ಸೊಂಟವನ್ನು ತೆಳ್ಳಗಾಗಿಸಲು ಪರಂಗಿಯನ್ನು ಈ ರೀತಿ ಸೇವಿಸಿ!

ತೂಕ ಹೆಚ್ಚಾಗುವುದರಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಇಂದಿನಿಂದಲೇ ನಿಮ್ಮ ಡಯಟ್ನಲ್ಲಿ ಪರಂಗಿ ಹಣ್ಣನ್ನು ಸೇರಿಸಿ. ಇದು ನಿಮ್ಮ ಹೊಟ್ಟೆಯನ್ನು ಸ್ವಚ್ಛವಾಗಿರಿಸುವುದು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ಅನೇಕ ಪೋಷಕಾಂಶಗಳನ್ನು ಪೂರೈಸುತ್ತದೆ. ಪರಂಗಿ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಆದ್ದರಿಂದ, ಇದು ನಿಮ್ಮ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಕಾರಿ ಆಗಿದೆ. ಅಷ್ಟೇ ಅಲ್ಲದೆ, ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಕಂಡುಬರುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ನೀವು ಹೊಟ್ಟೆಯ ಕೊಬ್ಬಿನಿಂದ ತೊಂದರೆಗೀಡಾಗಿದ್ದರೆ ಪರಂಗಿಹಣ್ಣು ಹೇಗೆ ಸಹಾಯಕವಾಗಲಿದೆ. ತೂಕ ನಷ್ಟ ಹಾಗೂ ಬೆಲ್ಲಿ ಫ್ಯಾಟ್ ಕರಗಿಸಲು ಪರಂಗಿ ಹಣ್ಣನ್ನು ಯಾವ ರೀತಿ ಸೇವಿಸಬೇಕು ಎಂದು ತಿಳಿಯಿರಿ.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪರಂಗಿ ಹಣ್ಣನ್ನು ಈ ರೀತಿ ಸೇವಿಸಿ:ಮೊಸರಿನೊಂದಿಗೆ ಪರಂಗಿ ಹಣ್ಣು:ನೀವು ಬೆಲ್ಲಿ ಫ್ಯಾಟ್ ನಿಂದ ತೊಂದರೆಗೊಳಗಾಗಿದ್ದರೆ, ನಿಮ್ಮ ಬೆಳಗಿನ ಉಪಾಹಾರದಲ್ಲಿ ಮೊಸರಿನೊಂದಿಗೆ ಪರಂಗಿ ಹಣ್ಣನ್ನು ಸೇವಿಸಿ. ಇದರಲ್ಲಿ ನೀವು ಇನ್ನೂ ಕೆಲವು ಹಣ್ಣುಗಳನ್ನು ಸೇರಿಸಬಹುದು. ಇದರಲ್ಲಿ ನೆನೆಸಿದ ಡ್ರೈ ಫ್ರೂಟ್ಸ್ ಕೂಡ ಹಾಕಬಹುದು. ಇದನ್ನು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಅತಿಯಾಗಿ ತಿನ್ನುವುದರಿಂದ ಪಾರಾಗುತ್ತೀರಿ.
#ಹಾಲು ಮತ್ತು ಪರಂಗಿ:ಒಂದೊಮ್ಮೆ ಸ್ವಲ್ಪ ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವವರಾದರೆ, ನೀವು ಬೇರೆ ಯಾವುದೇ ಖಾದ್ಯವನ್ನು ತಿನ್ನುವ ಅಗತ್ಯವಿಲ್ಲ. ಬದಲಿಗೆ ಒಂದು ಲೋಟ ಕೆನೆ ಹಾಲು ಮತ್ತು ಪರಂಗಿ ಹಣ್ಣನ್ನು ಸೇವಿಸಬಹುದು. ಇದರೊಂದಿಗೆ ನೀವು ಪ್ರೋಟೀನ್ ಪ್ರಮಾಣವನ್ನು ಸಹ ಪಡೆಯುತ್ತೀರಿ ಮತ್ತು ನಿಮ್ಮ ಹೊಟ್ಟೆಯು ಹಲವು ಗಂಟೆಗಳ ಕಾಲ ತುಂಬಿರುತ್ತದೆ. ಹಾಗಾಗಿ, ನೀವು ನಿಮ್ಮ ಸೊಂಟವನ್ನು ಸ್ಲಿಮ್ ಮಾಡಲು ಬಯಸಿದರೆ, ನೀವು ಬೆಳಗಿನ ಉಪಾಹಾರದಲ್ಲಿ ಹಾಲು ಮತ್ತು ಪಪ್ಪಾಯಿಯನ್ನು ಸೇವಿಸಬಹುದು.
#ಪಪ್ಪಾಯಿ ಚಾಟ್:ನೀವು ಸಾದಾ ಪಪ್ಪಾಯಿಯನ್ನು ತಿನ್ನಲು ಇಷ್ಟಪಡದಿದ್ದರೆ, ನೀವು ಪಪ್ಪಾಯಿ ಚಾಟ್ ಅನ್ನು ತಯಾರಿಸಿ ತಿನ್ನಬಹುದು. ಇದಕ್ಕಾಗಿ, ಪಪ್ಪಾಯಿಯನ್ನು ಹೋಳುಗಳಾಗಿ ಕತ್ತರಿಸಿ ಅದರ ಮೇಲೆ ಕಪ್ಪು ಉಪ್ಪು, ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ ಸೇವಿಸಬಹುದು.
#ಒಂದು ಮಧ್ಯಮ ಗಾತ್ರದ ಪಪ್ಪಾಯ ಹಣ್ಣಿನಲ್ಲಿ 68 ಕ್ಯಾಲೋರಿಗಳು ಇರುತ್ತದೆ. ಜಿಂಕ್ 0.13 ಮಿ.ಗ್ರಾಂ., ಕ್ಯಾಲ್ಸಿಯಂ 31 ಮಿ.ಗ್ರಾಂ., ಮ್ಯಾಗ್ನಿಷಿಯಂ 33 ಮಿ.ಗ್ರಾಂ., ಪೋಟ್ಯಾಷಿಯಂ 286 ಮಿ.ಗ್ರಾಂ., ಕಾರ್ಬೋಹೈಡ್ರೇಟ್ 50.1 ಗ್ರಾಂ., ನಾರು 2.7 ಗ್ರಾಂ., ಪ್ರೋಟಿನ್ 2.9 ಗ್ರಾಂ., ಸಕ್ಕರೆ 8.30 ಗ್ರಾಂ., ಓಮೆಗಾ 3 ಕೊಬ್ಬಿನ ಆಮ್ಲಗಳು-35.0 ಮಿ.ಗ್ರಾಂ. ಪೋಷಕಾಂಶಗಳು ಲಭ್ಯವಿರುತ್ತವೆ. ಪಪ್ಪಾಯ ಹಣ್ಣು ಸೇವನೆಯಿಂದ ಮನುಷ್ಯನ ಶರೀರಕ್ಕೆ ಈ ಮೇಲಿನ ಎಲ್ಲಾ ಲಾಭಾಂಶಗಳು ದೊರೆಯುತ್ತವೆ