ತೊಂಡೆಕಾಯಿಯ ಆರೋಗ್ಯ ಪ್ರಯೋಜನ!

ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ಕ್ಯಾಲೊರಿಗಳು ಕಡಿಮೆಯಿದ್ದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಿಸಲು ಸಹಕಾರಿಯಾಗಿದೆ. ಕಿಡ್ನಿಸ್ಟೋನ್ ಸಮಸ್ಯೆ ಎದುರಿಸುತ್ತಿರುವವರಿಗೆ ತೊಂಡೆಕಾಯಿ ರಾಮಬಾಣವಾಗಿದೆ. ವಾರಕ್ಕೊಮ್ಮೆಯಾದರೂ ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.* ತೊಂಡೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ.
#ತಲೆಬುರುಡೆಯ ಬೊಕ್ಕೆ ನಿವಾರಣೆಗೆ:ತೊಂಡೆಕಾಯಿ ಎಲೆಗಳಿಂದ ನೀರು ಹಾಕದೆ ರಸ ತೆಗೆಯಿರಿ. ಕೆಲವು ಸಮುದ್ರ ಚಿಪ್ಪುಗಳನ್ನು(ಹಸಿರು ಬಣ್ಣದ್ದು) ಮೂರು ದಿನಗಳ ಕಾಲ ಇದರಲ್ಲಿ ನೆನೆಸಿಡಿ. ನಾಲ್ಕನೇ ದಿನ ಇದನ್ನು ಹೊರತೆಗೆದು ಇದ್ದಿಲಿನಲ್ಲಿ ಸುಟ್ಟುಬಿಡಿ. ಇದರ ಬೂದಿ ತೆಗೆದುಕೊಂಡು ಅದನ್ನು ಹಸುವಿನ ಬೆಣ್ಣೆಯ ಜತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ತಲೆಬುರುಡೆಯಲ್ಲಿರುವ ಬೊಕ್ಕೆಗಳಿಗೆ ಹಚ್ಚಿಕೊಳ್ಳಿ. ಇದು ಸರಳ ಆಯುರ್ವೇದ ಔಷಧಿ.
#ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ:ತುಂಬಾ ದಿನಗಳಿಂದ ಅಜೀರ್ಣತೆ ಅಥವಾ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂಡೆಕಾಯಿ ಬಹಳ ಅಚ್ಚುಕಟ್ಟಾಗಿ ಪರಿಹಾರ ಒದಗಿಸುತ್ತದೆ.ಇದರಲ್ಲಿರುವ ಹೆಚ್ಚಾದ ನೀರಿನ ಅಂಶ ಮತ್ತು ನಾರಿನ ಅಂಶದ ಕಾರಣದಿಂದ ಮನುಷ್ಯನ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ. ಬೇರೆ ಯಾವುದೇ ತರಕಾರಿಗಳಿಗೆ ಹೋಲಿಸಿದರೆ ತೊಂಡೆಕಾಯಿ ತುಂಬಾ ಆರೋಗ್ಯಕರ ಎಂದು ಬಣ್ಣಿಸಲಾಗಿದೆ.
#ಕ್ಯಾನ್ಸರ್ ನಿಂದ ರಕ್ಷಣೆ: ತೊಂಡೆಕಾಯಿಗಳಿಂದ ಕೇವಲ ಮೇಲಿನ ಸಣ್ಣ ಪುಟ್ಟ ಉಪಯೋಗಗಳು ಮಾತ್ರ ಲಭ್ಯವಾಗುತ್ತವೆ ಎಂದು ನೀವು ತಿಳಿದುಕೊಂಡಿದ್ದರೆ, ಖಂಡಿತ ಅದು ತಪ್ಪು. ಗುಣಪಡಿಸಲಾಗದ ಕ್ಯಾನ್ಸರ್ ರೋಗದ ವಿರುದ್ಧ ಹೊರಡುವಂತಹ ಶಕ್ತಿ ತೊಂಡೆಕಾಯಿಗಳಿಗೆ ಇದೆ ಎಂದು ಕಂಡು ಬಂದಿದೆ.ಇದರಲ್ಲಿರುವ ಹೇರಳವಾದ ನೈಸರ್ಗಿಕ ಆಂಟಿ – ಆಕ್ಸಿಡೆಂಟ್ ಅಂಶಗಳು ಮನುಷ್ಯನ ದೇಹವನ್ನು ಫ್ರೀ ರಾಡಿಕಲ್ ಗಳ ಹಾವಳಿಯಿಂದ ಕಾಪಾಡುತ್ತದೆ. ಇದರಿಂದ ದೇಹದಲ್ಲಿ ಜೀವಕೋಶಗಳಿಗೆ ಮತ್ತು ಡಿ ಎನ್ ಎ ಅಂಶಗಳಿಗೆ ಹಾನಿಯಾಗುವುದು ತಪ್ಪುತ್ತದೆ.
#ಹೃದಯ ಸಂಬಂಧಿ ಸಮಸ್ಯೆಗೆ: ತೊಂಡೆಕಾಯಿಯಲ್ಲಿ ಫ್ಲೆವನಾಯ್ಡ್ ಸಿಗುತ್ತದೆ. ಜೊತೆಗೆ ಅಂಟಿ ಆಕ್ಸಿಡೆಂಟ್ ಗುಣಯುಕ್ತವಾಗಿದೆ.. ಇದು ಹೃದಯಕ್ಕೆ ಸುರಕ್ಷೆ ಒದಗಿಸುತ್ತದೆ. ಹಾರ್ಟ್ ಸಮಸ್ಯೆ ಹೆಚ್ಚಿಸುವ ಪ್ರಿರಾಡಿಕಲ್ ಗಳನ್ನು ಕಡಿಮೆ ಮಾಡುತ್ತದೆ.
#ತೊಂಡೆಕಾಯಿ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ, ಒಣಗಿರುವ ಚರ್ಮ ಮೃದುವಾಗುತ್ತದೆ ಹಾಗೂ ಮಧುಮೇಹ ಗುಣವಾಗುತ್ತದೆ.
#ತೊಂಡೆಕಾಯಿಯನ್ನು ಆಹಾರದಲ್ಲಿ ಸೇರಿಸುವುದರಿಂದ, ಪೈಲ್ಸ್, ಗ್ಯಾಸ್ಟ್ರೋ-ಎಸೋಫೇಜಿಲ್, ರಿಫ್ಲಕ್ಸ್ ಮತ್ತು ಮಲಬದ್ಧತೆಯಂತಹ ರೋಗಗಳು ದೂರವಾಗುತ್ತವೆ. ಜೀರ್ಣಾಂಗ ವ್ಯವಸ್ಥೆಯಲ್ಲಿಯೂ ಸಾಕಷ್ಟು ಸುಧಾರಣೆ ಕಂಡು ಬರುತ್ತದೆ.