ಸೀತಾಫಲ ಹೆಣ್ಣಿನ ಉಪಯೋಗ ಗೊತ್ತೇ..!

ಸೀತಾಫಲ ಅತ್ಯಂತ ರುಚಿಕರವಾದ ಹಣ್ಣಾಗಿದೆ. ಆದರೆ ಈ ಹಣ್ಣನ್ನು ಬೀಜಗಳಿಂದ ಬೇರ್ಪಡಿಸಿ ತಿನ್ನುವುದು ಸ್ವಲ್ಪ ಕಷ್ಟ. ಈ ಹಣ್ಣಿನ ಹೊರ ಮೈ ಒರಟಾಗಿರುವುದರಿಂದ ಇಂಗ್ಲೀಷ್‍ನಲ್ಲಿ ಕಸ್ಟರ್ಡ್ ಆಪಲ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಸೀತಾಫಲ್ ಎಂದು ಕರೆಯುತ್ತಾರೆ.

ಸೀತಾಫಲ ಸೇವಿಸುವುದರಿಂದ ದೊರೆಯುವ ಕೆಲವು ಆರೋಗ್ಯ ಪ್ರಯೋಜನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

#ಆಯಾಸ ದೂರಮಾಡುತ್ತದೆ:ಜೀವನಶೈಲಿ ಮತ್ತು ರೋಗಗಳು ಸೇರಿದಂತೆ ಹಲವಾರು ಅಂಶಗಳಿಂದ ಆಯಾಸವು ಉಂಟಾಗುತ್ತದೆ. ಸೀತಾಫಲದ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಮತ್ತು ಖನಿಜಾಂಶಗಳು ನಿರಂತರವಾಗಿ ಶಕ್ತಿಯನ್ನು ಒದಗಿಸುತ್ತದೆ.

#ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:ಸೀತಾಫಲದಲ್ಲಿ ಕಬ್ಬಿಣಾಂಶ ಮತ್ತು ಫೈಬರ್ ಅಧಿಕವಾಗಿದೆ. ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಇದರಲ್ಲಿರುವ ಆಹಾರದ ನಾರು ಟೈಪ್ 2 ಮಧುಮೇಹವನ್ನು ತಡೆಯುತ್ತದೆ. ನಿಯಾಸಿನ್ ಮತ್ತು ಡಯೆಟರಿ ಫೈಬರ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

#ಸೀತಾಫಲ ಹಣ್ಣಿನ ಎಲೆಯನ್ನು ಅಥವಾ ತೊಗಟೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಮತ್ತು ಹೇನುಗಳ ಸಮಸ್ಯೆ ದೂರವಾಗುತ್ತದೆ.

#ವಿಟಮಿನ್ ಎ ಪೋಷಕಾಂಶಗಳು ಕೂದಲು ಮತ್ತು ತ್ವಚೆಯ ಆರೈಕೆಗೆ ನಿರ್ಣಾಯಕವಾಗಿದೆ ಮತ್ತು ಸೀತಾಫಲ ಹಣ್ಣಿನಲ್ಲಿ ಇವುಗಳ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಹಣ್ಣಿನ ಬೀಜಗಳನ್ನು ಒಣಗಿಸಿ ಕೂದಲಿನಲ್ಲಿ ತಲೆಹೊಟ್ಟು ಹೋಗಲಾಡಿಸಲು ಬಳಸಲಾಗುತ್ತದೆ.

#ಸೀತಾಫಲದ ಎಲೆಗಳ ರಸವನ್ನು ದೇಹದ ಮೇಲಿನ ಗಾಯಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದೇ ಎಲೆಗಳನ್ನು ನೀರಿನಲ್ಲಿ ಬಿಸಿ ಮಾಡಿ ಆ ನೀರನ್ನು ಕುಡಿಯುವುದರಿಂದ ಮಧುಮೇಹ ಮತ್ತು ವೃದ್ಧಾಪ್ಯವನ್ನು ತಡೆಯುತ್ತದೆ.

#ಸೌಂದರ್ಯ ಹೆಚ್ಚಿಸುತ್ತದೆಸೀತಾಫಲದ ನಿಯಮಿತ ಸೇವನೆಯಿಂದ ತ್ವಚೆಯ ಸೆಳೆತ ಹೆಚ್ಚುತ್ತದೆ ಹಾಗೂ ಕಾಂತಿಯುಕ್ತವಾಗುತ್ತದೆ. ಪರಿಣಾಮವಾಗಿ ನೆರಿಗೆ ಮೂಡುವ ಮತ್ತು ಕಲೆಗಳು ಬೀಳುವ ಸಾಧ್ಯತೆ ಉಡುಗುತ್ತದೆ. ಇದಕ್ಕೆಲ್ಲಾ ಇದರಲ್ಲಿರುವ ವಿಟಮಿನ್ ಸಿ ಕಾರಣ. ಇದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ಹಾಗೂ ಕಲೆಯಿಲ್ಲದ ತ್ವಚೆಯನ್ನು ಪಡೆಯಲು ನೆರವಾಗುತ್ತದೆ.

#ಕೊಲೆಸ್ಟ್ರಾಲ್ ಕಡಿಮೆ:ಈ ಹಣ್ಣಿನಲ್ಲಿರುವ ನಿಯಾಸಿನ್ ಹಾಗೂ ಕರಗುವ ನಾರು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತವೆ.

#ರಕ್ತಹೀನತೆಗೆ ಪರಿಹಾರ:ಸೀತಾಫಲದಲ್ಲಿ ರಕ್ತಕಣಗಳ ಉತ್ಪಾದನೆಗೆ ಸಹಕರಿಸುವ ಗುಣಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು, ತಾಮ್ರ, ಕಬ್ಬಿಣ ಅಂಶಗಳಿದ್ದು ರಕ್ತಕಣಗಳ ಉತ್ಪಾದನೆ ಹೆಚ್ಚಿಸುತ್ತವೆ. ನಿಯಮಿತವಾಗಿ ಸೀತಾಫಲ ಸೇವಿಸುತ್ತಿದ್ದರೆ ರಕ್ತಹೀನತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

#ಸೀತಾಫಲ ಹಣ್ಣಿನ ತೊಗಟೆಯಿಂದ ಕಷಾಯವನ್ನು ಸೇವಿಸುವುದರಿಂದ ಬೇಧಿ ಮತ್ತು ಆಮಶಂಕೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group