ಗೋರಂಟಿ ಉಪಯೋಗ ಮತ್ತು ಔಷದಿಯ ಗುಣಗಳು!

ಹೌದು ಗೋರಂಟಿ ಸೊಪ್ಪು ಬರಿ ಕೈ ಗೆ ಮೆಹಂದಿ ಹಾಕಿಕೊಳ್ಳೋಕೆ ಮಾತ್ರ ಗೊತ್ತು ಆದರೆ ಈ ಗೋರಂಟಿ ಸೊಪ್ಪಿನಿಂದ ಹಲವಾರು ರೀತಿಯಲ್ಲಿ ಚರ್ಮ ರೋಗಗಳ ಗುಣಪಡಿಸುವ ಶಕ್ತಿ ಇದೆ.
ಅನೇಕ ಚರ್ಮ ರೋಗಗಳಿಗೆ ರಾಮಬಾಣ: ಹೌದು ಈ ಮೆಹಂದಿ ಸೊಪ್ಪಿನಲ್ಲಿ ಏನಿದೆ ಅಂತ ಅನಿಸಬಹುದು ಆದರೆ ಈ ಸೊಪ್ಪನ್ನೇ ನಮ್ಮ ಹಿರಿಯರು ಬಳಸುತ್ತಿದ್ದಾರೆ ಅಂದರೆ ಅದರಲ್ಲಿ ಒಂದು ಅರ್ಥ ಇದ್ದೆ ಇರುತ್ತದೆ. ಇದು ಅನೇಕ ಚರ್ಮ ರೋಗಗಳಿಗೆ ರಾಮಬಾಣವಾಗಿದೆ ತುರಿಕೆ ಆಗಲಿ ಬೆವರು ಸಲೆಯಾಗಲಿ ಬೆನ್ನಿನ ಮೇಲೆ ಏಳುವ ಸಣ್ಣ ಸಣ್ಣ ಗುಳ್ಳೆಗಳಿಗಾಗಲಿ ತಕ್ಷಣ ಈ ಸೊಪ್ಪನ್ನು ಅರೆದು ಹಚ್ಚಿದರೆ ಗುಣವಾಗುತ್ತದೆ.
#ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ: ಗೋರಂಟಿ ಸೊಪ್ಪು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವುದರಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.ಹೌದು ದೇಹದ ಉಷ್ಣಾಂಶ ಹೆಚ್ಚಿದೆ ಎನ್ನುವವರು ರಜೆ ದಿನಗಳಲ್ಲಿ ತಮ್ಮ ತಮ್ಮ ಅಂಗೈ ಹಾಗೂ ಅಂಗಾಲುಗಳಿಗೆ ಮೆಹಂದಿಯನ್ನು ಬಳಸುವುದರಿಂದ ದೇಹದ ಉಷ್ಣವನ್ನು ಕಡಿಮೆ ಮಾಡಿಕೊಳ್ಳಬಹುದು.
#ಗೋರಂಟಿಯ ಎಲೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಭಾರತ ಮತ್ತು ಮಧ್ಯಪ್ರಾಚ್ಯಗಳಲ್ಲಿ ಅಂಗೈ, ಅಂಗಾಲು ಹಾಗೂ ಕೈ ಬೆರಳಿನ ಉಗುರುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ. ತಲೆಗೂದಲು, ಗಡ್ಡ, ಹುಬ್ಬು, ಕುದುರೆಗಳ ಬಾಲ, ಅಯಾಲು, ಚರ್ಮ ಮುಂತಾದವುಗಳಿಗೆ ಬಣ್ಣ ಕೊಡುವುದಕ್ಕೆ ಬಳಸಲಾಗುತ್ತೆ . ಗೋರಂಟಿಯ ಹೂವನ್ನು ಆವಿ ಅಸವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ಚಂಚಲ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ.
#ಕಾಮಾಲೆ ರೋಗಕ್ಕೆ ಉತ್ತಮ : ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕಿ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ಬಾರಿಯಂತೆ 1 ವಾರ ಕುಡಿದರೆ ಕಾಮಾಲೆ ಪರಿಹಾರಕ್ಕೆ ಸಹಾಯ ಮಾಡುತ್ತೆ.
#ಹಲ್ಲು ನೋವು ಉಪಶಮನ: ಹಹಲ್ಲು ನೋವಿದ್ರೆ ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಟ್ಟು, ರಸವನ್ನು ಉಗುಳುತ್ತಿದ್ದರೆ ಬೇಗ ವಾಸಿಯಾಗುತ್ತದೆ.
#ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ: ಗೋರಂಟಿ ಸೊಪ್ಪು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವುದರಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ. ಹೌದು ದೇಹದ ಉಷ್ಣಾಂಶ ಹೆಚ್ಚಿದೆ ಎನ್ನುವವರು ರಜೆ ದಿನಗಳಲ್ಲಿ ತಮ್ಮ ತಮ್ಮ ಅಂಗೈ ಹಾಗೂ ಅಂಗಾಲುಗಳಿಗೆ ಮೆಹಂದಿಯನ್ನು ಬಳಸುವುದರಿಂದ ದೇಹದ ಉಷ್ಣವನ್ನು ಕಡಿಮೆ ಮಾಡಿಕೊಳ್ಳಬಹುದು.