ಅಸಿಡಿಟಿ ನಿವಾರಿಸಲು ಸುಲಭ ಮನೆಮದ್ದು..!

ಯಾವುದು ಹೇಗೆ ಇರಲಿ ಅಸಿಡಿಟಿ ನಿಜಕ್ಕು ಒಂದು ಅಸೌಕರ್ಯಕರವಾದ ಅನುಭವ. ಕೆಲವೊಮ್ಮೆ ಇದಕ್ಕೆ ಪರಿಹಾರವಿಲ್ಲದೆ ನಾವು ಒದ್ದಾಡಿ ಹೋಗುತ್ತೇವೆ. ಆದರೆ ಕೆಲವೊಮ್ಮೆ ಅಂಟಾಸಿಡ್ ಬಾಟಲಿಯತ್ತ ನಮ್ಮ ಕೈ ಯಾಂತ್ರಿಕವಾಗಿ ಹೋಗುತ್ತದೆ. ಆದರೆ ಅದನ್ನು ಕುಡಿಯುವ ಮೊದಲು ನಿಮಗೆ ತಿಳಿದಿರಲಿ ಅದಕ್ಕಾಗಿ ಕೆಲವೊಂದು ಪ್ರಾಕೃತಿಕ ಪರಿಹಾರೋಪಾಯಗಳು ಸಹ ಇವೆಯೆಂದು. ಇವುಗಳು ಸಹ ಅಸಿಡಿಟಿಗೆ ಪರಿಹಾರವನ್ನು ನೀಡುತ್ತವೆ. ಆದರೆ ಇವುಗಳ ಒಂದು ಹೆಚ್ಚುಗಾರಿಕೆಯೆಂದರೆ ಇವುಗಳು ನಿಮ್ಮ ದೇಹದಲ್ಲಿ ಔಷಧಿಗಳಂತೆ ಅಡ್ಡ ಪರಿಣಾಮವನ್ನುಂಟು ಮಾಡುವುದಿಲ್ಲ.
#ತುಳಸಿ ಎಲೆಗಳುಇದರಲ್ಲಿರುವ ರಾಸಾಯನಿಕ ವಸ್ತುಗಳು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಜಠರದಲ್ಲಿ ಹೆಚ್ಚಿನ ಪ್ರಮಾಣದ ಲೋಳೆಯನ್ನು ಉತ್ಪತಿ ಮಾಡುವಂತೆ ಪ್ರೇರೇಪಿಸುತ್ತದೆ. ಜೊತೆಗೆ ತುಳಸಿಯು ಅಲ್ಸರ್ ನಿರೋಧಕ ಅಂಶಗಳನ್ನು ಸ್ವಾಭಾವಿಕವಾಗಿ ಹೆಚ್ಚಿಸುತ್ತದೆ. ಅಲ್ಲದೆ ತುಳಸಿಯು ಪೆಪ್ಟಿಕ್ ಆಸಿಡ್‍ನ ಪರಿಣಾಮಗಳನ್ನು ಕಡಿಮೆ ಮಾಡಿ ಅಸಿಡಿಟಿಯನ್ನು ನಿಯಂತ್ರಿಸುತ್ತದೆ. ಹೊಟ್ಟೆಯಲ್ಲಿ ವಾಯು ( ಗ್ಯಾಸ್) ಸಂಚಯವಾಗದಂತೆ ತಡೆಯುವಲ್ಲಿ ತುಳಸಿಯು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಅದಕ್ಕಾಗಿ ಊಟವಾದ ನಂತರ ಐದರಿಂದ ಆರು ತುಳಸಿ ಎಲೆಗಳನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ದೂರವಿರಬಹುದು.
#ಬಾಳೆಹಣ್ಣು pH ಅನ್ನು ಸಮತೋಲನಗೊಳಿಸುತ್ತದೆ (banana benefits). ಇದು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫೈಬರ್ ನಲ್ಲಿ ಸಮೃದ್ಧವಾಗಿದೆ. ಇದು ಅನ್ನನಾಳದಿಂದ ಹೊಟ್ಟೆಯಲ್ಲಿನ ಲೋಳೆಯವರೆಗೆ ರಕ್ಷಿಸುತ್ತದೆ. ಈ ಕಾರಣದಿಂದಾಗಿ ಇದು ಆಸಿಡಿಟಿಯನ್ನು ಹೋಗಲಾದುಸಲು ಸಹಾಯ ಮಾಡುತ್ತದೆ. ಇದಲ್ಲದೆ ಸೇಬು, ಕಲ್ಲಂಗಡಿ, ದಾಳಿಂಬೆ ಮತ್ತು ಪಪ್ಪಾಯಿಗಳು ಕೂಡಾ ಅತ್ಯಂತ ಪ್ರಯೋಜನಕಾರಿ. ಹಳೆಯ ಅಕ್ಕಿ, ಗೋಧಿ, ಬಾರ್ಲಿ, ದಾಳಿಂಬೆ, ನೆಲ್ಲಿಕಾಯಿ, ಸೌತೆಕಾಯಿ, ಇವುಗಳು ಆಮ್ಲೀಯತೆ ಅಥವಾ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.
#ದಾಲ್ಚಿನ್ನಿ (Cinnamon): ಇದು ನೈಸರ್ಗಿಕ ಅಂಟಾಸಿಡ್‍ನಂತೆ ಕಾರ್ಯ ನಿರ್ವಹಿಸಿ, ಜೀರ್ಣಕ್ರೀಯೆ ಮತ್ತು ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಿ , ಹೊಟ್ಟೆಗೆ ಆರಾಮ ನೀಡುತ್ತದೆ. ಜೀರ್ಣಾಂಗ ವ್ಯೂಹದ ಸೋಂಕನ್ನು ಸರಿ ಮಾಡಲು ದಾಲ್ಚಿನ್ನಿ ಚಹಾವನ್ನು ಸೇವಿಸಿ. ದಾಲ್ಚಿನ್ನಿ ಪೌಷ್ಟಿಕತೆಯ ಶಕ್ತಿ ಕೇಂದ್ರದಂತಿದ್ದು, ಅತ್ಯಂತ ಆರೋಗ್ಯದಾಯಕ.
#ಲವಂಗ (Clove): ಲವಂಗಗಳು ಕಾರ್ಮೆಟಿವ್ ಪರಿಣಾಮವನ್ನು ಹೊಂದಿವೆ. ಅವು ಜೀರ್ಣಾಂಗವ್ಯೂಹದಲ್ಲಿ ಗ್ಯಾಸ್‍ನ ಬೆಳವಣಿಗೆಯನ್ನು ತಡೆಯುತ್ತದೆ. ಕಿಡ್ನಿ ಬೀನ್ಸ್ ಅಥವಾ ಉದ್ದಿನ ಬೇಳೆಯ ಅಡುಗೆಗಳನ್ನು ತಯಾರಿಸುವಾಗ ಅದಕ್ಕೆ ಲವಂಗಗಳನ್ನು ಸೇರಿಸಲು ಮರೆಯದಿರಿ.
#ಜೀರಿಗೆ : ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಅಸಿಡಿಟಿಯನ್ನು ನಿವಾರಿಸಿಕೊಳ್ಳಬಹುದು.
#ತಣ್ಣಗಿನ ಹಾಲು : ಹಾಲಿನಲ್ಲಿ ಕ್ಯಾಲ್ಸಿಯಂ ಯಥೇಚ್ಛವಾಗಿರುತ್ತದೆ. ಈ ಕ್ಯಾಲ್ಸಿಯಂ ನಮ್ಮ ಉದರದಲ್ಲಿ ಅಸಿಡ್ ಸಂಚಯಗೊಳ್ಳುವುದನ್ನು ತಡೆಯುತ್ತದೆ. ಒಂದು ಲೋಟ ಹಾಲನ್ನು ಸೇವಿಸುವುದರಿಂದಾಗಿ ಅಸಿಡಿಟಿಯನ್ನು ದೂರವಿಡಬಹುದು. ತಣ್ಣಗಿನ ಹಾಲು ಹೊಟ್ಟೆ ಉರಿಯಿಂದ ತಕ್ಷಣ ಉಪಶಮನ ನೀಡುತ್ತದೆ. ಇದನ್ನು ತಣ್ಣಗಿನ ಹಾಲನ್ನು ಸೇವಿಸುವಾಗ ನೀವು ಸಹ ಗಮನಿಸಬಹುದು. ಸಕ್ಕರೆ ಇಲ್ಲದ, ಕೆನೆ ತೆಗೆದ ಹಾಲು ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
#ಕಷಾಯ ತಯಾರಿಸಿ, ಊಟಕ್ಕೆ ಮೊದಲು 10-15 ಮಿಲಿ ಕುಡಿಯಿರಿ.ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು 4 ಬಾರಿ ನೀರಿನಲ್ಲಿ 15 ನಿಮಿಷಗಳ ಕಾಲ ಕುದಿಸಿ.ಕಷಾಯವನ್ನು ಫಿಲ್ಟರ್ ಮಾಡಿ ಮತ್ತು ಸ್ವಲ್ಪ ತುಪ್ಪವನ್ನು ಸೇರಿಸಿ ದಿನಕ್ಕೆ ಎರಡು ಬಾರಿ 30 ಮಿಲಿ ಕುಡಿಯಿರಿ.ಒಣ ಶುಂಠಿ ಪುಡಿಯನ್ನು ಅರ್ಧ ಚಮಚ ತೆಗೆದುಕೊಂಡು ಸ್ವಲ್ಪ ಫ್ರೈ ಮಾಡಿ 1 ಚಮಚ ಸಕ್ಕರೆ ಸೇರಿಸಿ ಬೆಳಗಿನ ಉಪಾಹಾರಕ್ಕೆ ಮೊದಲು ಸೇವಿಸಿ.