ಅವರೆಕಾಳು ತಿನ್ನಲು ಇಷ್ಟ ಪಡುವವರು ತಪ್ಪದೆ ಇದರ ಪ್ರಯೋಜನ ತಿಳಿಯಿರಿ!

ಹೆಚ್ಚಿನ ಪೋಶಕಾಂಶವಿರುವ, ನಾರಿನಂಶ ಹೆಚ್ಚಿರುವ ಹಾಗು ಕೊಬ್ಬು ಕಡಿಮೆ ಇರುವ ಮತ್ತು ಕಾರ‍್ಬೋಹೈಡ್ರೇಟ್ ಹೆಚ್ಚಿರುವ ಆಹಾರಗಳನ್ನು ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ಎಲ್ಲಾ ಗುಣಲಕ್ಶಣಗಳು ಒಂದೇ ಆಹಾರದಲ್ಲಿ ಸಿಗುವ ಒಂದು ಉದಾಹರಣೆಯೆಂದರೆ ಅದು ಅವರೆಕಾಳು. ಅವರೆಕಾಳು ಹೆಚ್ಚಿನ ಮಟ್ಟದ ಪ್ರೊಟೀನ್, ಕಡಿಮೆ ಕೊಬ್ಬಿನಾಂಶ, ಸಾಚ್ಯುರೇಟೆಡ್ ಪ್ಯಾಟ್ ಮುಕ್ತ, ಕರಗುವಂತಹ ನಾರಿನಾಂಶ, ಕನಿಜಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು, ತಯಾಮಿನ್, ಪೊಟ್ಯಾಶಿಯಂ, ರಂಜಕ ಹೀಗೆ ಹಲವಾರು ಪೋಶಕಾಂಶಗಳನ್ನು ಹೊಂದಿದೆ. ಇದರಲ್ಲಿ ಕೋಳಿಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನು ಇರುವ ಕಾರಣ ಸಸ್ಯಾಹಾರಿಗಳೂ ಹೆಚ್ಚಿನ ಪೌಶ್ಟಿಕಾಂಶಗಳನ್ನು ಪಡೆಯಲು ಸಾದ್ಯ. ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ ಬನ್ನಿ.

#ತಲೆ ನೋವು ಕಡಿಮೆ ಮಾಡುತ್ತದೆ : ಹೌದು ಅವರೇ ಕಾಯಿಯ ಎಲೆಗಳನ್ನು ಜಜ್ಜಿ ಪೂರ್ವ ಆಫ್ರಿಕಾ ದೇಶಗಳಲ್ಲಿ ಅದರ ವಾಸನೆಯನ್ನು ನೋಡುತ್ತಾರೆ, ಹೀಗೆ ಮಾಡುವುದರಿಂದ ತಲೆ ನೋವಿಗೆ ತಕ್ಷಣ ಪರಿಹಾರ ಸಿಗುತ್ತದೆ.

#ಹೃದಯದ ತೊಂದರೆ : ಆಂಟಿ-ಆಕ್ಸಿಡೆಂಟ್ಸ್ ಅವರೆಕಾಯಿಯಲ್ಲಿ ಸಹಜವಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳಷ್ಟು ಸಹಾಯಕಾರಿ, ರುವಾಂಡಾ ಎನ್ನುವ ದೇಶದಲ್ಲಿ ಅವರೆಕಾಯಿಯ ಎಲೆಗಳನ್ನು ಬಳಸಿ ಔಷದಿ ತಾಯಾರಿಸುತ್ತಾರೆ.

#ಮೆದುಳಿನ ಆರೋಗ್ಯ ವೃದ್ಧಿ:ಅವರೆಕಾಳನ್ನು ಬಳಸಿಕೊಂಡರೆ ಅದರಿಂದ ಮೆದುಳಿನ ಕ್ರಿಯೆಯು ಉತ್ತಮವಾಗುವುದು. ಇದರಲ್ಲಿ ಇರುವಂತಹ ತಾಮ್ರದ ಅಂಶವು ಮಾನಸಿಕ ನಿಶ್ಯಕ್ತಿ ಕಡಿಮೆ ಮಾಡುವುದು ಮತ್ತು ಏಕಾಗ್ರತೆ ವೃದ್ಧಿಸುವುದು.ತಾಮ್ರದ ಅಂಶವು ಮನಸ್ಥಿತಿ ಸುಧಾರಣೆ ಮಾಡುವುದು. ಅವರೆ ಕಾಳುನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಮೆದುಳಿನ ಅಂಗಾಂಶಗಳನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಣೆ ಮಾಡುವುದು.

#ಕ್ಯಾನ್ಸರ್ ತಡೆಗಟ್ಟುತ್ತದೆ:ಅವರೆಕಾಯಿಯ ಬೀಜಗಳೊಂದಿಗೆ ತಿಳಿ ನೇರಳೆ ಅಥವಾ ತಿಳಿ ಹಸಿರು ಬೀಜಕೋಶಗಳು ಉತ್ತಮ ಪ್ರಮಾಣದ ಸತುವನ್ನು ಹೊಂದಿರುತ್ತದೆ. ಸತುವು ಕ್ಯಾನ್ಸರ್ ತಡೆಗಟ್ಟಲು ಬಹಳ ಉಪಯುಕ್ತವಾಗಿದೆ. ಏಕೆಂದರೆ ಇದು ಜೀವಕೋಶಗಳ ರೂಪಾಂತರವನ್ನು ತಡೆಗಟ್ಟುವ, ಜೀವಕೋಶ ವಿಭಜನೆಗೆ ಸಹಾಯ ಮಾಡುವ ಮತ್ತು ಗೆಡ್ಡೆ ಜೀವಕೋಶದ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ.

#ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:ಅವರೆಕಾಯಿಯು ಸತುವನ್ನು ಹೊಂದಿರುವುದರಿಂದ ಉರಿಯೂತ, ಸೋಂಕುಗಳನ್ನು ಕಡಿಮೆ ಮಾಡಲು ಮತ್ತು ಉತ್ಕರ್ಷಣಶೀಲ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಈ ರೀತಿಯಾಗಿ, ಅವರೆಕಾಯಿಯ ಸೇವನೆಯು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group