ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣುಗಳೂ

ರೋಗ ನಿರೋಧಕ ಶಕ್ತಿಯ ಅಭಾವವೆ ಮುಖ್ಯ ಕಾರಣ ಎಂದು. ಹೌದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಇದ್ದರೆ ಕಾಯಿಲೆಗಳು ಬೇಗನೆ ನಿಮ್ಮ ದೇಹವನ್ನು ಪ್ರವೇಶಿಸಿ ನಿಮ್ಮನ್ನು ಬೇಗ ಕಾಯಿಲೆ ಇರುವ ವ್ಯಕ್ತಿಯನ್ನಾಗಿ ಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸಲು ಹಣ್ಣುಗಳನ್ನು ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ತಂತಾನೆ ಹೆಚ್ಚುತ್ತದೆ.
#ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿವಿ ಹಣ್ಣಿನಷ್ಟು ಉತ್ತಮವಾದ ಹಣ್ಣು ಬೇರೆ ಯಾವುದು ಇಲ್ಲ. ಏಕೆಂದರೆ ಅದರಲ್ಲಿರುವ ಆರೋಗ್ಯದ ಅಂಶವು ನಮ್ಮ ದೇಹವನ್ನು ಚೆನ್ನಾಗಿ ಇರುವಂತೆ ಮಾಡುತ್ತದೆ ಹಾಗೂ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮ್ಮ ದೇಹದಲ್ಲಿರುವ ರಕ್ತವನ್ನು ಸಹ ಇದು ಶುದ್ದಿ ಮಾಡುತ್ತದೆ. ಈ ಹಣ್ಣನ್ನು ಹಲವಾರು ಕಾಯಿಲೆ ಇರುವವರು ತಿನ್ನುವುದರಿಂದ ಎಂತಹುದೇ ಕಾಯಿಲೆಯೂ ಸಹ ನಿಯಂತ್ರಣಕ್ಕೆ ಬರುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದ್ರಾಕ್ಷಿ ಹಣ್ಣನ್ನು ಸಹ ತಿನ್ನಬಹುದು. ಈ ದ್ರಾಕ್ಷಿ ಹಣ್ಣಿನಲ್ಲೂ ಸಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿವೆ. ಇದನ್ನು ತಿನ್ನುವುದರಿಂದ ನಿಮಗೆ ಇರುವ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಆದ್ದರಿಂದ ಇಂತಹ ಹಣ್ಣುಗಳನ್ನು ತಿನ್ನುವುದರಿಂದ ನಿಮಗೆ ಬರುವ ಕಾಯಿಲೆಯ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಬಹುದು. ಇದು ನಿಮಗೆ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ.
#ಬಾಳೆಹಣ್ಣು:ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ, ಇದು ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
#ಸೇಬು: ಇದರಲ್ಲಿ ವಿಟಮಿನ್ ಸಿ ಮತ್ತು ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ. ಇದು ಯಾವುದೇ ರೋಗವನ್ನು ತಡೆಯುತ್ತದೆ. ಅದೇ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸೇಬುಗಳು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತವೆ.
#ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು,ಮೋಸಂಬಿ ಹಣ್ಣು, ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ ಎಂದು ಸಲಹೆ ನೀಡಲಾಗಿದೆ. ಕೆಂಪು ದೊಣ್ಣೆ ಮೆಣಸಿನ ಕಾಯಿ, ಗೆಡ್ಡೆ ಕೋಸು, ಬೆಳ್ಳುಳ್ಳಿ, ಶುಂಠಿ ಕೂಡಾ ಆರೋಗ್ಯದಾಯಕ ಆಹಾರಗಳಾಗಿವೆ.
#ಡ್ರ‍್ಯಾಗನ್ ಹಣ್ಣು ಅತ್ಯಂತ ಹೆಸರುವಾಸಿಯಾದ ಹಣ್ಣಾಗಿದೆ. ಇದರಲ್ಲಿನ ಪೋಷ್ಟಿಕಾಂಶವು ಹಾಗೂ ವಿಟಮಿನ್ ಗಳು ನಿಮ್ಮ ದೇಹಕ್ಕೆ ಚೆನ್ನಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿರುತ್ತವೆ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೇರೆ ಕಾಯಿಲೆ ವಿರುದ್ಧ ಹೋರಾಡುವ ಹಲವು ಅಂಶಗಳನ್ನು ಸಹ ಇದು ನೀಡುತ್ತದೆ. ಇದು ಕೇವಲ ರೋಗನಿರೋಧಕ ಶಕ್ತಿಯನ್ನು ಮಾತ್ರ ಹೆಚ್ಚಿಸುವುದಲ್ಲ, ತೂಕ ಹೆಚ್ಚಳ ಸಮಸ್ಯೆ ಎದುರಿಸುತ್ತಿರುವವರಿಗೂ ಸಹ ಇದು ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.