ಬೆಂಡೆಕಾಯಿಯ ಹಲವು ಪ್ರಯೋಜನಗಳು!

ಬೆಂಡೆಕಾಯಿಯಲ್ಲಿ ಕಬ್ಬಿಣದ ಅಂಶ, ಫೈಬರ್ ಅಂಶ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಆದ್ದರಿಂದ ಇದು ಹೃದಯಕ್ಕೆ, ಕರುಳಿಗೆ ಒಳ್ಳೆಯದು. ದೇಹದ ತೂಕ ಇಳಿಸಲು ಕೂಡ ಬೆಂಡೆಕಾಯಿ ಉಪಯುಕ್ತ. ಅಷ್ಟೇ ಅಲ್ಲದೆ ಇದು ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದೊಳ್ಳೆಯ ಮದ್ದಾಗಿದೆ.
ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಇದು ಕರುಳಿನ ಕ್ರಿಯೆಯನ್ನು ನಿಯಂತ್ರಿಉಸುವುದ. ಪೆಕ್ಟಿನ್ ಕರುಳಿನಲ್ಲಿ ಊದಿಕೊಂಡು ಕರುಳಿನಲ್ಲಿರುವಂತಹ ಕಲ್ಮಷವು ಸುಲಭವಾಗಿ ಹೊರಹೋಗುವಂತೆ ಮಾಡುವುದು. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಬೆಂಡೆಕಾಯಿ ತಿಂದರೆ ಅದರಿಂದ ಲಾಭ ಪಡೆಯಬಹುದು.
#ಪೋಷಕಾಂಶಗಳು ಹೆಚ್ಚಿರಲಿವೆ: ಈ ತರಕಾರಿಯಲ್ಲಿ ಆಂಟಿಆಕ್ಸಿಡೆಂಟ್ಸ್ ಪ್ರಮಾಣ ಹೆಚ್ಚಿರಲಿದೆ. ಹಾಗೆಯೇ ಬೆಂಡೆಕಾಯಿಯಲ್ಲಿ ಫೊಲೇಟ್, ಲ್ಯೂಟಿನ್ ಹಾಗೂ ಬೀಟಾ ಕ್ಯಾರೊಟಿನ್ ಇರಲಿದ್ದು ಅದರಲ್ಲಿ ಪೋಷಕಾಂಶಗಳು ಹೆಚ್ಚಿರಲಿವೆ.
#ಬೆಂಡೆಯಲ್ಲಿ ನಾರಿನಾಂಶದ ಪ್ರಮಾಣವು ಅಧಿಕದಲ್ಲಿರುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ, ಅತಿಸಾರ, ಮಲಬದ್ದತೆ ಮತ್ತು ಆ್ಯಸಿಡಿಟಿಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ತರಕಾರಿಯಲ್ಲಿ ಗ್ಲೈಸೆಮಿಕ್ ಇನ್ಡೆಕ್ಸ್ ಕಡಿಮೆ ಮಟ್ಟದಲ್ಲಿರುವುದರಿಂದ ದೇಹದ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.
#ಮೊಡವೆಗಳನ್ನು ನಿವಾರಿಸಲು:ಮೊಡವೆಗಳು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದು ಗಂಡು-ಹೆಣ್ಣು ಎಂಬ ಭೇದವಿಲ್ಲ. ಎಲ್ಲರನ್ನು ಕಾಡುವ ಈ ಚರ್ಮ ಸಮಸ್ಯೆಗೆ ಬೆಂಡೆಕಾಯಿ ಬಳಸಬಹುದು. ಅದಕ್ಕಾಗಿ ಈ ಕೆಳಗಿನ ವಿಧಾನ ಬಳಸಿ.2 ರಿಂದ 3 ತಾಜಾ ಬೆಂಡೆಕಾಯಿ ತೆಗೆದುಕೊಂಡು, ಸ್ವಚ್ಛಗೊಳಿಸಿ. ನಂತರ ಅದನ್ನು ಕುದಿಸಿ, ತಣ್ಣಗಾಗಲು ಬಿಡಿ. ನಂತೆ ಪೇಸ್ಟ್ ತಯಾರಿಸಿ. ಈಗ ಪೇಸ್ಟ್ ಗೆ 2 ರಿಂದ 3 ಹನಿ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ನಿಮ್ಮ ಸ್ವಚ್ಛ ಮುಖದ ಮೇಲೆ ಹಚ್ಚಿ. ಅದು ಒಣಗುವವರೆಗೆ ಮುಖದ ಮೇಲೆ ಇರಿಸಿ. ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.
#ಮಲಬದ್ಧತೆ ಹಾಗೂ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಗಟ್ಟುವುದು: ಹೌದು ಬೆಂಡೆಕಾಯಿಯನ್ನು ಸೇವಿಸುವುದರಿಂದ ಮಲಬದ್ಧತೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ನಾವು ತಡೆಯಬಹುದು. ಬೆಂಡೆಕಾಯಿಯಲ್ಲಿ ನೀರನ್ನು ಉತ್ಪಾದಿಸುವ ಪ್ರಮಾಣವು ಹೆಚ್ಚಾಗುವುದನ್ನು ತಡೆಯುತ್ತದೆ. ಇನ್ನು ಹೆಚ್ಚಿನ ಕೊಲೆಸ್ಟ್ರಾಲ್ ನಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ಈ ತರಕಾರಿ ತಡೆಗಟ್ಟುತ್ತದೆ. ಹೌದು ಪ್ರತಿನಿತ್ಯ ಬೆಂಡೆಕಾಯಿಯನ್ನು ರಕ್ತದ ಮೂಲಕ ಸೇವಿಸುವ ಕೊಲೆಸ್ಟ್ರಾಲ್ ಸೇವನೆ. ದೇಹದಲ್ಲಿನ ಬೊಜ್ಜು ಕರಗಿ ಹೃದಯ ಆರೋಗ್ಯಕರವಾಗಿ ಇರುತ್ತದೆ.
#ಕಡಿಮೆ ಕ್ಯಾಲೊರಿ: 100 ಗ್ರಾಂನಷ್ಟು ಬೆಂಡೆಕಾಯಿಯಲ್ಲಿ ಕೇವಲ 33 ಕ್ಯಾಲೊರಿಗಳಿರುತ್ತವೆ. ಕ್ಯಾಲೊರಿ ಕಡಿಮೆ ಇರುವುದರಿಂದ ತೂಕದ ಸಮತೋಲನ ಕಾಯ್ದುಕೊಳ್ಳಬಹುದು
#ಎರಡು ಬೆಂಡೆ ಕಾಯಿಗಳನ್ನು ಚೆನ್ನಾಗಿ ತೊಳೆದು ಅದರ ಎರಡೂ ತುದಿಯನ್ನು ಕತ್ತರಿಸಿ ತೆಗೆದು ಹಾಕಿ ನಂತರ ಅದನ್ನು ಉದ್ದವಾಗಿ ಸೀಳಿ ಒಂದು ಗ್ಲಾಸ್ ನೀರಿನಲ್ಲಿ ಎರಡು ಬೆಂಡೆಕಾಯಿಗಳನ್ನು ಹಾಕಿ ಮುಚ್ಚಳ ಮುಚ್ಚಿ ರಾತ್ರಿಯೆಲ್ಲ ಅದನ್ನು ನೆನೆಯಲು ಬಿಟ್ಟು ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ನೀರನ್ನು ಸೇವಿಸಬೇಕು. ಈ ರೀತಿ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಕರುಳು ಮತ್ತು ಜೀರ್ಣಶಯಗಳು ಶುಭ್ರವಾಗುತ್ತದೆ. ಒಂದು ವೇಳೆ ಅಲ್ಸರ್ ಇದ್ದರೆ ಅದು ಕಡಿಮೆಯಾಗುತ್ತದೆ. ಗ್ಯಾಸ್ಟಿಕ್, ಮಲಬದ್ಧತೆ ಅಂತ ರೋಗಗಳು ದೂರವಾಗುತ್ತದೆ. ಬೆಂಡೆ ಕಾಯಿಯಲ್ಲಿ ಫೈಬರ್ ಅಂಶ, ವಿಟಮಿನ್ ಇ, ಸಿ, ಕೆ, ಮೆಗ್ನಿಷಿಯಂ ಹೇರಳವಾಗಿರುವುದರಿಂದ ಇದು ದೇಹಕ್ಕೆ ಒಳ್ಳೆಯ ಪೊಷಕಾಂಶಗಳನ್ನು ದೊರಕಿಸಿ ಕೊಡುವಲ್ಲಿ ಸಹಕಾರಿಯಾಗಿದೆ