ಬೇಳೆಕಾಳುಗಳು ಆರೋಗ್ಯಕರ ಗುಣಗಳ ಆಗರ..!

ನಿತ್ಯದ ಅಡುಗೆಯಲ್ಲಿ ಬಳಸಿ ಪ್ರಯೋಜನ ಪಡೆಯಿರಿಬೇಳೆ ಕಾಳುಗಳನ್ನು ಬೇಯಿಸುವ ಮೊದಲು ನೆನೆಸಿ ಮತ್ತು ಮೊಳಕೆಯೊಡೆಯಲು ಬಿಡಿ. ಕಾಳುಗಳು ಪ್ರೋಟೀನ್‌ಗಳು ವಿಟಮಿನ್‌ ಖನಿಜಗಳನ್ನು ಹೊಂದಿರುತ್ತವೆ.ಭಾರತೀಯ ಅಡುಗೆ ವಿಶಿಷ್ಟತೆ ಎಂದರೆ ದ್ವಿದಳ ಧಾನ್ಯಗಳು. ಪ್ರತಿ ಮನೆಯಲ್ಲೂ ದ್ವಿದಳ ಧಾನ್ಯಗಳು ಸಿಗುತ್ತವೆ. ಅದರಲ್ಲೂ ಬೇಳೆ ಕಾಳು ಎಲ್ಲರೂ ಸಾಮಾನ್ಯವಾಗಿ ಉಪಯೋಗಿಸುವ ಪದಾರ್ಥವಾಗಿದೆ.

#ಬೇಳೆ ಕಾಳುಗಳನ್ನು ತಿನ್ನುವಾಗ ಕಾಳುಗಳನ್ನು ನೆನೆಸಿ, ಮೊಳಕೆ ಬಂದ ನಂತರ ಸೇವಿಸಬೇಕು. ಬೇಳೆ ಕಾಳುಗಳು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ದ್ವಿದಳ ಧಾನ್ಯಗಳು ನಿಮ್ಮನ್ನು ಆರೋಗ್ಯವಾಗಿಡುತ್ತವೆ.2.ಆರೋಗ್ಯಕರ ಜೀವನಶೈಲಿಗಾಗಿ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಧಾನ್ಯಗಳು ಸಹಕಾರಿ. ಬೇಳೆ ಕಾಳುಗಳು ಭಾರತೀಯ ಅಡುಗೆ ಮನೆಯ ಅಗತ್ಯ ಪದಾರ್ಥಗಳಲ್ಲಿ ಒಂದಾಗಿದೆ.

#ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆ: ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಆಹಾರಗಳು ಎಲ್ಲಾ ಮಧುಮೇಹಿಗಳಿಗೆ ಉತ್ತಮವಾಗಿದೆ. ಕಡಿಮೆ ಜಿಐ ಇದೆ ಎಂದರೆ ಆ ಆಹಾರವನ್ನು ಸೇವಿಸಿದ ನಂತರ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಯಾವುದೇ ಏರುಪೇರು ಆಗುವುದಿಲ್ಲ. ಬೇಳೆಯ ಜಿಐ ಮಟ್ಟವು 28 ಆಗಿರುವುದರಿಂದ ಇದು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರ ಆಯ್ಕೆಯಾಗಿದೆ.

#ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯಕ: ಹುರಿದ ಬೇಳೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದ ಅಪಾಯವನ್ನು ಉಂಟುಮಾಡುವ, ರಕ್ತನಾಳಗಳಲ್ಲಿ ಅಡಚಣೆ ಉಂಟುಮಾಡುವ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಫೈಬರ್ ಭರಿತ ಹುರಿದ ಕಾಳುಗಳ ನಿಯಮಿತ ಸೇವನೆಯಿಂದ ಕಡಿಮೆ ಮಾಡಬಹುದು.

#ಬೇಳೆ ಕಾಳುಗಳನ್ನು ಸೇವಿಸುವುದರಿಂದ ಎಲ್ಡಿಎಲ್ ಮಟ್ಟ ಕಡಿಮೆ ಮಾಡಲು ಸಹಕಾರಿ ಆಗಿದೆ. ಅಂದರೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತವೆ. ಇದು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ. ಬೇಳೆ ಕಾಳುಗಳು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.

#ವಿರೋಧಿ ಪೋಷಕಾಂಶಗಳು ನಿಮ್ಮ ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಮತ್ತು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುವ ಪೋಷಕಾಂಶಗಳಾಗಿವೆ. ಇದರಿಂದಾಗಿ ಅನೇಕ ಜನರು ಬೇಳೆಕಾಳುಗಳನ್ನು ಸೇವಿಸಿದ ನಂತರ ಅಜೀರ್ಣ, ಗ್ಯಾಸ್ ಮತ್ತು ಹೊಟ್ಟೆ ನೋವಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ಬೇಳೆಕಾಳುಗಳನ್ನು ಬೇಯಿಸುವ ಮೊದಲು ನೆನೆಸಿ ಮತ್ತು ಮೊಳಕೆಯೊಡೆಯುವ ವಿಧಾನ ಅನುಸರಿಸಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group