ಹಾಗಲಕಾಯಿ ಜ್ಯೂಸ್: ಆರೋಗ್ಯಕ್ಕೆ ಸಿಹಿ!

ಹಾಗಲಕಾಯಿ ರಸದ ಪ್ರಯೋಜನಗಳು:ಹಾಗಲಕಾಯಿಯ ರಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.
#ರೋಗಗಳಿಂದ ದೂರವಿರುತ್ತೀರಿ:ಹಾಗಲಕಾಯಿಯ ರಸವು (Bitter Gourd Juice benefits) ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವವರಿಗೆ ವರದಾನವಿದ್ದಂತೆ. ಏಕೆಂದರೆ, ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದು ಎಂದರೆ ನಿಮ್ಮ ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ದುರ್ಬಲವಾಗಿದೆ ಎಂದರ್ಥ. ಅದನ್ನು ಬಲಪಡಿಸಲು ವಿಟಮಿನ್ ಸಿ ಅಗತ್ಯವಿದೆ ಮತ್ತು ಹಾಗಲಕಾಯಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇರುತ್ತದೆ.
#ರಕ್ತ ಶುದ್ಧೀಕರಣ ಮತ್ತು ರಕ್ತದ ಹರಿವು ಸರಿಯಾಗಿರುವುದರಿಂದ ಕೂದಲು ಕೂಡ ಪ್ರಯೋಜನ ಪಡೆಯುತ್ತದೆ. ಈ ಕಾರಣದಿಂದಾಗಿ ಕೂದಲು ಬಲವಾಗಿರುತ್ತದೆ ಮತ್ತು ಉದ್ದವಾಗುತ್ತದೆ. ಏಕೆಂದರೆ, ಸರಿಯಾದ ರಕ್ತದ ಹರಿವಿನಿಂದಾಗಿ, ಸಾಕಷ್ಟು ಪೋಷಣೆ ಕೂದಲಿನ ಬೇರುಗಳನ್ನು ತಲುಪುತ್ತದೆ.
#ಹಾಗಲಕಾಯಿ ಜ್ಯೂಸ್ ತನ್ನಲ್ಲಿ ಶಕ್ತಿಯುತವಾದ ಔಷಧೀಯ ಗುಣಗಳನ್ನು ಒಳಗೊಂಡಿದೆ. ಹಾಗಾಗಿ ಇದನ್ನು ಮಧುಮೇಹ ಇರುವವರು, ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತಂದುಕೊಳ್ಳಬೇಕು ಎನ್ನುವ ಜನರು ಸೇವನೆ ಮಾಡಬಹುದು.
#ಲಿವರ್ ಅಥವಾ ಯಕೃತ್ತನ್ನು ಶುದ್ಧಗೊಳಿಸುತ್ತದೆಕಹಿ ಹಾಗಲಕಾಯಿಯ ರಸವು ನಿಮ್ಮ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಯಕೃತ್ತಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣ ಪಡಿಸುತ್ತದೆ. ಕಹಿ ಕಲ್ಲಂಗಡಿ ರಸವು ಯಕೃತ್ತಿನಲ್ಲಿರುವ ಕಿಣ್ವಗಳ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಬಲಪಡಿಸುವ ಮೂಲಕ ಭವಿಷ್ಯದಲ್ಲಿ ನಾನಾ ಕಾರಣಗಳಿಂದ ಎದುರಾಗುವ ಲಿವರ್ ಅಥವಾ ಯಕೃತ್ತಿನ ವೈಫಲ್ಯವನ್ನು ತಡೆಯುತ್ತದೆ ಎಂದು ಅಧ್ಯಯನವು ಕಂಡು ಹಿಡಿದು ಸಾಬೀತು ಪಡಿಸಿದೆ.
#ಕ್ಯಾನ್ಸರ್‌ನಿಂದ ಕಾಪಾಡುತ್ತದೆ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಲು ಕ್ಯಾನ್ಸರ್ ಗೆ ತುತ್ತಾಗಿ ಬಾಡಲಿಯ ಕಾರ್ಯಕ್ಷಮತೆ ಕುಸಿಯುವುದು ಪ್ರಮುಖ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಕ್ಯಾನ್ಸರ್ ಗೆ ಕಾರಣವಾದ ಅಪಾಯಕಾರಿ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಪರಿಣಾಮವಾಗಿ ಬಾಡಲಿ ಸುಕ್ಷಮವಾಗಿ ಕಾರ್ಯನಿರ್ವಹಿಸಿ ರಕ್ತಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಿಕೊಡಲು ಸಾಧ್ಯವಾಗುತ್ತದೆ
ಗಮನಿಸಿ: ಆದರೆ ಅತಿಯಾದರೆ ಅಮೃತ ಕೂಡ ವಿಷ ಎನ್ನುವಂತೆ ಹೆಚ್ಚಿನ ಪ್ರಮಾಣದಲ್ಲಿ ಹಾಗಲಕಾಯಿ ಜ್ಯೂಸ್ ಸೇವನೆ ಮಾಡಲು ಹೋಗಬಾರದು.