ಗೋಧಿ ಹುಲ್ಲನ್ನು ಹೇಗೆ ಸೇವಿಸಬೇಕು ಮತ್ತು ಅದರ ಸೇವನೆಯಿಂದ ಆಗುವ ಪ್ರಯೋಜನ!

ವೀಟ್ ಗ್ರಾಸ್ ಅಂದರೆ ಕನ್ನಡದಲ್ಲಿ ಗೋಧಿ ಹುಲ್ಲು ಎಂದು ಕರೆಯುತ್ತಾರೆ, ಗೋಧಿ ಹುಲ್ಲು ಒಂದು ಅದ್ಭುತ ಆಹಾರ ಅಂತಾನೇ ಹೇಳಬಹುದು, ವೀಟ್ ಗ್ರಾಸ್ ನಲ್ಲಿ ವಿಟಮಿನ್ ಗಳಾದ ಎ, ಸಿ, ಐ, ಕೆ, ಬಿ 6 ಹೆಚ್ಚು ಇರುತ್ತದೆ, ಗೋಧಿ ಹುಲ್ಲುನ್ನು ತಿನ್ನುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಬೆಳೆಯುತ್ತದೆ,ಇದು ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿ, ವಿಶೇಷವಾಗಿ ಹಿಮಾಲಯದಂತಹ ಶೀತಲ ಪ್ರದೇಶದಲ್ಲಿ ಹಚ್ಚು ಬೆಳೆಯುತ್ತಾರೆ, ವೀಟ್ ಗ್ರಾಸ್ ಜ್ಯೂಸ್ ಜನಪ್ರಿಯ ಆರೋಗ್ಯ ಪಾನೀಯವಾಗಿದೆ. ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಸೇವಿಸಿದಾಗ ಮಾತ್ರ ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ, ತಜ್ಞರು ವೀಟ್ ಗ್ರಾಸ್ ಆಹಾರ ಸೇವಿಸುವುದರಿಂದ ಎಲ್ಲಾ ಪೌಷ್ಟಿಕಾಂಶ ಲೋಪಗಳಿಗೆ ವನ್-ಸ್ಟಾಪ್ ಪರಿಹಾರ ಮತ್ತು ಇದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳುತ್ತಾರೆ.

#ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ: ವೀಟ್ಗ್ರಾಸ್ನಲ್ಲಿ 17 ವಿಧದ ಅಮೈನೋ ಆಮ್ಲಗಳು, ಅನೇಕ ಆಂಟಿಆಕ್ಸಿಡೆಂಟ್ಸ್. ತುಂಬಾ ಅಗತ್ಯವಾದ ಜೀವಸತ್ವಗಳು ಕೂಡ ಇರುತ್ತವೆ. ವೀಟ್ ಗ್ರಾಸ್ ಸೇವನೆಯಿಂದ ನಿಮ್ಮ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಮ್ಮ ದೇಹವನ್ನು ಒಳಗಿನಿಂದ ಬಲವಾಗಿ ಇಡುತ್ತದೆ. ಇದರಲ್ಲಿ ಇರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

#ಎಳೆಯ ಗೋಧಿ ಹುಲ್ಲಿನ ಚಿಗುರು ಆಂಟಿ – ಆಕ್ಸಿಡೆಂಟ್ ಅಂಶಗಳು, ಆಂಟಿ – ಬ್ಯಾಕ್ಟರಿಯಲ್ ಅಂಶಗಳು ಮತ್ತು ಆಂಟಿ – ಇನ್ಫಾಮೇಟರಿ ಅಂಶಗಳಲ್ಲಿ ಹೇರಳವಾಗಿದ್ದು, ನಮ್ಮ ದೇಹದ ತೂಕ ಇಳಿಸುವಲ್ಲಿ ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಕಡಿಮೆ ಮಾಡುವಲ್ಲಿ ಮತ್ತು ನಮ್ಮ ಮಧುಮೇಹವನ್ನು ನಿಯಂತ್ರಣ ಪಡಿಸುವುದರಲ್ಲಿ ಸಹಾಯ ಮಾಡುತ್ತದೆ.

#ಗೋಧಿ ಹುಲ್ಲಿನಲ್ಲಿ ಸೆಲೆನಿಯಮ್ ಅಂಶ ಹೆಚ್ಚಾಗಿದ್ದು, ನಮ್ಮ ಥೈರಾಯಿಡ್ ಗ್ರಂಥಿಯ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿ ಪಡಿಸಿ ಒಬ್ಬ ವ್ಯಕ್ತಿಯ ದೇಹದ ತೂಕವನ್ನು ನಿಯಂತ್ರಣ ಮಾಡುವ ಶಕ್ತಿ ಪಡೆದಿದೆ.

#ತೂಕ ಇಳಿಕೆಗೋಧಿ ಹುಲ್ಲಿನಲ್ಲಿರುವ ಪೋಷಕಾಂಶಗಳು ತೂಕವನ್ನು ಇಳಿಕೆ ಮಾಡಲು ಕೆಲಸ ಮಾಡುತ್ತವೆ. ಗೋಧಿ ಹುಲ್ಲಿನ ಸೇವನೆಯು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ ಮತ್ತು ಪದೇ ಪದೇ ಹಸಿವಾಗುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಹಸಿವಿನ ಬಯಕೆಯ ಕೊರತೆಯಿಂದ ತೂಕವು ನಿಯಂತ್ರಣದಲ್ಲಿದೆ.

#ಮಧುಮೇಹವನ್ನು ನಿಯಂತ್ರಣಗೋಧಿ ಹುಲ್ಲಿನ ಸೇವನೆಯು ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ವ್ಹೀಟ್ ಗ್ರಾಸ್ ಆಂಟಿ ಡಯಾಬಿಟಿಕ್ ಗುಣಗಳನ್ನು ಹೊಂದಿದ್ದು, ಇದು ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ.

#ದೇಹವನ್ನು ಡಿಟಾಕ್ಸ್ ಮಾಡುತ್ತದೆಇದರಲ್ಲಿರುವ ಕ್ಲೋರೋಪೈಲ್ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುವುದರ ಜೊತೆಗೆ ಲಿವರ್‌ ಆರೋಗ್ಯ ಕಾಪಾಡುತ್ತೆ. ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರ ಹಾಕಿದರೆ ಅನೇಕ ರೋಗವನ್ನು ತಡೆಗಟ್ಟಬಹುದು.

#ವೀಟ್ ಗ್ರಾಸ್ ಕೂಡ ಬ್ಲಡ್ ಪ್ರೆಶರ್ ಅನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಕ್ಲೋರೊಫಿಲ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಅಧಿಕ ರಕ್ತದೊತ್ತಡ ಇರುವವರು ಮಾತ್ರವಲ್ಲ, ಸಾಮಾನ್ಯ ರಕ್ತದೊತ್ತಡ ಇರುವವರು ಕೂಡಾ ಕುಡಿಯಬಹುದು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group