ಕಬ್ಬಿನ ಹಾಲಿನಲ್ಲಿ ಇರುವ ಪೌಷ್ಠಿಕಾಂಶಗಳು!

ಕಬ್ಬಿನ ರಸವು ಹಲವು ಪೌಷ್ಠಿಕಾಂಶಗಳಿಂದ ಸಂಪತ್ಭರಿತವಾಗಿದೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ಪೊಟ್ಯಾಶಿಯಂ ಸೇರಿದಂತೆ ಅನೇಕ ಖನಿಜಾಂಶಗಳು ಹೇರಳವಾಗಿ ದೊರೆಯುತ್ತದೆ. ಬೇಸಿಗೆ ಸಮಯದಲ್ಲಿ ಬಾಯಾರಿಕೆಗೆ ಕಬ್ಬಿನ ಜ್ಯೂಸ್ ಉಪಯುಕ್ತವಾಗಿದೆ. ಕಬ್ಬಿನ ಹಾಲು ಸೇವಿಸುವುರಿಂದ ನಮ್ಮ ದೇಹಕ್ಕೆ ಉಂಟಾಗುವ ಲಾಭಗಳನ್ನು ತಿಳಿಯೋಣ.
#ಜೀರ್ಣಕ್ರಿಯೆಗೆ ಸಹಕಾರಿ:ಅಜೀರ್ಣದ ತೊಂದರೆ ಇರುವವರು ಕಬ್ಬಿನ ಸರ ಸೇವಿಸುವುದರಿಂದ ಹೊಟ್ಟೆ ಉಬ್ಬರಿಕೆ, ಹೊಟ್ಟೆ ಉರಿ ಮುಂತಾದ ಸಮಸ್ಯೆಗಳಿಂದ ಪರಿಹಾರ ಕಾಣಬಹುದು. ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಇದು ನಿವಾರಿಸಬಲ್ಲದು. ಜೀರ್ಣವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಲ್ಲಿನ ರೋಗನಿರೋಧಕ ಶಕ್ತಿ ಸೊಂಕುಗಳ ವಿರುದ್ಧ ಹೋರಾಡುತ್ತದೆ.
#ಮೊಡವೆ ಮತ್ತು ಕಲೆಗಳನ್ನು ದೂರ ಮಾಡುತ್ತೆ:ಕಬ್ಬಿನ ರಸವನ್ನು ಕುಡಿಯುವುದರಿಂದ ಮೊಡವೆಗಳ ಸಮಸ್ಯೆ ದೂರವಾಗುತ್ತವೆ. ಕಬ್ಬಿನಲ್ಲಿ ಸುಕ್ರೋಸ್ ಅಂಶ ಸಮೃದ್ಧವಾಗಿದ್ದು, ಯಾವುದೇ ಗಾಯಗಳು ಬೇಗನೆ ವಾಸಿಯಾಗಲು ಇದು ಸಹಾಯ ಮಾಡುತ್ತದೆ. ಹಾಗೆಯೇ ನಿಯಮಿತವಾಗಿ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ದೇಹದ ಕೆಟ್ಟ ರಕ್ತವನ್ನು ಶುದ್ಧೀಕರಿಸಿಕೊಳ್ಳಬಹುದು. ಇದರಿಂದ ಮುಖದಲ್ಲಿರುವ ಕಲೆಗಳು ನಿವಾರಣೆಯಾಗಿ ಚರ್ಮಗಳು ಹೊಳೆಪಿನಿಂದ ಕೂಡಿರುತ್ತದೆ.
#ಕಿಡ್ನಿ ಸ್ಟೋನ್ ಅನ್ನು ಹೋಗಲಾಡಿಸುತ್ತದೆ ಕಿಡ್ನಿಯಲ್ಲಿ ಕಲ್ಲಿದ್ದವರಿದನ್ನು ಪ್ರತಿದಿನ ಕುಡಿದರೆ ಈ ಸಮಸ್ಯೆ ಇಂದ ಗುಣಮುಖರಾಗಲು ಸಹಾಯಕಾರಿಯಾಗುತ್ತದೆ ಈ ಎಲ್ಲ ಸಮಸ್ಯೆ ಇರುವವರಿಗೆ ಕಬ್ಬಿನ ಹಾಲು ಸೇವಿಸುವುದು ಒಳ್ಳೆಯದು ಇದರಿಂದ ಉತ್ತಮ ಆರೋಗ್ಯ ಲಾಭವನ್ನು ನೀವು ಪಡೆಯಬಹುದು
#ಜಾಂಡಿಸ್ ಸಮಸ್ಯೆ ಹೊಂದಿದವರಿಗೆ ಕಬ್ಬಿನ ಹಾಲು ಬಲು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಏಕೆಂದರೆ ಜಾಂಡೀಸ್ ಬಂದಂತಹ ಸಂದರ್ಭದಲ್ಲಿ ವೈದ್ಯರು ಕೂಡ ಇದನ್ನು ಕುಡಿಯಲು ಸಲಹೆ ನೀಡುತ್ತಾರೆ.ನಮ್ಮ ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವಲ್ಲಿ ಮತ್ತು ನಮ್ಮ ಲಿವರ್ ಭಾಗವನ್ನು ಸ್ವಚ್ಛವಾಗಿಸುವಲ್ಲಿ ಕಬ್ಬಿನ ಹಾಲು ಪ್ರಯೋಜನಕಾರಿ. ಯಕೃತ್ ಭಾಗದ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸುವಲ್ಲಿ ಕೂಡ ಕಬ್ಬಿನ ಹಾಲಿನ ಪಾತ್ರವನ್ನು ಮರೆಯುವಂತಿಲ್ಲ.
#ನಿಮ್ಮ ಮೂಳೆಗಳಿಗೆ ಕ್ಯಾಲ್ಸಿಯಂ ಅಂಶವನ್ನು ಒದಗಿಸುವ ಜೊತೆಗೆ ಕಬ್ಬಿಣದ ಅಂಶ, ಮೆಗ್ನೀಷಿಯಂ ಅಂಶ, ಪೊಟ್ಯಾಶಿಯಂ ಮತ್ತು ಖನಿಜಾಂಶಗಳನ್ನು ನೀಡುತ್ತದೆ.ಇದು ಮೂಳೆಗಳ ಸದೃಢತೆಗೆ ಕಾರಣವಾಗಿ ಮೂಳೆಗಳ ಆರೋಗ್ಯ ರಕ್ಷಣೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಆಸ್ಟಿಯೋಪೋರೋಸಿಸ್ ಮತ್ತು ಕೀಲುನೋವುಗಳು ಬರುವ ಸಾಧ್ಯತೆ ಇರುವುದಿಲ್ಲ.
#ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆಕಬ್ಬಿನ ಹಾಲಿನ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಪ್ರಮಾಣ ಕಡಿಮೆಯಾಗುತ್ತದೆ. ಇದರ ಜೊತೆಗೇ ಹೃದಯದ ಆರೋಗ್ಯವನ್ನು ಕಾಪಾಡುವ ಟ್ರೈಗ್ಲಿಸರೈಡ್ ಗಳ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.