ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮಗಳು!

ತಾಜಾ ಹಣ್ಣುಗಳನ್ನು ತಿನ್ನುವುದು ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಹಣ್ಣುಗಳನ್ನು ತಿಂದ ನಂತರವೂ, ಇಂದಿನ ದಿನಗಳಲ್ಲಿ ನಾವು ಸಂಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಹಣ್ಣುಗಳನ್ನು ತಿನ್ನಲು ನಮಗೆ ಸರಿಯಾದ ಮಾರ್ಗ ತಿಳಿದಿಲ್ಲ. ಹೌದು, ಪೌಷ್ಟಿಕತಜ್ಞ ರುಜುತಾ ದಿವಾಕರ್ ಅವರ ಪ್ರಕಾರ, ಹಣ್ಣುಗಳನ್ನು ತಿನ್ನುವುದರ ಪ್ರಯೋಜನಗಳನ್ನು ಪಡೆಯಲು, ನಾವು ಅವುಗಳನ್ನು ಸರಿಯಾಗಿ ತಿನ್ನುವ ಕ್ರಮಗಳ ಬಗ್ಗೆ ತಿಳಿದಿರಬೇಕು. ಹಣ್ಣುಗಳನ್ನು ತಿನ್ನುವುದರಿಂದ ಆಗುವ ಲಾಭಗಳು ಮತ್ತು ಸರಿಯಾದ ಮಾರ್ಗಗಳ ಬಗ್ಗೆ ತಿಳಿಯಿರಿ.

#ಹಣ್ಣಿನ ರಸ ಕುಡಿಯಬೇಕೆಂದೆನಿಸಿದಾಗ, ಕ್ಯಾನ್‌ಗಳಲ್ಲಿ ಸಂಗ್ರಹಿಸಿಟ್ಟ ಹಣ್ಣಿನ ರಸ ಕುಡಿಯುವ ಬದಲು ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಅಷ್ಟೇ ಅಲ್ಲದೆ, ಬಿಸಿ ಮಾಡಿದ ಹಣ್ಣಿನ ರಸವನ್ನು ಕುಡಿಯಬೇಡಿರಿ. ಬೇಯಿಸಿದ ಹಣ್ಣುಗಳನ್ನು ತಿನ್ನಬೇಡಿ. ಇದರಿಂದ ನಿಮಗೆ ರುಚಿ ಸಿಗುತ್ತದೆಯೇ ಹೊರತು, ಪೋಷಕಾಂಶಗಳು ಸಿಗುವುದಿಲ್ಲ.

#ಹಣ್ಣು ತಿಂದ ಬಳಿಕ, ಬೇರೆ ಯಾವುದೇ ಆಹಾರ ತಿನ್ನುವ ಮೊದಲು ಕನಿಷ್ಠ 30 ನಿಮಿಷಗಳ ಅಂತರವನ್ನು ಪಾಲಿಸುವುದು ಅತ್ಯವಶ್ಯಕ. ಒಂದು ವೇಳೆ ನೀವು ಅದಾಗಲೇ ಊಟವನ್ನು ಮಾಡಿಯಾಗಿದ್ದರೆ, ಸುಮಾರು 3 ಗಂಟೆಗಳ ಬಳಿಕ ಹಣ್ಣನ್ನು ಸೇವಿಸಿರಿ. ಆದ್ದರಿಂದ ತಿಂದ ಹಣ್ಣು ಹೊಟ್ಟೆಗೆ ಹೋಗುವ ಮೊದಲು, ನೀವು ಸೇವಿಸಿದ ಎಲ್ಲ ಆಹಾರಗಳು ಜೀರ್ಣವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

#1- ಯಾವುದೇ ಹಣ್ಣನ್ನು ಒಂದೇ ಸೇವಿಸಿ. ಇತರ ಹಣ್ಣುಗಳನ್ನು ಇದರೊಂದಿಗೆ ಬೆರೆಸಿ ಸೇವಿಸಿಬೇಡಿ.ನಿಯಮ

2- ಹಣ್ಣು ತಿನ್ನಲು ಸರಿಯಾದ ಸಮಯ ಬೆಳಿಗ್ಗೆ, ವ್ಯಾಯಾಮ(Gym)ದ ನಂತರ ಅಥವಾ ಸಂಜೆ.ನಿಯಮ

3- ನೀವು ಹಣ್ಣನ್ನು ತಿಂದಾಗಲೆಲ್ಲ ಅದನ್ನು ಚೆನ್ನಾಗಿ ಅಗಿದು ತಿನ್ನಿ. ಆದ್ರೆ ಅದರ ರಸ ಹೊರತೆಗೆದು ಸೇವಿಸಬೇಡಿ.

#ಖಾಲಿ ಹೊಟ್ಟೆಯಲ್ಲಿ ತಿಂದರೆ ದೇಹಕ್ಕೆ ಹಾನಿ ಮಾಡುವ ಕೆಲವು ಹಣ್ಣುಗಳಿವೆ. ಇಂತಹ ಹಲವು ಪ್ರಶ್ನೆಗಳು ಸುತ್ತಲೂ ಇರುವುದರಿಂದ, ನೀವು ಸರಿಯಾದ ಉತ್ತರವನ್ನು ಹುಡುಕಿಕೊಳ್ಳಬೇಕು.

#ಹಣ್ಣುಗಳು ಸಿಹಿಯಾಗಿರುವುದರಿಂದ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹಾಗಾಗಿ ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಹೆಚ್ಚುವರಿ ಕ್ಯಾಲೋರಿಗಳು ಸೇರುತ್ತವೆ. ಅದೇ ಸಮಯದಲ್ಲಿ, ಇನ್ಸುಲಿನ್ ಮಟ್ಟವು ಹೆಚ್ಚಾಗುತ್ತದೆ. ಹಾಗಾಗಿ ಊಟದ ನಂತರ ಹಣ್ಣುಗಳನ್ನು ತಿನ್ನದಿರುವುದು ಉತ್ತಮ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group