ಒಣದ್ರಾಕ್ಷಿ ಒಳಗಿದೆ ಆರೋಗ್ಯದ ಗುಟ್ಟು

ಪೋಷಕಾಂಶದಿಂದ ಕೂಡಿದ ಆಹಾರಕ್ಕಾಗಿ ಹೆಚ್ಚು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಒಂದು ವಿಧಾನವಾದರೆ ಒಣ ಹಣ್ಣುಗಳನ್ನು ತಿನ್ನುವ ಅಭ್ಯಾಸ ಮತ್ತೊಂದು ಮಾರ್ಗವಾಗಿದೆ.ಒಣ ದ್ರಾಕ್ಷಿ ಮೂಲತಃ ಕೊಬ್ಬು ರಹಿತವಾಗಿದೆ ಮತ್ತು ಆರೋಗ್ಯಕರ ಚರ್ಮ, ಆರೋಗ್ಯಕರ ಕೂದಲು ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಬೇಕಾದ ಅನೇಕ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ನಮ್ಮ ಆಹಾರದಲ್ಲಿ ಒಣದ್ರಾಕ್ಷಿ ಸೇರಿಸುವುದರಿಂದ ನಮ್ಮ ಆರೋಗ್ಯ ಮೇಲೆ ಬೀರುವ ಪ್ರಯೋಜನಗಳನ್ನು ತಿಳಿಯೋಣ.
#ಗಟ್ಟಿ ಮುಟ್ಟಾದ ಎಲುಬು :-ಕ್ಯಾಲ್ಸಿಯಮ್ , ಪೊಟ್ಯಾಶಿಯಂ ಮತ್ತು ಬೋರಾನ್ ನ ಶ್ರೀಮಂತ ಮೂಲವಾಗಿದೆ ಈ ಒಣ ದ್ರಾಕ್ಷಿ.. ಇದರಿಂದಾಗಿ ಗಟ್ಟಿ ಮುಟ್ಟಾದ ಎಲುಬನ್ನು ಹೊಂದಲು ಸಹಾಯ ಮಾಡುತ್ತದೆ. ಚಿಕ್ಕ ಮಕ್ಕಳಿಗೆ ನಿತ್ಯವೂ ಹಣ್ಣನ್ನು ನೀಡುವುದರಿಂದ ಸದ್ರಡ, ಸ್ವಸ್ಥವಾಗಿ ಸಹಾಯವಾಗುತ್ತದೆ.
#ಇಮ್ಯುನಿಟಿ ಪವರ್ ಅನ್ನು ಹೆಚ್ಚಿಸುತ್ತದೆ :ಮತ್ತು ಇದನ್ನು ವಿಂಟರ್ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ಯಾವುದೇ ಬ್ಯಾಕ್ಟರಿಯಲ್ ಇನ್ಫೆಕ್ಷನ್ ಆಗದಿರುವಂತೆ ಒಳ್ಳೆಯ ರೀತಿಯಲ್ಲಿ ತಡೆಗಟ್ಟುತ್ತದೆ ಮತ್ತು ತುಂಬಾ ಜನರು ಬಾಯಿಯಾ ದುರ್ವಾಸನೆಯಿಂದ ತುಂಬಾ ಕಷ್ಟ ಪಡುತ್ತಾರೆ ಅಂಥವರು ಸೇವಿಸಿದರೆ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ ಆದ್ದರಿಂದ ಒಣದ್ರಾಕ್ಷಿಯನ್ನು ನೀವು ನಿಮ್ಮ ಆರೋಗ್ಯದ ಡಯಟ್ ನಲ್ಲಿ ಹ್ಯಾಡ್ ಮಾಡಿಕೊಳ್ಳುವುದು ಒಳ್ಳೆಯದು.
#ತೂಕ ಇಳಿಸಿಕೊಳ್ಳಲು ಸಹಕಾರಿ:ನೀವು ಬೊಜ್ಜು ದೇಹವನ್ನು ಹೊಂದಿದ್ದರೆ, ಎಲ್ಲಾ ರೀತಿಯ ಶ್ರಮ ವಹಿಸಿಯೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಆಗ ನೀವು ನೆನೆಸಿರುವ ಒಣ ದ್ರಾಕ್ಷಿ ಸೇವಿಸಬೇಕು. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ ಮತ್ತು ಇದು ಬಯಕೆ ಕಡಿಮೆ ಮಾಡಿ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಯಾಗದಂತೆ ತಡೆಯುವುದು. ಆದರೆ ನೀವು ಇದನ್ನು ಅತಿಯಾಗಿ ಸೇವಿಸಬೇಡಿ ಮತ್ತು ತಜ್ಞರು ಹೇಳಿದಷ್ಟೇ ಸೇವಿಸಿ. ತೂಕ ಇಳಿಸಿಕೊಳ್ಳಬೇಕಾದರೆ ನೀವು ಒಣ ದ್ರಾಕ್ಷಿ ತಿಂದರೆ ಆಗ ದೀರ್ಘ ಕಾಲದ ತನಕ ಹೊಟ್ಟೆಯು ತುಂಬಿದಂತೆ ಇರುವುದು.
#ಅಸಿಡಿಟಿಗೆ ಅತ್ಯುತ್ತಮವಾದ ಮನೆಮದ್ದು:ನಿಮಗೆ ತುಂಬಾ ಅಸಿಡಿಟಿ ಸಮಸ್ಯೆ ಇದ್ದರೆ ಇದನ್ನು ಟ್ರೈ ಮಾಡಿ ನೋಡಿ, ಉತ್ತಮ ಪರಿಹಾರ ಸಿಗುವುದು. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ನಿಯಂತ್ರಿಸಲು ಸಹಕಾರಿ. ಆದ್ದರಿಂದ ಆಮ್ಲೀಯ ಸಮಸ್ಯೆ ತಡೆಗಟ್ಟುತ್ತದೆ.
#ಹೃದಯದ ಆರೋಗ್ಯಕ್ಕೆ ಒಳ್ಳೆಯದು:ಒಣ ದ್ರಾಕ್ಷಿಯ ನೀರು ರಕ್ತವನ್ನು ಶುದ್ಧೀಕರಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ನಿಮ್ಮ ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.
#ಕೆಮ್ಮು ಕಫ ನಿವಾರಣೆಗೆ ಒಣದ್ರಾಕ್ಷಿ ಹಾಗೂ ಕಾಳುಮೆಣಸು ಸಮಪ್ರಮಾಣದಲ್ಲಿ ತಗೆದುಕೊಂಡು ಅದನ್ನು ಅರೆದು ಸೇವನೆ ಮಾಡುವುದರಿಂದ ಕೆಮ್ಮು ಕಫ ನಿವಾರಣೆಯಾಗುವುದು. ಮುಖದ ಕಾಂತಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಹಾಲಿನೊಂದಿದೆ ಅರೆದು ಮುಖದ ಮೇಲೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದು. ಅಷ್ಟೇ ಅಲ್ದೆ ಮಲಬದ್ಧತೆ ಸಮಸ್ಯೆ ಇರೋರು ಸ್ವಲ್ಪ ಒಣದ್ರಾಕ್ಷಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂಡಿಗೂ ಮುನ್ನ ಸೇವನೆ ಮಾಡುವುದರಿಂದ ಮಲಬದ್ಧತೆ ದೂರವಾಗುವುದು. ಹೀಗೆ ನಾನಾ ಉಪಯೋಗಗಳನ್ನು ಒಣದ್ರಾಕ್ಷಿಯಿಂದ ಪಡೆದುಕೊಳ್ಳಬಹುದಾಗಿದೆ.