ಮೆಂತ್ಯೆ ಸೊಪ್ಪಿನ ಆರೋಗ್ಯ ಪ್ರಯೋಜನ

ಅಡುಗೆಗೆ ಬಳಸಲ್ಪಡುವ ಮೆಂತ್ಯೆಯಲ್ಲಿ ಹಲವಾರು ರೀತಿಯ ವೈದ್ಯಕೀಯ ಗುಣಗಳಿವೆ ಎಂದು ನಿಮಗೆ ತಿಳಿದಿದೆಯಾ? ಮೆಂತ್ಯೆಯಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯಾಸಿನ್, ಪೊಟಾಷಿಯಂಗಳಿವೆ.
#ಇದರಲ್ಲಿ ಈಸ್ಟೋಜನ್ ಗುಣಲಕ್ಷಣಗಳನ್ನು ಹೊಂದಿರುವ ಒಂದು ಸಂಯುಕ್ತ ಡಿಯೊಸ್ಗನಿನ್ ಸಂಯುಕ್ತವಿದೆ. ಅದೇ ರೀತಿ ಸ್ಟಿರಾಯ್ಡ್ ಸ್ಯಾಪೊನಿನ್ ಗಳಿವೆ. ಮೆಂತ್ಯೆಯಲ್ಲಿರುವ ಈ ಗುಣಗಳು ನಿಮ್ಮ ಸೌಂದರ್ಯ ರಕ್ಷಣೆಯ ಜತೆಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.ಮೆಂತ್ಯದ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಕ್ಷದೊಂದಿಗೆ ತಿನ್ನುವುದರಿಂದ ಅಂಗಾಂಗಗಳ ನೋವು ನಿವಾರಣೆಯಾಗುತ್ತದೆ.
#ಕೊಬ್ಬರಿ ಎಣ್ಣೆಗೆ ಮೆಂತ್ಯದ ಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಅಪ್ರಾಪ್ತ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. ಈ ಅವಧಿಯಲ್ಲಿ ಪ್ರತಿದಿನ ಬಿಸಿನೀರನ ಬದಲು ತಣ್ಣೀರಿನಲ್ಲಿ ತಲೆಗೆ ಸ್ನಾನ ಮಾಡಬೇಕು.
#ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವುದಕ್ಕೆ ಮುಂಚೆ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮುಖದ ಚರ್ಮ ಸುಕ್ಕುಗಟ್ಟುವುದನ್ನು ನಿವಾರಿಸಲು ಇದು ಸುಲಭ ಮಾರ್ಗ.
#ಮೆಂತ್ಯದ ಸೊಪ್ಪನ್ನು ಆಗಾಗ್ಗೆ ಬಳಸುವುದರಿಂದ ಮೈಕೈನೋವು, ಬೆನ್ನು ನೋವು, ಸೊಂಟ ನೋವು ಗುಣವಾಗುತ್ತದೆ.ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಅಂಗೈ ಅಂಗಾಲುಗಳಿಗೆ ಲೇಪಿಸಿಕೊಂಡರೆ ಅಂಗಾಲು ಅಂಗೈ ಉರಿ ಉಪಶಮನವಾಗುವುದು.
#ಎಳೆಯ ಮಗುವಿಗೆ ಎದೆಹಾಲು ಮಾತ್ರ ಆಹಾರದ ಮೂಲವಾಗಿರುವುದು. ಎದೆಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆಲ್ಲೂ ಸಿಗದು. ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದನ್ನು ತರಕಾರಿ ಅಥವಾ ಗಿಡಮೂಲಿಕೆ ಚಾದ ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆಹಾಲು ಉತ್ಪತ್ತಿ ವೃದ್ಧಿಸುವುದು. ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.
#ವಿಟಮಿನ್ ಕೆ: ಬಸಳೆ, ಪುದೀನಗಳಂತಹ ಸೊಪ್ಪಿಗೆ ಮೆಂತೆಸೊಪ್ಪು ಹೆಚ್ಚು ಸ್ಪರ್ಧಾತ್ಮಕ ಪೈಪೋಟಿ ನೀಡುವುದು. ಇವುಗಳಲ್ಲಿರುವ ವಿಟಮಿನ್ ಕೆ ಪ್ರಮಾಣದಷ್ಟೇ ಮೆಂತೆ ತನ್ನ ಒಡಲಲ್ಲೂ ಸಮೃದ್ಧವಾದ ವಿಟಮಿನ್ ಕೆಯನ್ನು ಹೊಂದಿದೆ. ಇದು ಕಿಣ್ವಗಳ ಆರೈಕೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತದೆ.