ಹೂಕೋಸುವಿನಲ್ಲಿ ಅಡಗಿರುವ ಹಲವಾರು ಆರೋಗ್ಯ ಪ್ರಯೋಜನಗಳು

ನಿಮ್ಮ ದೇಹಾರೋಗ್ಯಕ್ಕೆ ಸಂಬಂಧಿಸದ ಹಾಗೆ ಕಾಲಿಫ್ಲವರ್ (ಹೂಕೋಸು) ನಿಂದ ಅಗಣಿತ ಲಾಭಗಳಿವೆ ಎ೦ಬ ಸ೦ಗತಿಯು ನಿಮಗೆ ತಿಳಿದಿದೆಯೇ?ಹೌದು….ನಿಮ್ಮ ದೇಹಾರೋಗ್ಯದ ವಿಷಯದಲ್ಲಿ ಅದ್ಭುತ ರೀತಿಯಲ್ಲಿ ಕಾರ್ಯನಿರ್ವಹಿಸಬಹುದಾದ ಅತ್ಯುತ್ತಮವಾದ ಆಹಾರವಸ್ತುವು ಹೂಕೋಸು ಆಗಿದ್ದು, ಈ ಕಾರಣಕ್ಕಾಗಿ ಇದನ್ನು ನಿಮ್ಮ ಆಹಾರಕ್ರಮದಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.
#ಮೊದಲನೆಯದಾಗಿ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳು ಸಿಗುತ್ತವೆ. ಜೊತೆಗೆ ಅಪಾರ ಪ್ರಮಾಣದ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಅಂಶಗಳು ಆಗಿರುವುದರಿಂದ ಬ್ರೊಕೋಲಿ ಮತ್ತು ಹೂಕೋಸಿನಲ್ಲಿ ಅವುಗಳ ಕೊರತೆ ಕಾಣುವುದಿಲ್ಲ.
#ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ: ಹೃದಯದ ಹಾಗೂ ಮನಸ್ಸನ್ನು ಆರೋಗ್ಯವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಅಲದ್ದೇ, ಕೂದಲಿನ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ ಎನ್ನಬಹುದು. ಹೂಕೋಸು ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ.
#ತೂಕ ಇಳಿಸಲು ಸಹಾಯ: ಹೂಕೋಸುವಿನಲ್ಲಿ ಫೈಬರ್ ಮತ್ತು ನೀರಿನ ಅಂಶ ಅಧಿಕವಾಗಿದೆ. ಹೀಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೊಜ್ಜು ತಡೆಯುತ್ತದೆ.ಇದರ ಜೊತೆಯಲ್ಲಿ ಹೂಕೋಸು ದೇಹದ ಚಯಾಪಚಯ ಕ್ರಿಯೆಗೆ ಅಗತ್ಯವಾದ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ
#ಮೆದುಳಿಗೆ ಸಹಕಾರಿ: ಮೆದುಳಿನ ಆರೋಗ್ಯಕ್ಕೆ ಹೂಕೋಸು ತುಂಬಾ ಪ್ರಯೋಜನಕಾರಿ. ಮೆದುಳಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ನೀಡುತ್ತದೆ. ಬುದ್ಧಿವಂತಿಕೆಯ ಬೆಳವಣಿಗೆಗೂ ಸಹಕಾರಿಯಾಗಿದೆ.
#ಹೂಕೋಸಿನಲ್ಲಿ ಆಂಟಿ ಆಕ್ಸಿದೆಂಟ್ ಗಳಿದ್ದು, ಇವು ನಿಮ್ಮ ತ್ವಚೆಯು ತಾರುಣ್ಯಭರಿತವಾಗಿ ಕಾಣುವಂತೆ ಮಾಡಬಲ್ಲವು. ಹೂಕೋಸಿನಲ್ಲಿರಬಹುದಾದ ಅತ್ಯಾವಶ್ಯಕ ಪೋಷಕಾ೦ಶಗಳು ಕೂದಲುದುರುವಿಕೆಯ ವಿರುದ್ಧ ಸೆಣೆಸಾಡಲು ನೆರವಾಗುತ್ತವೆ ಮತ್ತು ಶುಷ್ಕ ಹಾಗೂ ತುರಿಕೆಯಿಂದ ಕೂಡಿದ ನೆತ್ತಿಯನ್ನು ಆರೈಕೆ ಮಾಡುತ್ತವೆ. ಹೂಕೋಸಿನಲ್ಲಿ ಇತರ ಉರಿ-ಪ್ರತಿಬಂಧಕ ಪ್ರಯೋಜನಗಳಿದ್ದು, ಇದು ಒಂದು ಅತ್ಯುತ್ತಮ ವಿಷಹರವಾಗಿದೆ.
#ಕರುಳಿನ ಆರೋಗ್ಯಕ್ಕೆ ತುಂಬಾ ಸಹಕಾರಿ:ಆರೋಗ್ಯಕರವಾದ ಕರುಳಿನ ಕಾರ್ಯಚಟುವಟಿಕೆ ಪ್ರತಿಯೊಬ್ಬರ ದೇಹದಲ್ಲಿ ನಡೆಯಬೇಕು. ಇದಕ್ಕೆ ಜೀರ್ಣಾಂಗ ಸಹಕಾರ ನೀಡಬೇಕು. ನಮ್ಮ ದೇಹದಲ್ಲಿ ಇರುವ ಎಲ್ಲಾ ಪ್ರಮುಖ ಅಂಗಾಂಗಗಳಲ್ಲಿ ನಮ್ಮ ಕರುಳು ಸಹ ಒಂದು.
#ಕ್ಯಾನ್ಸರ್ ಸಮಸ್ಯೆ ದೂರವಾಗುತ್ತದೆ:ಬಹುತೇಕ ಆರೋಗ್ಯ ತಜ್ಞರು ಹೇಳುವ ಹಾಗೆ ನಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಹೂಕೋಸು ಮತ್ತು ಬ್ರೊಕೋಲಿ ಬಳಕೆ ಮಾಡುತ್ತಿದ್ದರೆ, ಹೊಟ್ಟೆಗೆ ಸಂಬಂಧಪಟ್ಟ, ಕರುಳಿಗೆ ಸಂಬಂಧಪಟ್ಟ, ಮಹಿಳೆಯರ ಅಂಡಾಶಯದ ಮತ್ತು ಪುರುಷರ ಪ್ರೊಸ್ಟೇಟ್ ಕ್ಯಾನ್ಸರ್ ಸಮಸ್ಯೆ ಕಂಡುಬರುವ ಪ್ರಮಾಣ ಕಡಿಮೆಯಾಗುತ್ತದೆ.