ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಉತ್ತಮ..!

ಕಣ್ಣುಗಳು ಸುಂದರ ಮತ್ತು ಆರೋಗ್ಯವಾಗಿರಬೇಕೆಂದರೆ ಹೆಚ್ಚೇನು ಕಷ್ಟ ಪಡುವ ಅಗತ್ಯವಿಲ್ಲ. ಉತ್ತಮ ಆಹಾರ ಕ್ರಮ, ಒಳ್ಳೆ ನಿದ್ದೆ ಮತ್ತು ಕೆಲವು ನೈಸರ್ಗಿಕ ವಿಧಾನ ಅನುಸರಿಸಿದರೆ ಸಾಕು, ನಿಮ್ಮ ಕಣ್ಣನ್ನು ಹಲವು ಸೋಂಕುಗಳಿಂದ ದೂರವಿರಿಸಿ ಕಣ್ಣಿನ ದೃಷ್ಠಿ ದೀರ್ಘಕಾಲ ಚೈತನ್ಯವಾಗಿರುವಂತೆ ನೋಡಿಕೊಳ್ಳಬಹುದು.ಆರೋಗ್ಯಕರ ಕಣ್ಣುಗಳಿಗೆ ಯಾವ ಆಹಾರ ಸೇವಿಸಬೇಕೆಂದು ತಿಳಿದುಕೊಳ್ಳೋಣ:

#ಸೂರ್ಯನನ್ನು ನೋಡುವುದು: ಸೂರ್ಯೋದಯವಾಗುವ ಸಮಯದಲ್ಲಿ ಸೂರ್ಯನನ್ನು ನೋಡುವುದರಿಂದ ದೃಷ್ಥಿ ಉತ್ತಮವಾಗುತ್ತದೆ. ಅಲ್ಲದೆ ಮೂರನೆ ಕಣ್ಣು ಎಂದು ತಿಳಿಸುವ ಪೀನಲ್ ಗ್ರಂಥಿಯು ಪ್ರಚುರವಾಗುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳನ್ನು ನೋಡಬಾರದು.

#ಕಣ್ಣಿನ ವ್ಯಾಯಾಮವನ್ನು ಅಭ್ಯಾಸ ಮಾಡುವುದು, ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವ ಕನ್ನಡಕಗಳನ್ನು ಧರಿಸುವುದು ಮತ್ತು ನಿಯಮಿತವಾಗಿ ಕಣ್ಣಿನ ತಪಾಸಣೆಗಳನ್ನು ಮಾಡುವುದು ಅತ್ಯಗತ್ಯ. ಇದರ ಜತೆ ಸರಿಯಾದ ರೀತಿಯ ಆಹಾರದೊಂದಿಗೆ, ನೀವು ಕಣ್ಣಿನ ಸಮಸ್ಯೆಗಳನ್ನು ದೂರವಿಡಬಹುದು.

#ನೀರು: ನೀವು ಆಶ್ಚರ್ಯಪಡಬೇಕಾಗಿಲ್ಲ. ನಮ್ಮ ಕಣ್ಣಿನ ಆರೋಗ್ಯಕ್ಕೆ ಇದು ತುಂಬಾ ಅವಶ್ಯಕವಾಗಿದೆ ಏಕೆಂದರೆ ಸಾಕಷ್ಟು ನೀರು ಕುಡಿಯುವುದು ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ, ಇದು ಹಾನಿಗೊಳಗಾದ ಕಣ್ಣುಗಳಿಗೆ ಗಮನಾರ್ಹ ಅಥವಾ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸು ಮತ್ತು ಸಾಮಾನ್ಯಕ್ಕೆ ಅನುಗುಣವಾಗಿ ಪ್ರತಿದಿನ 4-5 ಲೀಟರ್ ನೀರು ಕುಡಿಯಬೇಕು.

#ಧೂಮಪಾನದಿಂದ ದೂರವಿರಿ: ಧೂಮಪಾನವು ಶ್ವಾಸಕೋಶದ ಜೊತೆಗೆ ಕಣ್ಣುಗಳ ದೃಷ್ಟಿ ಮೇಲೂ ಪರಿಣಾಮ ಬೀರುತ್ತದೆ. ನೀವು ನಿಯಮಿತವಾಗಿ ಧೂಮಪಾನ ಮಾಡಿದರೆ ಅದು ನಿಮ್ಮ ಕಣ್ಣುಗಳಿಗೆ ಹಾನಿ ಮಾಡುತ್ತದೆ. ಆದ್ದರಿಂದ ನೀವು ಕಣ್ಣುಗಳನ್ನು ಆರೋಗ್ಯವಾಗಿಡಲು ಬಯಸಿದರೆ ಧೂಮಪಾನದಿಂದ ದೂರವಿರಿ.

#ತರಕಾರಿಗಳನ್ನು ಹೆಚ್ಚು ಸೇವಿಸಿ:ಕಣ್ಣುಗಳ ದೃಷ್ಟಿ ಉತ್ತಮವಾಗಿರಲು ಆಹಾರದಲ್ಲಿ ಕ್ಯಾರೋಟಿನಾಯ್ಡುಗಳು ಇರಲೇಬೇಕು. ಇವುಗಳಲ್ಲಿ ಎರಡು ವಿಧಗಳಿವೆ. ಆಲ್ಫಾ ಮತ್ತು ಬೀಟಾ ಕ್ಯಾರೋಟಿನಾಯ್ಡುಗಳು. ಇವುಗಳ ಕೊರತೆ ನೇರವಾಗಿ ರಾತ್ರಿ ಗುರುಡುತನಕ್ಕೆ ಕಾರಣ. ವಾಸ್ತವವಾಗಿ, ಇವು ಜೀರ್ಣಕ್ರಿಯೆಯಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತವೆ. ಹಾಗಾಗಿ ವಿಟಮಿನ್ ಎ ಇರುವ ಅಹಾರಗಳ ಕೊರತೆ ಇದ್ದರೆ ಕ್ಯಾರೋಟಿನಾಯ್ಡ್ ಇರುವ ಅಹಾರಗಳನ್ನು ಸೇವಿಸುವ ಮೂಲಕ ಪೂರೈಸಿಕೊಳ್ಳಬಹುದು. ಇವು ದಪ್ಪನೆಯ ಎಲೆಗಳಿರುವ ಸೊಪ್ಪುಗಳು, ಕೇಲ್ ಎಲೆಗಳು, ಪಾಲಕ್, ಲೆಟ್ಯೂಸ್, ಕ್ಯಾರೆಟ್, ದೊಣ್ಣೆಮೆಣಸು, ಟೊಮಾಟೋ, ಟೊಮಾಟೂ ಜ್ಯೂಸ್, ಸಿಹಿಗೆಣಸು, ಬ್ರೋಕೋಲಿ, ಕಲ್ಲಂಗಡಿ ಮತ್ತು ಆಪ್ರಿಕಾಟ್ ಹಣ್ಣುಗಳಲ್ಲಿ ಹೇರಳವಾಗಿರುತ್ತವೆ.

#ಕಣ್ಣುಗಳ ಸುರಕ್ಷತೆ: ಮೊಬೈಲ್ ಹಾಗೂ ಲ್ಯಾಪ್ ಟಾಪ್ ಮುಂದೆ ಗಂಟೆಗಟ್ಟಲೇ ಸಮಯ ಕಳೆಯುವವರೇ ಹೆಚ್ಚು. ಆದಾಗ್ಯೂ, ಇದು ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಕನ್ನಡಕಗಳನ್ನು ಧರಿಸಬಹುದು. ಕಂಪ್ಯೂಟರ್ ಗ್ಲಾಸ್​ಗಳು ಈಗ ಎಲ್ಲೆಡೆ ಲಭ್ಯ. ಇದಲ್ಲದೆ ಬಿಸಿಲಿಗೆ ಕಾಲಿಡುವ ಮುನ್ನ ಸನ್ ಗ್ಲಾಸ್ ಧರಿಸಿ. UV A ಮತ್ತು UV B ಯ ಹಾನಿಕಾರಕ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇಂತಹ ಸನ್​ಗ್ಲಾಸ್​ಗಳು ಅತ್ಯಗತ್ಯ.

#ಎಲೆ ತರಕಾರಿಗಳು: ಹಣ್ಣುಗಳಂತೆ, ಎಲೆಗಳ ತರಕಾರಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಜಿಯಾಕ್ಸಾಂಥಿನ್ ಮತ್ತು ಲುಟೀನ್ ಅನ್ನು ಹೊಂದಿದೆ, ಇದು ನಿಮ್ಮ ಕಣ್ಣಿಗೆ ಉತ್ತಮವಾಗಿದೆ ಮತ್ತು ನಿಮ್ಮ ಕಣ್ಣುಗಳನ್ನು ಯಾವುದೇ ಹಾನಿಯಿಂದ ರಕ್ಷಿಸುತ್ತದೆ. ಇವುಗಳ ಸೇವನೆಯು ನಿಮ್ಮ ಕಣ್ಣುಗಳಿಗೆ ಅತ್ಯುತ್ತಮವಾಗಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group