ಆರೋಗ್ಯವನ್ನು ಸದೃಢ ಮಾಡಬಲ್ಲ ಕವಳಿ..!

ವಯಸ್ಸಿದ್ದಾಗಲೇ ತಿನ್ನಬಹುದಾದ ನೇರಳೆಗಿಂತ ರುಚಿಯಾದ, ಮಕ್ಕಳ ಆರೋಗ್ಯವನ್ನು ಸದೃಢ ಮಾಡಬಲ್ಲ ಕವಳಿ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಕಾಡಿನಲ್ಲಿ ಮುಳ್ಳು ಗಿಡದಲ್ಲಿ ಬೆಳೆಯುವ ಈ ಹಣ್ಣು ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಟಾನಿಕ್ ರೀತಿಯಲ್ಲಿ ಕೆಲಸ ಮಾಡುವ ಅತ್ಯಂತ ಸ್ವಾದಿಷ್ಟ ಹಣ್ಣು ಇಂತಹ ಹಣ್ಣಿನ ಕುರಿತು ಹೀಗ ತಿಳಿಯೋಣ ಬನ್ನಿ.

ಕವಳಿಗಿಡದ ವೈಜ್ಞಾನಿಕ ಹೆಸರು ಕ್ಯಾರಿಸ್ಸಾ ಕರಂಡಾಸ್. ಬಿಸಿಲು ಪ್ರದೇಶಗಳಲ್ಲೂ ಸುಲಭವಾಗಿ ಬೆಳೆಯುತ್ತದೆ. ಯಾವುದೇ ಆರೈಕೆಯಿಲ್ಲದೆ ಗುಡ್ಡಗಳ ಮೇಲೆ ಬೆಳೆಯುವ ಈ ಗಿಡವನ್ನು ರೈತರು ಬೇಲಿಗಾಗಿಯೂ ಉಪಯೋಗಿಸುತ್ತಾರೆ ಬೀಜದಿಂದ ಹೊಸ ಗಿಡವನ್ನು ಪಡೆಯಬಹುದು.

ಗಿಡದಲ್ಲಿ ಸುಮಾರು 6-8 ಕಾಯಿಗಳ ಗೊಂಚಲು ಅಲ್ಲಲ್ಲಿ ಬೆಳೆದಿರುತ್ತದೆ. ಚಿಕ್ಕದಿರುವಾಗ ಹಸಿರು ಬಣ್ಣವಿರುವ ಕವಳೆ ಕಾಯಿಗಳು ಮುಂದೆ ಹಸಿರು ಮಿಶ್ರಿತ ಗುಲಾಬಿ-ಕೆಂಪು ಬಣ್ಣವನ್ನು ಹೊಂದುತ್ತವೆ.

ಪೂರ್ತಿ ಮಾಗುವ ಮೊದಲು ಕಂದು-ಕೆಂಪು ಬಣ್ಣಕ್ಕೆ ತಿರುಗಿ ಪೂರ್ತಿ ಮಾಗಿದಾಗ ಕಪ್ಪಾಗುತ್ತದೆ.ಕವಳೆಕಾಯಿಯನ್ನು ಕಿತ್ತಾಗ ಅದರ ತೊಟ್ಟಿನಿಂದ ಅಂಟಂಟಾಗಿರುವ ಬಿಳಿಯಾದ ಹಾಲು ಒಸರುತ್ತದೆ. ಕವಳೆಹಣ್ಣಿನೊಳಗಡೆ ಅರ್ಧ ಚಂದ್ರಾಕೃತಿಯ, ಒಂದರ ಪಕ್ಕ ಒಂದು ಒತ್ತಾಗಿರುವ ತೆಳ್ಳನೆಯ ಚಿಕ್ಕ ಬೀಜಗಳಿರುತ್ತವೆ.

ಕವಳೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು. ಹಣ್ಣಿನಿಂದ ಜಾಮ್, ಜೆಲ್ಲಿಯಲ್ಲೂ ಬಳಸಲಾಗುತ್ತದೆ.

ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಪ್ರಾರಂಭವಾಗುವ ಇದು ಜೂನ್ ತಿಂಗಳವರೆಗೂ ಲಭ್ಯ

ಬೆಟ್ಟ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಇದು ಜೀವಸತ್ವಗಳ ಆಗರವೂ ಹೌದು.

ಇತ್ತೀಚೆಗೆ ಇದನ್ನ ಉದರ ಮತ್ತು ಹೃದಯ ಸಂಬಂಧಿ ಖಾಯಿಲೆಗಳ ಔಷಧ ತಯಾರಿಕೆಯಲ್ಲೂ ಉಪಯೋಗಿಸುತ್ತಾರಾದರೂ ಇದರ ಲಭ್ಯತೆ ಕಡಿಮೆ ಆಗುತ್ತಿರುವುದು ಪ್ರಕೃತಿಯ ಶಾಪವೇ ಸರಿ.ಉತ್ತರ ಕನ್ನಡದ ಬಹುತೇಕ ಕಡೆ ಸಿಗುವ ಇದು ಹಾವೇರಿ, ದಕ್ಷಿಣಕನ್ನಡ ಮತ್ತು ಉಡುಪಿಯ ಕೆಲಭಾಗಗಳಲ್ಲಿ ಕೂಡಾ ಬೆಳೆಯುತ್ತದೆ.

ಬೆಳ್ತಂಗಡಿ ಮತ್ತು ಪುತ್ತೂರಿನ ಕೆಲ ಉತ್ಸಾಹಿ ರೈತರು ಉತ್ತರಭಾರತಲ್ಲಿ ಸಿಗುವ ಇದರ ಇನ್ನೊಂದು ತಳಿಯನ್ನ ನಾಟಿಮಾಡಿ ಬೆಳೆಯುತ್ತಿದ್ದಾರಾದರೂ ಅದರಲ್ಲಿ ಹೇಳಿಕೊಳ್ಳುವಷ್ಷು ಸಫಲತೆ ಸಿಕ್ಕಿಲ್ಲ. ಅದನ್ನ ಕರಂಡೆ ಹಣ್ಣು ಎಂದು ಕರೆಯಲಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group