ಸ್ಟಾರ್ ಫ್ರೂಟ್ ಸೇವನೆಯ ಆರೋಗ್ಯ ಪ್ರಯೋಜನ!

ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಆಯಾ ಕಾಲದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಬಹುದು. ಈ ಮಳೆಗಾಲಕ್ಕೆ ಒಂದು ಉತ್ತಮ ಹಣ್ಣಿನ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಈ ಲೇಖನವನ್ನು ಓದಿ ಆ ಹಣ್ಣಿನ ಬಗ್ಗೆ ತಿಳಿದುಕೊಳ್ಳಿ.
#ಕಡಿಮೆ ಕ್ಯಾಲೋರಿ ಇರುವ ಹಣ್ಣು:ಕ್ಯಾರಾಂಬೋಲಾ ಹಣ್ಣು ಅತ್ಯಂತ ಕಡಿಮೆ ಕ್ಯಾಲೋರಿ ಇರುವ ಹಣ್ಣಾಗಿದ್ದು, ಇದರಲ್ಲಿ ಕರಗುವ ನಾರು, ವಿಟಮಿನ್ ಎ, ಬಿ ಮತ್ತು ಸಿ ಜೊತೆಗೆ ಖನಿಜಗಳ ಜೊತೆಗೆ ಸತು, ರಂಜಕ, ಮೆಗ್ನೀಸಿಯಮ್, ಸೋಡಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸೇರಿವೆ. ಇದಲ್ಲದೆ, ಇದು ಪಾಲಿಫೆನಾಲಿಕ್ ಸಂಯುಕ್ತಗಳು, ಕ್ವೆರ್ಸೆಟಿನ್, ಗ್ಯಾಲಿಕ್ ಆಮ್ಲ ಮತ್ತು ಎಪಿಕಾಟೆಚಿನ್ (epicatechin) ನಂತಹ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ (ಆಂಟಿ ಆಕ್ಸಿಡೆಂಟು) ಗಳನ್ನೂ ಹೊಂದಿದೆ.
#ಸ್ಟಾರ್ ಹಣ್ಣು ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೃದಯ (Heart)ದ ಆರೋಗ್ಯ ಉತ್ತೇಜಿಸುತ್ತದೆ. ಮೇಲಿನ ಅಂಶಗಳನ್ನು ಪರಿಗಣಿಸಿ, ನಿಮ್ಮ ದೈನಂದಿನ ಆಹಾರದಲ್ಲಿ ಸ್ಟಾರ್ ಹಣ್ಣುಗಳನ್ನು ಸೇರಿಸಿ. ಕಾಲ ಬದಲಾದರೂ ಆರೋಗ್ಯವನ್ನು ಉತ್ತಮವಾಗಿಡಬಹುದು.
#ಜೀರ್ಣಕ್ರಿಯೆ ಸುಧಾರಿಸುತ್ತದೆ: ಈ ಹಣ್ಣು ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.ಬಹಳಷ್ಟು ಫೈಬರ್ ಇದ್ದು, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮ್ಮ ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸಲು ಇದು ಸಹಕಾರಿಯಾಗಿದೆ.
#ಹೃದಯ ಆರೊಗ್ಯ ಹೆಚ್ಚಿಸುತ್ತೆ: ಸ್ಟಾರ್ ಹಣ್ಣು ರಕ್ತದೊತ್ತಡವನ್ನು ನಿಯಂತ್ರಿಸುವ ಸೋಡಿಯಂ ಮತ್ತು ಪೊಟ್ಯಾಸಿಯಮ್ನಂತಹ ಪ್ರಮುಖ ಖನಿಜಗಳಿಂದ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಅನ್ನು ಸಹ ಹೊಂದಿದ್ದು, ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ದೇಹದಲ್ಲಿ ಸಮತೋಲಿತ ಕ್ಯಾಲ್ಸಿಯಂ ಪಾರ್ಶ್ವವಾಯು ಮತ್ತು ಹೃದಯ ಸ್ತಂಭನದಂತಹ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ
#ಉಸಿರಾಟವನ್ನು ಸುಗಮಗೊಳಿಸುತ್ತದೆ: ಗಂಟಲು ನೋವು ಕಡಿಮೆ ಮಾಡಿ, ಉಸಿರಾಟ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ