ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗೆ ತಿಳಿಯಿರಿ!

ಒಣ ತ್ವಚೆಯಿಂದ ಪರಿಹಾರ ಪಡೆಯಲು ತೆಂಗಿನೆಣ್ಣೆ ಬಹಳ ಪರಿಣಾಮಕಾರಿಯಾಗಿದೆ. ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.ಬದಲಾಗುತ್ತಿರುವ ಹವಾಮಾನವು ಆರೋಗ್ಯ ಹಾಗೂ ತ್ವಚೆ ಎರಡರ ಮೇಲೂ ಪರಿಣಾಮ ಬೀರುತ್ತದೆ. ಬದಲಾಗುವ ಹವಾಮಾನಕ್ಕೆ ತಕ್ಕಂತೆ ನಾವು ಉಡುಪು, ಆಹಾರ ಎಲ್ಲಾ ವಿಚಾರದಲ್ಲೂ ಜಾಗ್ರತೆ ವಹಿಸಬೇಕು. ಹಾಗೇ ಚಳಿಗಾದಲ್ಲಿ ಕೂಡಾ. ತಣ್ಣನೆಯ ಗಾಳಿಯಿಂದ ಚರ್ಮವು ಒಣಗಿ ನಿರ್ಜೀವವಾಗುತ್ತದೆ. ಇದರಿಂದ ಚರ್ಮ ಬಹಳ ಶುಷ್ಕವಾಗಿರುತ್ತದೆ.

ಒಣ ಚರ್ಮದಿಂದಾಗಿ ತುರಿಕೆ ಉಂಟಾಗಬಹುದು. ಹೆಚ್ಚಾಗಿ ತುಟಿಗಳು, ಕೆನ್ನೆ ಮತ್ತು ಹಣೆಯ ಸುತ್ತಲೂ ಒಣ ಚರ್ಮ ಕಂಡುಬರುತ್ತದೆ. ಈ ಸಮಯದಲ್ಲಿ ಚರ್ಮದ ಮೇಲೆ ಮಾಯಿಶ್ಚರೈಸರ್ ಸಾಕಾಗುವುದಿಲ್ಲ. ಬದಲಾಗುತ್ತಿರುವ ಋತುಗಳಲ್ಲಿ ನಿಮ್ಮ ಚರ್ಮಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಈ ಋತುವಿನಲ್ಲಿ ತ್ವಚೆಯನ್ನು ಹೈಡ್ರೇಟ್ ಆಗಿಡಲು ಆಹಾರ ಕ್ರಮ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಹೆಚ್ಚು ನೀರು ಕುಡಿಯುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡಲು ಮನೆಮದ್ದುಗಳು ಬಹಳ ಪರಿಣಾಮಕಾರಿಯಾಗಿದೆ. ಬದಲಾಗುತ್ತಿರುವ ಋತುವಿನಲ್ಲಿ ಚರ್ಮವನ್ನು ಹೈಡ್ರೇಟ್ ಆಗಿ ಇರಿಸಿಕೊಳ್ಳಲು ಯಾವ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ನೋಡೋಣ.

#ಪ್ರತಿದಿನ ಸ್ನಾನ ಮಾಡುವಾಗ ರಾಸಾಯನಿಕವಾಗಿ ಮಾಡಿದ ಸೋಪುಗಳನ್ನು ಬಳಸುವ ಬದಲು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಚರ್ಮದ ರಕ್ಷಣೆಯನ್ನು ಮಾಡಬಹುದು.

#ಸ್ನಾನ ಮಾಡುವ ಮೊದಲು ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಹಾಲು ಅಥವಾ ನೀರನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು ಇದನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಚರ್ಮವು ಮೃದುವಾಗುತ್ತದೆ.

#ಚರ್ಮ ಸೌಂದರ್ಯಕ್ಕೆ ಆಹಾರ ಕೂಡಾ ಸಹಕಾರಿಯಾಗುತ್ತದೆ. ಚರ್ಮ ಸೌಂದರ್ಯದ ಸಮಸ್ಯೆ ಇರುವವರು ಸಿಹಿ ಪದಾರ್ಥಗಳನ್ನು, ಹಿರಿದ ಪಲ್ಲೇಗಳು ಹಾಗೂ ಕರಿದ ಪದಾರ್ಥಗಳನ್ನು ಸೇವಿಸಬಾರದು. ಹಸಿ ತರಕಾರಿ ಹಾಗೂ ಹಣ್ಣು ಹಂಪಲಗಳನ್ನು ಹೆಚ್ಚಾಗಿ ಸೇವಿಸುವುದರಿಂದ, ಚರ್ಮ ತೇವದಿಂದ ಕೂಡಿರುತ್ತದೆ, ಮೃದುತ್ವ ಉಳಿಯುತ್ತದೆ.

#ಒಣಗಿದ ಅಥವಾ ತುರಿಕೆಯಿಂದ ಕೂಡಿದ ತ್ವಚೆಗೆ ಸಾಸಿವೆಯನ್ನು ಎಣ್ಣೆಯನ್ನು ಹಚ್ಚಿ, ಐದಾರು ನಿಮಿಷದ ನಂತರ ಮುಖ ತೊಳೆದರೆ ತ್ವಚೆ ಮೃದುವಾಗುತ್ತದೆ.

#ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ ಹಾಗೂ ಇ ಅಂಶ ಅಗಾಧವಾಗಿದ್ದುಒಳ್ಳೆಯ ಮಾಯ್ಚಿರೈಸರ್ ಆಗಿ ಕೆಲಸ ಮಾಡುತ್ತದೆ.

#ಚಳಿಗಾಲದಲ್ಲಿ ಜನರು ಬಿಸಿನೀರಿನಲ್ಲಿ ಸ್ನಾನ ಮಾಡಲು ಬಯಸುತ್ತಾರೆ, ಆದರೆ ಬಿಸಿನೀರಿನಲ್ಲಿ ಸ್ನಾನ ಮಾಡಿದ ನಂತರ ಯಾವುದೇ ಉತ್ತಮವಾದ ಮಾಯಿಶ್ಚರೈಸರ್ ಅನ್ನು ಬಳಸದಿದ್ದರೆ, ಚರ್ಮವು ಒಣಗುತ್ತದೆ ಮತ್ತು ಅದು ಚರ್ಮ ಹೆಚ್ಚು ಬಿರುಕು ಪಡೆಯುತ್ತದೆ. ಜೊತೆಗೆ ಅದರ ಬಣ್ಣವು ಅಸಮವಾಗಿರುತ್ತದೆ. ಸ್ನಾನ ಮಾಡಿದ ಕೂಡಲೇ ನೀವು ಮಾಯಿಶ್ಚರೈಸರ್ ಬಳಸದಿದ್ದರೆ, ಚರ್ಮದಲ್ಲಿನ ರಕ್ತನಾಳಗಳು ಎಸ್ಜಿಮಾ ಅಥವಾ ತುರಿಕೆ ಚರ್ಮಕ್ಕೆ ಕಾರಣವಾಗುವ ಗಾಳಿಯ ಸಂಪರ್ಕಕ್ಕೆ ಬರುತ್ತವೆ, ಆದ್ದರಿಂದ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದ ನಂತರವೂ ಮಾಯಿಶ್ಚರೈಸರ್ ಅನ್ನು ಬಳಸಲು ಮರೆಯಬೇಡಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group