ವಾಲ್ನಟ್ಸ್ ಸೇವನೆಯ ಪ್ರಯೋಜನ..!

ಕೊಲೆಸ್ಟ್ರಾಲ್ ಮುಕ್ತವಾಗಿರುವ ವಾಲ್ನಟ್ಸ್ ಉತ್ತಮ ಒಮೆಗಾ-3 ಕೊಬ್ಬಿನಾಮ್ಲಗಳಿಂದ ಕೂಡಿದೆ. ಇದು ಮೆದುಳಿನ ಆರೋಗ್ಯ ಮತ್ತು ಕಾರ್ಯ ಎರಡಕ್ಕೂ ಒಳ್ಳೆಯದು. ವಿಟಮಿನ್ ಇ, ಫೋಲೇಟ್ ಮತ್ತು ಎಲಾಜಿಕ್ ಆಸಿಡ್ ನಂತಹ ಪೋಷಕಾಂಶಗಳು ವಾಲ್ನಟ್ಸ್ ನಲ್ಲಿವೆ. ಹೀಗಾಗಿ ನಿಮ್ಮ ನೆನಪಿನ ಶಕ್ತಿ ವೃದ್ಧಿಸಲು ನಿಯಮಿತವಾಗಿ ವಾಲ್ನಟ್ಸ್ ಸೇವಿಸಿರಿ.

#ನೆನೆಸಿದ ವಾಲ್ನಟ್ ತಿನ್ನುವುದರಿಂದ ದೇಹ ತೂಕ ಇಳಿಸಿಕೊಳ್ಳಬಹುದು. ಆಕ್ರೋಟ್ ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಐರನ್, ಕಾಪರ್, ಝಿಂಕ್ ಅಂಶಗಳು ಹೆಚ್ಚಿವೆ.

#ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ:ವಾಲ್‌ನಟ್ಸ್ ಹೃದ್ರೋಗದ ಅಪಾಯದಲ್ಲಿರುವವರಿಗೆ ಅವರ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಲ್​ನಟ್ಸ್ ಅನ್ನು ಕಡಿಮೆ ಸ್ಯಾಚುರೇಟೆಡ್ ಕೊಬ್ಬಿನ ಆಹಾರದೊಂದಿಗೆ ಜೋಡಿಸಿದಾಗ, ಹೃದಯ ರಕ್ತನಾಳದ ಕಾಯಿಲೆಯ ಅಪಾಯದಲ್ಲಿರುವವರಿಗೆ ಅವರ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (Source)

#ಕೂದಲು ಬಲಗೊಳ್ಳಲು ವಾಲ್ನಟ್ : ವಾತಾವರಣದಲ್ಲಿ ಇರುವಂತಹ ಕಲ್ಮಷಗಳು ಕೂದಲಿಗೆ ತುಂಬಾ ಹಾನಿ ಮಾಡಬಹುದು ಎಂದು ನಿಮಗೆ ತಿಳಿದಿದೆಯಾ? ಉನ್ನತ ಮಟ್ಟದ ಪೊಟಾಶಿಯಂ, ಒಮೆಗಾ-3, ಒಮೆಗಾ-6 ಮತ್ತು ಒಮೆಗಾ-9 ಕೊಬ್ಬಿನಾಮ್ಲಗಳು ಕೂದಲನ್ನು ಬುಡದಿಂದ ತುದಿಯ ತನಕ ತುಂಬಾ ಬಲಗೊಳಿಸುವುದು. ವಾಲ್ ನಟ್ ನ್ನು ಸೇವನೆ ಮಾಡಲು ಆರಂಭಿಸಿದ ಬಳಿಕ ನಿಮಗೆ ಕೂದಲಿಗೆ ಪೋಷಣೆ ಸಿಗುವುದು ತಿಳಿಯಲಿದೆ. ಒಮೆಗಾ2 ಕೊಬ್ಬಿನಾಮ್ಲವು ಕೂದಲಿಗೆ ಪೋಷಣೆ ನೀಡುವಲ್ಲಿ ಮತ್ತು ಬಲಗೊಳಿಸಲು ತುಂಬಾ ಪ್ರಮುಖ ಪಾತ್ರ ವಹಿಸುವುದು.

# ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ:ರಾತ್ರಿಯಲ್ಲಿ 2 ವಾಲ್​ನಟ್ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ನೆನೆಸಿದ ವಾಲ್​ನಟ್ ತಿನ್ನುವುದು ನೆನೆಸಿದ ಬಾದಾಮಿ ತಿನ್ನುವುದಕ್ಕೆ ಸಮವಾಗಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಬಯಸಿದರೆ ನೆನೆಸಿದ ವಾಲ್​ನಟ್ ತಿನ್ನುವುದು ಉತ್ತಮ. ಪ್ರತಿದಿನ ವಾಲ್​ನಟ್ ಸೇವಿಸುವ ಜನರಲ್ಲಿ ಟೈಪ್ -2 ಮಧುಮೇಹ ಬರುವ ಅಪಾಯವನ್ನು ಕಡಿಮೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ವಾಲ್​ನಟ್ ಸಹಾಯ ಮಾಡುತ್ತದೆ. ಮಧುಮೇಹದ ಅಪಾಯವನ್ನು ಕೂಡ ಇದು ಕಡಿಮೆ ಮಾಡುತ್ತದೆ.

#ವೀರ್ಯಾಣು ಉತ್ಪತ್ತಿಗೆ ಸಹಕಾರಿ:ವಾಲ್ನಟ್ಸ್ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ವಾಲ್ನಟ್ಸ್ ವೀರ್ಯಾಣುಗಳ ಉತ್ಪತ್ತಿ ಮತ್ತು ಚಲನಶೀಲತೆಗೆ ಸಹಾಯ ಮಾಡುತ್ತದೆ. ವೀರ್ಯಾಣುಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಅಸಹಜ ವೀರ್ಯಾಣು ಬೆಳವಣಿಗೆಯನ್ನು ತಡೆಯುತ್ತದೆ.ಮಕ್ಕಳು ಆಗದವರು ಪ್ರತಿದಿನ ವಾಲ್ನಟ್ಸ್ನನ್ನು ನಿಯಮಿತವಾಗಿ ಸೇವಿಸುವುದರಿಂದ ಮೀರ್ಯಾಣುಗಳ ಚೈತ್ಯನ್ಯ ಹೆಚ್ಚಾಗಿ ಮಕ್ಕಳಾಗುವ ಸಾಧ‍್ಯತೆ ಇದೆ.

#ವಾಲ್‌ನಟ್ಸ್ ಸೇವಿಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಇದು ತೂಕ ನಷ್ಟಕ್ಕೂ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಲ್ ನಟ್ಸ್ ತಿನ್ನುವುದು ಉತ್ತಮ ಎಂದು ಆರೋಗ್ಯ ತಜ್ಞರು ಕೂಡಾ ಸಲಹೆ ನೀಡುತ್ತಾರೆ.

#ಒತ್ತಡ ನಿಯಂತ್ರಿಸಲು:ವಾಲ್ನಟ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಉತ್ತಮ ಪ್ರಮಾಣದಲ್ಲಿದೆ. ಇದನ್ನು ನಿತ್ಯದ ಆಹಾರ ಕ್ರಮದಲ್ಲಿ ಸೇವನೆ ಮಾಡಿದರೆ ಅದರಿಂದ ಖಿನ್ನತೆ ಮತ್ತು ಒತ್ತಡ ನಿವಾರಣೆ ಮಾಡಬಹುದು. ನೆನೆಸಿಟ್ಟ ವಾಲ್ನಟ್ ಮನಸ್ಥಿತಿ ಸುಧಾರಣೆ ಮಾಡುವುದು.

#ತೂಕ ಕಡಿಮೆ ಮಾಡಬಹುದು:ನೆನೆಸಿದ ವಾಲ್‌ನಟ್ಸ್‌ ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ಇದರಲ್ಲಿರುವ ಪ್ರೋಟೀನ್, ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ತೂಕವನ್ನು ನಿಯಂತ್ರಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group