ದಿನಕ್ಕೊಂದು ಸೇಬು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!

ದಿನಕ್ಕೊಂದು ಸೇಬು ತಿನ್ನುವುದು. ವೈದ್ಯರನ್ನು ದೂರವಿಡುತ್ತದೆ-ಇದೊಂದು ಸುಪ್ರಸಿದ್ಧ ಆಂಗ್ಲ ಸುಭಾಷಿತ. ಈ ಮಾತನ್ನು ವಿಶ್ವದ ಜನತೆ ಎಷ್ಟು ಬಲವಾಗಿ ನಂಬಿದ್ದಾರೆ ಎಂದರೆ ಬಲವಂತವಾಗಿಯಾದರೂ ತಾಯಂದಿರು ತಮ್ಮ ಮಕ್ಕಳಿಗೆ ಸೇಬನ್ನು ತಿನ್ನಿಸುತ್ತಾರೆ. ಈ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಉತ್ತಮಗೊಂಡು ಹಲವಾರು ಕಾಯಿಲೆಗಳನ್ನು ದೂರವಿರಿಸುವುದೇ ವೈದ್ಯರನ್ನು ದೂರವಿಡುವ ಗುಟ್ಟು.ಇದರ ಇನ್ನಷ್ಟು ಪ್ರಯೋಜನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

#ಡಯಾಬಿಟಿಸ್: ಸೇಬು ತಿಂದರೆ ಡಯಾಬಿಟಿಸ್ (diabetes) ದೂರವಾಗುತ್ತದೆ. ಸೇಬಿನಲ್ಲಿರುವ ಫೈಬರ್ ಕೆಟ್ಟ ಕೊಲೆಸ್ಟಾರಲ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಡಯಾಬಿಟಿಸ್ ಅನ್ನು ಕಡಿಮೆ ಮಾಡಲು ನೆರವಾಗುತ್ತದೆ.

#ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ:ಸೇಬು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಬಹುದು. ಕೊಲೆಸ್ಟ್ರಾಲ್ ಅಪಾಯಕಾರಿ ಮಟ್ಟಕ್ಕೆ ಸಾಗಲು ಪ್ರಾರಂಭಿಸಿದರೆ ಸೇಬನ್ನು ತಿನ್ನುವುದರಿಂದ ಪ್ರಯೋಜನಕಾರಿಯಾಗಲಿದೆ.

#ಕ್ಯಾನ್ಸರ್ ಅಪಾಯ ಕಡಿಮೆ:ಸೇಬಿನಲ್ಲಿ ಇರುವಂತಹ ಕೆಲವೊಂದು ಸಸ್ಯಜನ್ಯ ಅಂಶಗಳು ಕ್ಯಾನ್ಸರ್ ವಿರೋಧಿ ಅಂಶವನ್ನು ಹೊಂದಿದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿದೆ ಮತ್ತು ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಮತ್ತು ಪೈಥೋನ್ಯೂಟ್ರಿಯಂಟ್ಸ್ ಗಳು ಕರುಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ನ್ನು ತಡೆಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.ಪ್ರತೀದಿನ ಒಂದು ಸೇಬು ತಿಂದ ಜನರಲ್ಲಿ ಶೇ.20ರಷ್ಟು ಕರುಳಿನ ಕ್ಯಾನ್ಸರ್ ಅಪಾಯ ಕಡಿಮೆ ಆಗಿದೆ ಮತ್ತು ಸ್ತನದ ಕ್ಯಾನ್ಸರ್ ಅಪಾಯವು ಶೇ.18ರಷ್ಟು ಕಡಿಮೆ ಆಗಿದೆ.

#ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:ಸೇಬು ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯದ ಕಡಿಮೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಸೇಬಿನಲ್ಲಿರುವ ಫೈಬರ್ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ.

#ತೂಕ ಇಳಿಸಲು ಸಹಕಾರಿ:ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಕೊಬ್ಬಿನಾಂಶ ಮತ್ತು ಸಕ್ಕರೆ ತುಂಬಿದ ಆಹಾರಗಳನ್ನು ಸೇವಿಸುವದನ್ನು ತಡೆಯುತ್ತದೆ.

#ಸೇಬುಗಳಲ್ಲಿನ ಕರಗಬಲ್ಲ ಫೈಬರ್ ಜೆಲಟಿನ್, ರಕ್ತನಾಳದ ವಿಭಾಜಕದ ಒಳಪದರದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವನ್ನು ಇಡುತ್ತದೆ, ಈ ರೀತಿಯಾಗಿ ಅಪಧಮನಿಕಾಠಿಣ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ದ್ರಾವಕದಲ್ಲಿ ದ್ರಾವಕಗಳೊಂದಿಗಿನ ದ್ರಾವಕ ನಾರು ಸಂಬಂಧಗಳು, ದೇಹದಲ್ಲಿ ಕೊಲೆಸ್ಟರಾಲ್ ಏರುವಿಕೆಯನ್ನು ನಿರೀಕ್ಷಿಸುತ್ತದೆ. 170 ಗ್ರಾಂ ಆಪಲ್ ದೈನಂದಿನ ಖರ್ಚು ಮಾಡಿದ ವ್ಯಕ್ತಿಗಳು ಅರ್ಧಕ್ಕಿಂತಲೂ ಕಡಿಮೆಯಿಲ್ಲದ ವ್ಯಕ್ತಿಗಳಿಗಿಂತ ಪಾರ್ಶ್ವವಾಯುವಿಗೆ ಕಡಿಮೆ ಇಳಿಮುಖವಾಗುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ಪೊಟ್ಯಾಸಿಯಮ್ ಅನ್ನು ಒಳಗೊಂಡಿರುತ್ತದೆ,

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group