ದಿನಕ್ಕೊಂದು ಕಿತ್ತಳೆ ತಿಂದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ!

ಕಿತ್ತಳೆ ಹಣ್ಣನ್ನು ನೇರವಾಗಿಯೂ ಸೇವಿಸಬಹುದು ಅಥವಾ ಅದನ್ನು ರಸವಾಗಿಯೂ ಸೇವಿಸಬಹುದು. ಕಿತ್ತಳೆ ತಿನ್ನುವುದರಿಂದ ಚರ್ಮ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ. ಇದಲ್ಲದೆ, ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಮಲಬದ್ಧತೆಯವರೆಗಿನ ಸಮಸ್ಯೆಗಳನ್ನು ಹೋಗಲಾಡಿಸಲು ಇದು ಸಹಕಾರಿ ಆಗಿದೆ. ಕಿತ್ತಳೆ ಹಣ್ಣಿನ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯಿರಿ.

#ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ:ನೀವು ದೀರ್ಘಕಾಲದವರೆಗೆ ಕಿತ್ತಳೆ ರಸವನ್ನು ಸೇವಿಸಿದರೆ, ಅದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆಯಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ, ಅದರ ಸಹಾಯದಿಂದ ಇದು ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

#ಕಿತ್ತಳೆ ಹಣ್ಣಿನಲ್ಲಿ ಫೋಲಿಕ್ ಹಾಗೂ ಫೋಲೇಟ್ ಆಮ್ಲದ ಅಂಶ ಇರುವುದರಿಂದ ಇವು ಮೆದುಳಿನ ಬೆಳವಣಿಗೆಗೆ ಸಹಕಾರಿ ಆಗುತ್ತದೆ.

#ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:ಕಿತ್ತಳೆ ಹಣ್ಣುನ್ನು ಸೇವಿಸುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಡಿ, ಮತ್ತು ವಿಟಮಿನ್ ಎ ಸತ್ವ ಅಡಗಿದೆ ಜೊತೆಗೆ ಹಲವು ಸಂಯುಕ್ತಗಳಾದ ಕ್ಯಾರೋಟಿನಾಯಡ್ಸ್ ಮತ್ತು ಪ್ಲೆವೊನಾಯಡ್ಸ್ ಗಳು ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ

#ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ, ದೇಹದಲ್ಲಿ ಅಲ್ಸರ್ ಸಮಸ್ಯೆಯಿದ್ದರೆ ಅದನ್ನು ತಡೆಯುತ್ತದೆ. ಚರ್ಮ ಮತ್ತು ಕೂದಲನ್ನು ಉತ್ತಮವಾಗಿ ಸಂರಕ್ಷಣೆ ಮಾಡುವುದು ಕೂಡ ಕಿತ್ತಳೆ ಹಣ್ಣಿನ ಚಮತ್ಕಾರ.

#ಚರ್ಮದ ಆರೈಕೆಚರ್ಮವನ್ನು ಯಾವ ಹಣ್ಣು ಎಲ್ಲಕ್ಕಿಂತ ಹೆಚ್ಚು ಸುಂದರವಾಗಿಸುತ್ತದೆ..? ಇದಕ್ಕೆ ಉತ್ತರ ಆರೆಂಜ್ ಹೌದು ಕಿತ್ತಳೆ ನಿಮ್ಮ ಚರ್ಮವನ್ನು ಪೋಷಿಸುವ ನೈಸರ್ಗಿಕ ಎಣ್ಣೆಗಳನ್ನು ಹೊಂದಿರುತ್ತದೆ, ಇದು ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಇದರ ರೋಗ ನಿರೋಧಕಗಳು ಫ್ರೀರಾಡಿಕಲ್ ವಿರುದ್ಧ ಹೋರಾಡುತ್ತವೆ.

# ಕೆಮ್ಮು ಹಾಗೂ ಸೀತ ನಿವಾರಣೆಗೆ ನಿತ್ಯ ಒಂದು ಕಪ್ ಕಿತ್ತಳೆ ಹಣ್ಣಿನ ರಸ ಹಾಗೂ ಐದು ಚಮಚ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗುತ್ತದೆ.

#ಮೂತ್ರಪಿ೦ಡಗಳ ರೋಗಗಳನ್ನು ತಡೆಯುತ್ತವೆನಿಯಮಿತವಾಗಿ ಕಿತ್ತಳೆ ಹಣ್ಣಿನ ರಸವನ್ನು ಕುಡಿಯುವುದರಿ೦ದ ಮೂತ್ರಪಿ೦ಡಗಳ ರೋಗಗಳನ್ನು ತಡೆಗಟ್ಟಬಹುದು ಹಾಗೂ ಮೂತ್ರನಾಳಗಳಲ್ಲಿ ಹರಳುಗಳು ಉ೦ಟಾಗುವುದನ್ನೂ ಕೂಡ ತಡೆಗಟ್ಟಬಹುದು.

ಗಮನಿಸಿ :ಕಿತ್ತಳೆಯ ರಸವನ್ನು ಹಿತಮಿತವಾಗಿ ಕುಡಿಯಿರಿ. ಹಣ್ಣಿನ ರಸಗಳಲ್ಲಿರಬಹುದಾದ ಅಧಿಕ ಪ್ರಮಾಣದ ಸಕ್ಕರೆಯ ಅ೦ಶವು ದ೦ತಕ್ಷಯಕ್ಕೆ ಕಾರಣವಾಗಬಲ್ಲದು ಹಾಗೂ ಅವುಗಳಲ್ಲಿರುವ ಅಧಿಕ ಪ್ರಮಾಣದ ಆಮ್ಲದ ಅ೦ಶದಿ೦ದಾಗಿ, ಅವುಗಳ ಅಧಿಕ ಸೇವನೆಯಿ೦ದ ಹಲ್ಲುಗಳ ಎನಾಮೆಲ್ ಅಥವಾ ಹೊರಕವಚವು ಶಿಥಿಲಗೊಳ್ಳುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group