ಹಲ್ಲು ನೋವ್ವಿನ ಸಮಸ್ಯೆಗೆ ಮನೆಮದ್ದು ..!

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಕೇವಲ ಗಂಟಲ ಕೆರೆತಕ್ಕೆ ಮಾತ್ರವಲ್ಲಿ ಹಲ್ಲು ನೋವಿನ ಮೇಲೂ ಕೂಡ ಪರಿಣಾಮ ಬೀರುತ್ತದೆ. ಉಪ್ಪು ನೀರು ನೈಸರ್ಗಿಕ ಸೋಂಕು ನಿವಾರಕದಂತೆ ಕಾರ್ಯನಿರ್ವಹಿಸುತ್ತದೆ. ಹಲ್ಲುಗಳಲ್ಲಿ ಏನಾದರೂ ಸಿಲುಕಿಕೊಂಡಿದ್ದರೆ ಅಥವಾ ನೋವು ಇದ್ದರೆ ಅಥವಾ ವಸಡುಗಳಲ್ಲಿ ಊತವಿದ್ದರೆ 1 ಗ್ಲಾಸ್ ನೀರಿನಲ್ಲಿ 1/2 ಟೀ ಸ್ಪೂನ್ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿ.
#ಪುದೀನಾ ಎಣ್ಣೆಯು ಹಲ್ಲು ನೋವಿಗೆ ಉತ್ತಮ ಪರಿಹಾರ ಎನ್ನಲಾಗುತ್ತದೆ. ಇದರಲ್ಲಿ ಮೆಂಥಾಲ್ ಇದ್ದು, ನೋವು ಹೋಗಲಾಡಿಸಲು ಸಹಕಾರಿ. ಪುದೀನಾ ಎಣ್ಣೆಗೆ ಯಾವುದಾದರೂ ಎಣ್ಣೆಯನ್ನು ಮಿಕ್ಸ್ ಮಾಡಿ ಹತ್ತಿಯಲ್ಲಿ ನೋವಿರುವ ಜಾಗಕ್ಕೆ ಹಚ್ಚಿ, ಇದು ನೋವು ನಿವಾರಿಸಲು ಸಹಾಯ ಮಾಡುತ್ತದೆ.
#ಬೆಳ್ಳುಳ್ಳಿ : ಬೆಳ್ಳುಳ್ಳಿಯಲ್ಲಿ ಒಸಡಿನ ನೋವನ್ನು ನಿವಾರಿಸುವಂತಹ ಗುಣಗಳು ಇವೆ. ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು ಮತ್ತು ಅದು ಕೆಟ್ಟ ಮಟ್ಟಕ್ಕೆ ಹೋಗದಂತೆ ತಡೆಯುತ್ತದೆ.
#ಲವಂಗದೆಣ್ಣೆ: ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿರುವ ಲವಂಗ ಹಲ್ಲು ನೋವು ನಿವಾರಣೆಗೆ ಒಳ್ಳೆಯ ಔಷಧ. ಲವಂಗದ ಎಣ್ಣೆಯನ್ನು ನೋವಿರುವ ಹಲ್ಲಿನ ಮೇಲೆ ಹಾಕಿ. ಎಣ್ಣೆ ಒಸಡಿನ ಮೇಲೆ ಬೀಳದ ಹಾಗೆ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಒಸಡು ಉರಿಯುತ್ತದೆ. ಒಂದು ವೇಳೆ ಬಿದ್ದರೂ ಉರಿ ಹೆಚ್ಚು ಸಮಯ ಇರುವುದಿಲ್ಲ.ಕೆಲ ನಿಮಿಷಗಳಲ್ಲಿ ಸರಿಹೋಗುತ್ತದೆ.
# ಶುಂಠಿ ಮತ್ತು ಮೆಣಸು. ಇವುಗಳಲ್ಲಿ ಇರುವಂತಹ ಕೆಲವೊಂದು ಅಂಶಗಳಿಂದಾಗಿ ಅದು ನೋವು ನಿವಾರಣೆ ಮಾಡುವುದು. ಮೆಣಸಿನಲ್ಲಿ ಇರುವಂತಹ ಕ್ಯಾಪ್ಸೈಸಿನ್ ಎನ್ನುವ ಅಂಶವು ಮೆದುಳಿನ ನೋವಿನ ಸಂದೇಶವು ಹೋಗದಂತೆ ತಡೆಯುವುದು.ಶುಂಠಿ ಮತ್ತು ಮೆಣಸನ್ನು ಸರಿಯಾದ ಪ್ರಮಾಣದಲ್ಲಿ ಹಾಕಿಕೊಂಡು ಪೇಸ್ಟ್ ಮಾಡಿ. ಇದರ ಬಳಿಕ ಅದನ್ನು ಹತ್ತಿ ಉಂಡೆಯಲ್ಲಿ ಅದ್ದಿಕೊಂಡು ಹಲ್ಲುಗಳ ಮೇಲಿಡಿ. ಇದನ್ನು ನೋವು ಕಡಿಮೆ ಆಗುವ ತನಕ ಹಾಗೆ ಬಿಡಿ.
#ಹಲ್ಲುಗಳ ನೋವಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದು. ಮೆಂಥಾಲ್ ಅಂಶವು ಪುದೀನಾದಲ್ಲಿದ್ದು, ಇದು ನೋವು ನಿವಾರಕವಾಗಿ ಕೆಲಸ ಮಾಡುವುದು ಮತ್ತು ಇದನ್ನು ಹಲವಾರು ಉತ್ಪನ್ನಗಳಲ್ಲಿ ಕೂಡ ಬಳಕೆ ಮಾಡಲಾಗಿದೆ.ಹಲ್ಲು ನೋವು ನಿವಾರಣೆ ಮಾಡಲು 10-15 ಹನಿಯಷ್ಟು ಪುದೀನಾ ಎಣ್ಣೆಯನ್ನು ಎರಡು ಚಮಚದಷ್ಟು ನೈಸರ್ಗಿಕ ಎಣ್ಣೆಯ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣ ಮಾಡಿರುವ ಪರಿಣಾಮವಾಗಿ ಅದು ಹಲ್ಲು ಮತ್ತು ಒಸಡಿಗೆ ಆಗುವಂತಹ ಹಾನಿ ತಪ್ಪಿಸುವುದು. ಒಂದು ಹತ್ತಿ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿಕೊಂಡು ಹಲ್ಲುಗಳಿಗೆ ಹಚ್ಚಿ.
#ಈರುಳ್ಳಿಯನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ನೋವಿರುವ ಹಲ್ಲುಗಳ ಭಾಗದಲ್ಲಿಟ್ಟು ಅಗಿಯಿರಿ.
#ಸಾಮಾನ್ಯವಾಗಿ ಈರುಳ್ಳಿಯಲ್ಲಿರುವ ನಂಜುನಿರೋಧಕ ಗುಣಗಳು, ಎಂತಹ ಹಲ್ಲು ನೋವನ್ನು ಕೂಡ ಕಡಿಮೆಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಒಂದು ವೇಳೆ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಹಸಿ ಈರುಳ್ಳಿಯನ್ನು ಸಣ್ಣ ಭಾಗಗಳಾಗಿ ಕತ್ತರಿಸಿ ನೋವಿರುವ ಹಲ್ಲುಗಳ ಭಾಗದಲ್ಲಿಟ್ಟು ಅಗಿಯಿರಿ. ಇಲ್ಲದಿದ್ದರೆ ಹತ್ತು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವೊಂದನ್ನು ಒಸಡಿಗೆ ತಗಲುವಂತೆ ಇರಿಸಿಕೊಂಡಿರಿ.