ಕೊತ್ತಂಬರಿ ಸೊಪ್ಪಿನ 10 ಉಪಯೋಗಳು..!

ಕೊತ್ತಂಬರಿ ಸೊಪ್ಪುನ್ನು ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂದು ನೀವು ಭಾವಿಸಿದ್ದರೆ..! ಅದು ನಿಮ್ಮ ತುಪ್ಪು ತಿಳುವಳಿಕೆ..! ಈ ಮೂಲಿಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
# ಕೊತ್ತಂಬರಿ ಸೊಪ್ಪು ಚರ್ಮದ ಉರಿಯೂತ, ಅಧಿಕ ಕೊಲೆಸ್ಟ್ರಾಲ್, ಅತಿಸಾರ, ಬಾಯಿ ಹುಣ್ಣು, ರಕ್ತಹೀನತೆ ಮತ್ತು ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೊತ್ತಂಬರಿ ಸೊಪ್ಪು ಪ್ರೋಟಿನ್, ವಿಟಮಿನ್ಸ್, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್ ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ. ಕೊತ್ತಂಬರಿ ಸೊಪ್ಪಿನ ಉಪಯೋಗಳನ್ನು ವಿವರವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ..
#ಕಣ್ಣಿನ ಬೇನೆತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುತ್ತವೆ. ಇವು ಮಕುಲರ್ ಡಿಜೆನರೇಷನ್, ಕಂಜಂಕ್ಟಿವಿಟಿಸ್, ಕಣ್ಣುಗಳಿಗೆ ಉಂಟಾಗುವ ವಯೋ ಸಹಜ ಬೇನೆಗಳು ಮತ್ತು ಒತ್ತಡದಿಂದ ಕಣ್ಣುಗಳಿಗೆ ಆದ ಆಯಾಸವನ್ನು ಪರಿಹರಿಸಲು ನೆರವಾಗುತ್ತವೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಜಜ್ಜಿ, ಅದನ್ನು ನೀರಿನಲ್ಲಿ ಬೇಯಿಸಿ. ನಂತರ ಆ ರಸವನ್ನು ಸ್ವಚ್ಛವಾಗಿರುವ ಬಟ್ಟೆಯ ಮೇಲೆ ಸುರಿದುಕೊಳ್ಳಿ. ಹೀಗೆ ಸುರಿದುಕೊಂಡ ಬಟ್ಟೆಯಿಂದ ನಿಮ್ಮ ಕಣ್ಣಿಗೆ ಕೆಲವು ಹನಿಗಳನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ನೋವು ಮತ್ತು ತುರಿಕೆಗಳು ಹಾಗು ಕಣ್ಣೀರು ಬರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.
# ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ:ಕೊತ್ತಂಬರಿ ಸೊಪ್ಪಿನ ಸೇವನೆಯು ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಅಂದರೆ HDL ಅಥವಾ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಕೆಟ್ಟ ಕೊಲೆಸ್ಟ್ರಾಲ್ ಅಂದರೆ LDL ಪ್ರಮಾಣ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಚಳಿಗಾಲದಲ್ಲಿ ಕೊತ್ತಂಬರಿ ಸೊಪ್ಪನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
#ಕೊತ್ತಂಬರಿ ಸೊಪ್ಪು ಕ್ಯಾನ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಇದರಲ್ಲಿ ಕಂಡುಬರುವ ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಬೀಟಾ-ಕ್ಯಾರೋಟಿನ್,
#ಕೊತ್ತಂಬರಿ ಸೊಪ್ಪು, ಅಕ್ಕಿ, ಮೊಸರುಕೊತ್ತಂಬರಿ ಸೊಪ್ಪನ್ನು ತೊಳೆದು ಸ್ವಚ್ಛಗೊಳಿಸಿ ನಂತರ ಮೃದುವಾದ ಪೇಸ್ಟ್ ತಯಾರಿಸಿ. ಒಂದು ಚಮಚ ಅಕ್ಕಿ ಹಿಟ್ಟು ಮತ್ತು ಒಂದು ಚಮಚ ಮೊಸರನ್ನು ಮಿಶ್ರಣ ಮಾಡಿ. ನಂತರ ಅದನ್ನು ಫೇಸ್ ಪ್ಯಾಕ್ನಂತೆ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇಪ್ಪತ್ತು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದರಿಂದ ಮುಖದ ಸ್ನಾಯುಗಳು ಮತ್ತು ಕೋಶಗಳು ಆರೋಗ್ಯವಾಗಿರುತ್ತದೆ
#ಕೊತ್ತಂಬರಿ ನೀರು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಹೊಟ್ಟೆ ನೋವಿನಿಂದ ಮುಕ್ತಿ ಹೊಂದಲು ಬಯಸಿದರೆ, ಅರ್ಧ ಲೋಟ ನೀರಿನಲ್ಲಿ ಎರಡು ಚಮಚ ಕೊತ್ತಂಬರಿ ಬೀಜವನ್ನು ಹಾಕಿ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಆಮ್ಲೀಯತೆಯಿಂದ ( ಹುಳಿ ತೇಗು..ಇತ್ಯಾದಿ) ಬಳಲುತ್ತಿದ್ದರೆ, ಕೊತ್ತಂಬರಿ, ಜೀರಿಗೆ, ಸಕ್ಕರೆ ಮತ್ತು ಚಹಾ ಎಲೆಗಳನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಿಮಗೆ ಪರಿಹಾರ ಸಿಗುತ್ತದೆ. ಇದು ಮಾತ್ರವಲ್ಲ, ಕೊತ್ತಂಬರಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕೊತ್ತಂಬರಿ ಸೊಪ್ಪನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಅಜೀರ್ಣ, ವಾಕರಿಕೆ, ಭೇದಿ ಮತ್ತು ಕೊಲೈಟಿಸ್ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
#ಮೂಳೆಯ ಆರೋಗ್ಯವನ್ನು ಬಲಪಡಿಸಬಹುದುಕೊತ್ತಂಬರಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ರಂಜಕಗಳಂತಹ ಖನಿಜಗಳಿಂದ ಕೂಡಿದೆ ಇದು ಮೂಳೆಗಳ ಬೆಳವಣಿಗೆ ಮತ್ತು ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ಕೊತ್ತಂಬರಿ ಸೊಪ್ಪು ಉರಿಯೂತ ನಿವಾರಿಸುವ ಗುಣವನ್ನು ಹೊಂದಿದೆ. ಇದು ಸಂಧಿವಾತಕ್ಕೆ ಸಂಬಂಧಿಸಿದ ನೋವುಗಳಿಂದ ರಕ್ಷಿಸುತ್ತದೆ.
#ಚರ್ಮದ ಆರೋಗ್ಯವನ್ನು ಉತ್ತೇಜಿಸಬಹುದುಕಬ್ಬಿಣ, ವಿಟಮಿನ್ ಇ ಮತ್ತು ವಿಟಮಿನ್ ಎ ಹೊಂದಿದ್ದು ಇದು ಚರ್ಮಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ. ಕೊತ್ತಂಬರಿಯು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುವ ಸಾಮರ್ಥ್ಯದಿಂದಾಗಿ ಎಣ್ಣೆಯುಕ್ತ ಚರ್ಮಕ್ಕೆ ಪರಿಹಾರ ನೀಡುತ್ತದೆ. ಅಲ್ಲದೆ ಇದು ಆಂಟಿಮೈಕ್ರೊಬಿಯಲ್, ಆಂಟಿಸೆಪ್ಟಿಕ್ ಮತ್ತು ಆಂಟಿಫಂಗಲ್ ಏಜೆಂಟ್ ಆಗಿದ್ದು ಅದು ಚರ್ಮವನ್ನು ಸಮಸ್ಯೆಗಳನ್ನು ನಿವಾರಿಸುತ್ತದೆ.
#ಮೆದುಳಿನ ಆರೋಗ್ಯಹಲವಾರು ಅಧ್ಯಯನಗಳ ಪ್ರಕಾರ ಕೊತ್ತಂಬರಿ ಸಾರವು ಮೆದುಳಿನಲ್ಲಿರುವ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.
#ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಅಗತ್ಯವಾದ ಎಣ್ಣೆ ಅಂಶ ಮತ್ತು ಸಮೃದ್ಧ ಸುವಾಸನೆ ಇದೆ. ಇವುಗಳು ಅಪ್ಪೆಟೈಜರ್ ನಂತೆ ವರ್ತಿಸಿ, ಜಠರದಲ್ಲಿರುವ ಕಿಣ್ವಗಳನ್ನು ಮತ್ತು ಜೀರ್ಣಕಾರಿ ರಸಗಳನ್ನು ಉದ್ದೀಪನಗೊಳಿಸಿ, ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ನೆರವೇರುವಂತೆ ಮಾಡುತ್ತವೆ. ಇದರ ಜೊತೆಗೆ ಕೊತ್ತಂಬರಿ ಸೊಪ್ಪು ಅನೊರೆಕ್ಸಿಯವನ್ನು( ಊಟ ಮಾಡಲು ಇರುವ ವಿನಾಕಾರಣ ಭೀತಿ) ನಿವಾರಿಸಲು ನೆರವಾಗುತ್ತದೆ.