕೂದಲು ಬೇಕೆಂದು ಪ್ರತಿಯೊಬ್ಬ ಹೆಣ್ಣುಮಕ್ಕಳೂ ಇಷ್ಟಪಡುತ್ತಾರೆ. ಆದರೆ ಇವತ್ತಿನ ದಿನಗಳಲ್ಲಿ ಬದಲಾದ ವಾತಾವರಣ, ಆಹಾರ ಕ್ರಮದಿಂದ ಹಲವರಲ್ಲಿ ಕೂದಲುದುರುವ ಸಮಸ್ಯೆ ಕಂಡು ಬರುತ್ತಿದೆ. ಕೂದಲು ಉದುರಲಾರಂಭಿಸಿದಾಗ ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಿದರೆ ಕೂದಲು ಉದುರುವುದನ್ನು ತಟೆಗಟ್ಟಬಹುದು ಎಂದು ಯೋಚಿಸುತ್ತಾರೆ. ಆದರೆ, ಇದಕ್ಕಿಂತಲೂ ಹೆಚ್ಚಾಗಿ ನಾವು ಕೂದಲಿನ ಆರೈಕೆಯ ಹೇಗೆ ಎಂಬುವುದನ್ನು ತಿಳಿಯೋಣ!
#ನೆಲ್ಲಿಕಾಯಿ: ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿ ಇರುವಂತಹ ನೆಲ್ಲಿಕಾಯಿಯನ್ನು ಕೂದಲು ಉದುರುವಿಕೆಗೆ ಬಳಕೆ ಮಾಡಬಹುದು. ಇದನ್ನು ತಲೆಬುರುಡೆಗೆ ಹಚ್ಚಿಕೊಂಡರೆ ಆಗ ಇದು ಕೂದಲು ಉದುರುವಿಕೆ ತಡೆಯುವುದು. ಇದರ ಸೇವನೆಯೂ ಒಳ್ಳೆಯದು.ನೆಲ್ಲಿಕಾಯಿಯನ್ನು ಜಜ್ಜಿಕೊಂಡು ಅದರ ರಸ ತೆಗೆಯಿರಿ.ಎರಡು ಚಮಚ ನೆಲ್ಲಿಕಾಯಿ ರಸಕ್ಕೆ ಎರಡು ಚಮಚ ಲಿಂಬೆರಸ ಹಾಕಿ.ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಹಾಗೆ ಒಣಗಲು ಬಿಡಿ. ಇದರ ಬಳಿಕ ಬಿಸಿ ನೀರಿನಿಂದ ತೊಳೆಯಿರಿ.
#ನಿತ್ಯ ಬಳಕೆಯ ಶ್ಯಾಂಪೂ ಬಳಸಿ:ಸಾಮಾನ್ಯವಾಗಿ ಮಳೆಗಾಲದಲ್ಲಿ ತಲೆಕೂದಲು ತೇವಾಂಶದಲ್ಲಿ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ನಾವು ಆದಷ್ಟು ಶ್ಯಾಂಪು ಬಳಸಿ ಕೂದಲನ್ನು ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಮಳೆಗಾಲವೆಂದು ಈ ಅಭ್ಯಾಸವನ್ನು ನಿರ್ಲಕ್ಷಿಸಬಾರದು. ವಾರದಲ್ಲಿ ಎರಡು ಮೂರು ಬಾರಿ ಶ್ಯಾಂಪು ಉಪಯೋಗಿಸಿ ತಲೆ ಸ್ನಾನ ಮಾಡುವುದು ಉತ್ತಮ. ಅದೇ ರೀತಿ ಯಾವುದೇ ಕಾರಣಕ್ಕೂ ತಲೆಕೂದಲನ್ನು ಹೆಚ್ಚಿನ ಅವಧಿಯಲ್ಲಿ ಒದ್ದೆಯಾಗಿಯೇ ಇರದಂತೆ ಎಚ್ಚರವಹಿಸಬೇಕು.
#ಮೆಹಂದಿ ಪುಡಿ ಮತ್ತು ಹುಳಿ ಮಜ್ಜಿಗೆಎಲ್ಲರಿಗೂ ತಿಳಿದಿರುವಂತೆ ಮೆಹಂದಿ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾದ ಮನೆಮದ್ದು. ಕೂದಲು ಬಿಳಿಯಾಗಿರುವವರು ಕಲ್ಲರಿಂಗ್ ಗಾಗಿ ಕೂಡ ಮೆಹಂದಿಯನ್ನು ಬಳಸ್ತಾರೆ. ಮೆಹಂದಿ ಪುಡಿಯೊಡನೆ ಹುಳಿಮಜ್ಜಿಗೆ ಸೇರಿಸಿ ತಲೆಗೆ ಅಪ್ಲೈ ಮಾಡಿಕೊಳ್ಳೋದ್ರಿಂದ ಕೂದಲು ಮತ್ತಷ್ಟು ಅತ್ಯುತ್ತಮಗೊಳ್ಳಲು ಸಹಕಾರಿಯಾಗಿರುತ್ತೆ. ಯಾರಿಗೆ ಕೂದಲು ಉದುರುವ ಸಮಸ್ಯೆ ಇದಿಯೋ ಅಂತವರು ಮತ್ತು ಕೂದಲಿನ ಬಣ್ಣ ಗಾಢವಾಗಿ ಬರುವಂತೆ ಮಾಡಲು ಅಷ್ಟೇ ಯಾಕೆ ಈ ಪ್ಯಾಕ್ ಕೂಡ ತಲೆಹೊಟ್ಟನ್ನು ನಿವಾರಿಸಿ ಕೂದಲಿನ ಆರೋಗ್ಯ ವೃದ್ಧಿಗೆ ನೆರವಾಗುತ್ತೆ.
#ಹಣ್ಣಾಗಿರುವ ಬಾಳೆಹಣ್ಣುಮತ್ತು ಮಯೋನಿಸ್ ಪ್ಯಾಕ್ ತುಂಬಾ ಹಣ್ಣಾಗಿರುವ ಬಾಳೆಹಣ್ಣು ಮತ್ತು ಮಯೋನಿಸ್ ಸೇರಿಸಿಕೊಂಡು ಅದನ್ನು ಒಂದು ಹದಕ್ಕೆ ಬರುವ ತನಕ ರುಬ್ಬಿಕೊಳ್ಳಿ. ಈ ಪೇಸ್ಟ್ ಗೆ ಕೆಲವು ಹನಿ ತೆಂಗಿನೆಣ್ಣೆ ಅಥವಾ ಹರಳೆಣ್ಣೆ ಅಥವಾ ಆಲಿವ್ ತೈಲ ಹಾಕಿಕೊಳ್ಳಿ. ಇದಕ್ಕೆ ವಿಟಮಿನ್ ಇ ಎಣ್ಣೆಯನ್ನು ಹಾಕಿಕೊಳ್ಳಬಹುದು. ಕೂದಲು ಹಾಗೂ ತಲೆಬುರುಡೆಗೆ ಇದನ್ನು ಹಚ್ಚಿಕೊಂಡು ಸುಮಾರು 45 ನಿಮಿಷ ಕಾಲ ಹಾಗೆ ಬಿಡಿ. ಒಣ ಹಾಗೂ ಹಾನಿಗೊಂಡಿರುವ ಕೂದಲಿಗೆ ಇದು ತುಂಬಾ ಒಳ್ಳೆಯದು. ನಿಯಮಿತವಾಗಿ ಇದನ್ನು ಬಳಸಿದರೆ ಕೂದಲು ಬೇಗನೆ ಬೆಳೆಯುವುದು. ಮೇಲೆ ತಿಳಿಸಿರುವಂತಹ ಹೇರ್ ಪ್ಯಾಕ್ ಗಳನ್ನು ಬಳಸಿಕೊಂಡು ಸುಂದರ ಹಾಗೂ ಕಾಂತಿಯುತ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.
#ನಿಮ್ಮ ಕೂದಲ ಆರೈಕೆಗೆ ಶುಂಠಿ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಸಹ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಶುಂಠಿ ಹೇಗೆ ನಿಮ್ಮ ಕೂದಲು ಆರೈಕೆಗೆ ಮುಖ್ಯವೋ ಹಾಗೆ ತೆಂಗಿನ ಎಣ್ಣೆಯೂ ಕೂಡ ನಿಮ್ಮ ಕೂದಲ ಆರೈಕೆಗೆ ತುಂಬಾ ಮುಖ್ಯ. ಏಕೆಂದರೆ ತೆಂಗಿನ ಎಣ್ಣೆಯಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲನ್ನು ದಪ್ಪ ಮಾಡುದಲ್ಲದೆ ನಿಮ್ಮ ಕೂದಲು ಬಿಳಿಯಾಗದಂತೆ ತಡೆಯುತ್ತದೆ. ಆದ್ದರಿಂದ ಇವೆರಡರ ಮಿಶ್ರಣವು ನಿಮ್ಮ ಕೂದಲಿನ ಬುಡದಲ್ಲಿರುವ ಅಲರ್ಜಿಯನ್ನು ಸಹ ಇದು ತೆಗೆದುಹಾಕುತ್ತದೆ. ಶುಂಠಿ ರಸಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಅದನ್ನು ಕೂದಲಿಗೆ ಹಚ್ಚಿಕೊಳ್ಳುವುದರ ಮೂಲಕ ನಿಮ್ಮ ಕೂದಲಿನ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು ಆದ್ದರಿಂದ ಇಂತಹ ಮನೆಮದ್ದುಗಳನ್ನು ಹಚ್ಚುವುದರಿಂದ ನಿಮ್ಮ ಕೂದಲಿನ ಆರೈಕೆ ತುಂಬಾ ಚೆನ್ನಾಗಿ ಇರುತ್ತದೆ ಮತ್ತು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ.