ಮೊಡವೆ ಕಲೆ ನಿವಾರಣೆ ಹೇಗೆ..?

ಮೊಡವೆಗಳ ಕಲೆಗಳು ಹಾಗೆ ಉಳಿದುಕೊಳ್ಳುತ್ತದೆ. ಇದು ನಿಮ್ಮ ಸೌಂದರ್ಯವನ್ನು ಮತ್ತಷ್ಟು ಕೆಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಕಲೆಗಳನ್ನು ನಿವಾರಣೆ ಮಾಡಲು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ಕ್ರೀಮ್‌ಗಳನ್ನು ಬಳಸಿ ನೋಡಿದರೂ ನಿಮಗೆ ಯಾವುದೇ ಪ್ರಯೋಜನವಾಗಿರಲಿಕ್ಕಿಲ್ಲ. ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು:

1.ತುಟಿಯ ಕೆಳಗೆ ಗಲ್ಲದಲ್ಲಿ ಕಾಣಿಸಿಕೊಳ್ಳುವ ವೈಟ್ ಹೆಡ್ಸ್‌ಗಳನ್ನು 15 ದಿನಕ್ಕೊಮ್ಮೆ ಕ್ಲೀನ್ ಮಾಡಿಕೊಳ್ಳಬೇಕು. ಈ ವೈಟ್ ಹೆಡ್ಸ್‌ಗಳೇ ಕೆನ್ನೆಯ ಮೇಲೆ ಮೊಡವೆ ಏಳಲು ಕಾರಣವಾಗುತ್ತದೆ. ಹಬೆ ತೆಗೆದುಕೊಳ್ಳುವುದು ವೈಟ್ ಹೆಡ್ಸ್ ಹೋಗಲಾಡಿಸುವ ಸುಲಭ ವಿಧಾನ. ಹಬೆ ತೆಗೆದುಕೊಂಡು ಹತ್ತಿಯಿಂದ ನಯವಾಗಿ ಉಜ್ಜಿ ತೆಗೆದರೆ ವೈಡ್ ಹೆಡ್ ಸುಲಭವಾಗಿ ನಿವಾರಣೆಯಾಗುತ್ತದೆ.

2. ಅಡುಗೆ ಸೋಡಾವನ್ನು ಮೊಡವೆ ಆದ ಜಾಗದ ಮೇಲೆ ನಯವಾಗಿ ಮಸಾಜ್ ಮಾಡಿದರೆ ಕ್ರಮೇಣ ಕಲೆ ನಿವಾರಣೆಯಾಗುತ್ತದೆ.

3. ಮೊಡವೆ ಅಥವಾ ಕಲೆಯ ಮೇಲೆ ಇಂಗು ಅಥವಾ ಗಂಧಧ ಪುಡಿಯಿಂದ ಮಸಾಜ್ ಮಾಡಿಕೊಂಡರೆ ಉತ್ತಮ ಪರಿಣಾಮ ಬೀರುತ್ತದೆ.

4.ಒಂದು ಮಧ್ಯಮ ಗಾತ್ರದ ಟೊಮ್ಯಾಟೋವನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ. ನಂತರ ಆ ರಸಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಕಲಸಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿರಿ.

5.ಮನೆಮದ್ದನ್ನು ತಯಾರಿಸಲು ಲೋಳೆಸರ ರೋಸ್ ವಾಟರ್ ಮತ್ತು ತೆಂಗಿನಕಾಯಿ ನೀರು ತೆಗೆದುಕೊಳ್ಳಿ ಈಗ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಲೋಳೆರಸವನ್ನು ಹಾಕಿ ಹಾಗೇನೆ ಅದಕ್ಕೆ 1 ಚಮಚ ಗುಲಾಬಿ ಜಲವನ್ನು ಹಾಕಿ ಅದಕ್ಕೆ 1 ಚಮಚ ತೆಂಗಿನಕಾಯಿ ನೀರನ್ನು ಹಾಕಿ ಈಗ ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಮೊಡವೆ ಕಲೆಗಳು ಮತ್ತು ರಂದ್ರಗಳನ್ನು ನಿವಾರಿಸುವಂತಹ ಮನೆಮದ್ದು ತಯಾರಾಗಿದೆ ಈ ಮನೆಮದ್ದನ್ನು ನಿಮ್ಮ ಮುಖಕ್ಕೆ ಯಾವ ರೀತಿ ಹಚ್ಚುವುದು ಎನ್ನುವುದನ್ನು ನೋಡುವುದಾದರೆ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ ನಂತರ ಈಗ ತಯಾರಿಸಿದ ಮನೆಮದ್ದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಇದನ್ನು ರಾತ್ರಿ ಪೂರ್ತಿ ಹಾಗೇ ಒಣಗಲು ಬಿಡಿ ಬೆಳಿಗ್ಗೆ ಮುಖವನ್ನು ತೊಳೆಯಿರಿ. ಈಗ ಮನೆಮದ್ದನ್ನು ಪ್ರತಿದಿನ ರಾತ್ರಿ ನೀವು ಬಳಸುವುದರಿಂದ ನಿಮ್ಮ ಮುಖಕ್ಕೆ ಒಳ್ಳೆಯ ಕಾಂತಿ ಕೂಡ ಬರುತ್ತದೆ.

6.ದಿನವೊಂದಕ್ಕೆ 2ರಿಂದ ಮೂರು ಸಾರಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಅಷ್ಟು ಸಾಕು. ಅದಲ್ಲದೆ ಫೇಸ್ ವಾಶ್, ಕ್ಲೆನ್ಸರ್‌ನಿಂದ ದಿನಕ್ಕೆ ಹಲವಾರು ಬಾರಿ ಮುಖ ತೊಳೆಯಬೇಡಿ. ಇದರಿಂದ ಒಂದು ಬಾರಿ ಮುಖ ತುಂಬಾ ಸ್ವಚ್ಛಗೊಂಡಂತೆ, ಚರ್ಮ ನುಣುಪಾದಂತೆ ಅನಿಸಿದರೂ ಇದು ಸ್ಕಿನ್ ಅನ್ನು ಡ್ರೈ ಮಾಡುತ್ತದೆ. ಇದರಿಂದ ಮುಖದಲ್ಲಿ ಸಹಜವಾಗಿ ಎಣ್ಣೆ ಉತ್ಪಾದನೆಯಾಗುತ್ತದೆ, ಇದು ಮೊಡವೆಗೆ ಕಾರಣವಾಗುತ್ತದೆ. ಹೀಗಾಗಿ ಮುಖದಲ್ಲಿ ಸಹಜವಾಗಿ ಇರುವ ಎಣ್ಣೆಯಂಶವನ್ನು ತೊಡೆದು ಹಾಕಿ ಚರ್ಮವನ್ನು ಡ್ರೈ ಮಾಡಲೇಬೇಡಿ.

7.ಮೆಂತ್ಯ : ಮೆಂತ್ಯ ಚರ್ಮದ ಮೇಲೆ ಉರಿಯೂತ ನಿವಾರಕ, ನಂಜುನಿರೋಧಕ, ಮೊಡವೆಗಳ ಕಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಮೆಂತ್ಯದ ಕೆಲವು ಬೀಜಗಳನ್ನು (ಮೆಥಿ) ಸ್ವಲ್ಪ ನೀರಿನಲ್ಲಿ ಸೇರಿಸಿ; ಸುಮಾರು 10-15 ನಿಮಿಷಗಳ ಕಾಲ ಕುದಿಸಿ. ಅದನ್ನು ತಣಿಸಿ, ಬೀಜಗಳನ್ನು ಹೊರತೆಗೆಯಿರಿ ಮತ್ತು ಹತ್ತಿ ಚೆಂಡನ್ನು ಬಳಸಿ, ಮೊಡವೆಗಳ ಕಲೆಗೆ ನೀರನ್ನು ಹಚ್ಚಿ. ಸುಮಾರು ಒಂದು ವಾರದವರೆಗೆ ಇದನ್ನು ನಿಯಮಿತವಾಗಿ ಮಾಡಿ.

8.ಕಿತ್ತಳೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಕಿತ್ತಳೆ ಸಿಪ್ಪೆಯಲ್ಲಿರುವ ಸಿಟ್ರಿಕ್ ಆಸಿಡ್ ನಿಮ್ಮ ಮುಖದ ಮೇಲಿರುವ ಕಲೆಯನ್ನು ಕಡಿಮೆ ಮಾಡುವಲ್ಲಿ ಸಹಕರಿಸಬಲ್ಲದು. ಈ ಪುಡಿಗೆ ಸ್ವಲ್ಪ ರೋಸ್‌ ವಾಟರ್‌ ಸೇರಿಸಿ ಪೇಸ್ಟ್‌ ರೀತಿ ತಯಾರಿಸಿ ಇದನ್ನು ಮೊಡವೆ ಕಲೆಳಿರುವ ಜಾಗಕ್ಕೆ ಹಚ್ಚುತ್ತಿರಿ

9.ಬೇವು;ಭಾರತೀಯರು ಹೆಚ್ಚಾಗಿ ಬೇವಿನ ಮರಗಳನ್ನು ಬೆಳೆಸಿರುವುದು ಯಾಕೆಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ ಬೇವಿನ ಮರಗಳನ್ನು ಪ್ರತಿಯೊಂದು ಕಡೆಗಳಲ್ಲೂ ಬೆಳೆಸಲಾಗಿದೆ. ಬೇವಿನ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಮೊಡವೆ ಹಾಗು ಮೊಡವೆಯ ಕಲೆಗಳನ್ನು ದೂರವಿಡುವುದು.

10.ಹಿಂಗುವಿಗೆ ನಿಂಬೆರಸ ಅರೆದು ಲೇಪಿಸಬೇಕು. ಪುದೀನ ಸೊಪ್ಪನ್ನು ಅರಿಶಿನ ಬೆರೆಸಿ ಅರೆದು ಹಚ್ಚಬೇಕು ಮತ್ತು ಪುದೀನ ಸೊಪ್ಪನ್ನು ಬೇವು ಮತ್ತು ತುಳಸಿ ಎಲೆ ಬೆರೆಸಿ ಅರೆದು ಹಚ್ಚಿಕೊಂಡು ಅರ್ಧಗಂಟೆ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group