ಮುಖದ ಕಾಂತಿ ಹೆಚ್ಚಿಸಲು ಮದ್ದು!

ನಿಮ್ಮ ಚರ್ಮವನ್ನು ಯಾವಾಗಲೂ ಕಾಂತಿಯುತವಾಗಿ ಇಡಬೇಕೆ ಆಗಿದ್ದಾರೆ ಇದನ್ನು ಪಾಲಿಸಿ. ಎಲ್ಲರೂ ಕೂಡ ಅವರ ಚರ್ಮದ ಕಾಂತಿಯನ್ನು ಹೆಚ್ಚಿಸಲು ಇಷ್ಟ ಪಡುತ್ತಾರೆ ಯಾವಾಗಲೂ ನಾವು ಅಂದವಾಗಿ ಕಾಣಬೇಕು ಎಂಬುದು ಎಲ್ಲರ ಆಸೆ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಅಂದವನ್ನು ಹೆಚ್ಚಿಸಲು ಏನೆಲ್ಲಾ ಹರ ಸಾಹಸ ಮಾಡುತ್ತಾರೆ ಎಂದರೆ ಹೇಳಲು ಅಸಾದ್ಯ ಏಕೆಂದರೆ ಒಬ್ಬರನ್ನು ನೋಡಿ ಇನ್ನೊಬ್ಬರು ಅಂದವಾಗಿ ಕಾಣಲು ಇಷ್ಟ ಪಡುತ್ತಾರೆ ಅದಕ್ಕಾಗಿಯೇ ವಾರಕ್ಕೆ ಒಮ್ಮೆ ಆದರೂ ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ ಆದರೆ ಬ್ಯೂಟಿ ಪಾರ್ಲರ್ ಹೋದಷ್ಟು ತಮ್ಮ ಅಂದ ಕೆಡುತ್ತದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ ಏಕೆಂದರೆ ಬ್ಯೂಟಿ ಪಾರ್ಲರ್ ಅಲ್ಲಿ ಮುಖಕ್ಕೆ ಮಸಾಜ್ ಮಾಡಿಸಿ ಕೊಳ್ಳುತ್ತಾರೆ ಆದರೆ ಅವರು ಮಸಾಜ್ ಮಾಡಲು ಬಳಕೆ ಮಾಡುವ ವಸ್ತುಗಳಲ್ಲಿ ಕೆಮಿಕಲ್ ಇರುತ್ತದೆ ಇದು ತಕ್ಷಣಕ್ಕೆ ಅಂದವಾಗಿ ಕಾಣಿಸಿದರು ತದ ನಂತರ ಚರ್ಮ ಹಾಳಾಗುತ್ತದೆ. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಅನ್ನು ಬಳಸುತ್ತಾರೆ ಆದರೆ ಇದನ್ನು ಮಾಡುವ ಬದಲು ನೈಸರ್ಗಿಕ ವಸ್ತುಗಳನ್ನು ಬಳಸುವುದು ಒಳ್ಳೆಯದು.
#ದಿನಕ್ಕೆ 5 ರಿಂದ 6 ಬಾರಿ ತಣ್ಣೀರು ಬಳಸಿ ಮುಖ ತೊಳೆಯಬೇಕು. ಅಕ್ಕಿ ತೊಳೆದ ನೀರನ್ನು ಹೊರ ಚೆಲ್ಲದೇ ಅದರಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ. ಸಮಯ ಸಿಕ್ಕಾಗ ರೊಜ್ ವಾಟರ್ ಹಚ್ಚಿಕೊಂಡು ಮುಖ ತೊಳೆಯಿರಿ. ಇವೆಲ್ಲದರ ಜೊತೆಗೆ ಒಂದು ಪೇಸ್ಟ್ ಅನ್ನು ತಯಾರಿಸಿಕೊಂಡು ಬಳಕೆ ಮಾಡಿದರೆ ತುಂಬಾ ಒಳ್ಳೆಯದು ಅದು ಹೇಗೆ ಎಂದು ತಿಳಿಯೋಣ ಬನ್ನಿ. ಮೊದಲು ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ನುಣ್ಣಗೆ ಅರೆದು ಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ರೋಜ್ ವಾಟರ್ ಹಾಗೂ ಒಂದೆರಡು ಹನಿ ಗ್ಲಿಸರಿನ್ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಮೂರು ವಸ್ತುಗಳು ಸೇರಿ ಸಿದ್ಧವಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯಬೇಕು. ಹೀಗೆ ಮಾಡುತ್ತಾ ಬಂದರೆ ಮುಖದ ಕಾಂತಿ ಯಾವಾಗಲೂ ಹೊಳೆಯುತ್ತದೆ. ಹಾಗೂ ನೀವು ಯಾವುದೇ ಮೇಕಪ್ ಮಾಡಿಲ್ಲ ಅಂದರು ಕೂಡ ಅಂದವಾಗಿ ಕಾಣಲು ಸಹಾಯ ಮಾಡುತ್ತದೆ.
#ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಿಕರಿದ ತಿಂಡಿಗಳು, ಸಂಸ್ಕರಿಸಿದ ಆಹಾರಗಳು ಮತ್ತು ಆಮ್ಲಿಯ ಆಹಾರ ಪದಾರ್ಥಗಳು ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸದಾ ಪೌಷ್ಟಿಕತೆ ತುಂಬಿರುವ ಆಹಾರಗಳ ಸೇವನೆಗೆ ಒತ್ತು ಕೊಡಬೇಕು. ಸಸ್ಯಾಹಾರಿ ಆಹಾರಗಳು ಚರ್ಮದ ಆರೋಗ್ಯ ಮತ್ತು ಹೊಳಪಿಗೆ ಬಹಳ ಸಹಕಾರಿ. ಜೊತೆಗೆ ಆರೋಗ್ಯಕರ ಕೂದಲು ಸಹ ನಿಮ್ಮದಾಗುತ್ತದೆ. ಆದ್ದರಿಂದ ನಿಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಆದಷ್ಟು ಹೆಚ್ಚಿನ ತರಕಾರಿಗಳನ್ನು ಜೊತೆಗೆ ಹಣ್ಣುಗಳನ್ನು ಬಳಕೆ ಮಾಡಿ. ಹಸಿರು ಎಲೆ – ತರಕಾರಿಗಳ ಮಹತ್ವವನ್ನು ಮರೆಯಬೇಡಿ. ಹಲವಾರು ದ್ವಿದಳ ಧಾನ್ಯಗಳು, ಕಾಳುಗಳು, ಬೀಜಗಳು ನಿಮ್ಮ ಆಹಾರದಲ್ಲಿ ಸೇರಿರಲಿ.
#ಅರಿಶಿನ ಪುಡಿಶುದ್ಧ ಅರಿಶಿನವು ನಂಜುನಿರೋಧಕ ಎಂದು ಹೆಸರುವಾಸಿಯಾಗಿದೆ. ಮೊಡವೆಗಳ ವಿರುದ್ಧ ಹೋರಾಡುವ ಶಕ್ತಿ ಇರುವುದೂ ಅರಿಶಿನಕ್ಕೆ. ಇದು ಮುಖದ ಮೇಲೆ ಬೆಳೆವ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಅಷ್ಟೇ ಏಕೆ, ಅಂಡರ್ ಆರ್ಮ್ ಗೆ ಅರಿಶಿನ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಜೊತೆಗೆ, ಇದು ಸೋಂಕು ಉಂಟಾಗದಂತೆ ತಡೆಯುತ್ತದೆ, ಜೊತೆಗೆ ವಾಸನೆಯನ್ನು ತೊಲಗಿಸುತ್ತದೆ. ಮಜ್ಜಿಗೆ ಅಥವಾ ಕಬ್ಬಿನ ರಸದ ಜೊತೆಗೆ ಅರಿಶಿನ ಪುಡಿ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಕಣ್ಣಿನ ಕೆಳಗೆ, ಮುಖದ ಮೇಲೆ ಚೆನ್ನಾಗಿ ಹಚ್ಚಿ. ಇದು ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ಹೋಗಲಾಡಿಸಿ ಮುಖ ಸುಕ್ಕಗಾದಂತೆ ನೋಡಿಕೊಳ್ಳುತ್ತದೆ.