ಶೇಂಗಾ ಬೀಜ ಸೇವನೆಯಿಂದ ಸಿಗುವ ಲಾಭಗಳು..!

ಕಡಲೆಕಾಯಿಯಲ್ಲಿ ಒಮೆಗಾ -6 ಕೊಬ್ಬು ಸಮೃದ್ಧವಾಗಿದೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಉತ್ತಮ ಕೋಶಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮೊಟ್ಟೆಗಳನ್ನು ಪ್ರೋಟೀನ್ ಪೂರೈಸುವಿಕೆಗೆ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿಯೇ ಹೆಚ್ಚಿನ ವೈದ್ಯರು ಮಕ್ಕಳಲ್ಲಿ ತೂಕ ಹೆಚ್ಚಿಸಲು ಮೊಟ್ಟೆಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇದಲ್ಲದೆ, ಮಾಂಸಹಾರದಲ್ಲೂ ಸಾಕಷ್ಟು ಪ್ರೋಟೀನ್ ಕಂಡುಬರುತ್ತದೆ, ಆದರೆ ಕಡಲೆಕಾಯಿಯಲ್ಲಿ ಮೊಟ್ಟೆ ಮತ್ತು ಮಾಂಸಾಹಾರಕ್ಕಿಂತ ಅನೇಕ ಪಟ್ಟು ಹೆಚ್ಚು ಪ್ರೋಟೀನ್ ಮತ್ತು ಪೋಷಕಾಂಶಗಳಿವೆ. ಇದಲ್ಲದೆ, ಕಡಲೆಕಾಯಿ ತಿನ್ನುವುದು ದೇಹದಲ್ಲಿ ಸಾಕಷ್ಟು ಶಕ್ತಿಯನ್ನು ತರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಿದ್ರೆ ಕಡಲೆಕಾಯಿಯ ವಿಶೇಷತೆಯ ಬಗ್ಗೆ ತಿಳಿದುಕೊಳ್ಳೋಣ.
#ಮೊದಲಿಗೆ ಶೇಂಗಾ ಬೀಜದಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ ಹಾಗೂ ಮಿನರಲ್ಸ್ ಹಾಗೂ ಮೆಗ್ನೀಷಿಯಂ ಅಂಶ ಇರುತ್ತದೆ ಹಾಗೂ ಪ್ರತಿದಿನ ಕಡಲೆ ಬೀಜವನ್ನು ತಿನ್ನುವುದರಿಂದ ತುಂಬಾ ಒಳ್ಳೆ ಯದು ಹಾಗೂ ನಿಯಮಿತವಾಗಿ ಸೇವನೆ ಮಾಡಬೇಕು
# ಕಡಲೆ ಬೀಜವನ್ನು ಸೇವನೆ ಮಾಡುವುದರಿಂದ ನಮಗೆ ತುಂಬಾ ಶಕ್ತಿ ಬರುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದಂತಹ ಎಲ್ಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.
# ನಮ್ಮ ಮುಖದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಗೆ ಕೂದಲು ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಒಳ್ಳೆಯ ಕೊಲಸ್ಟ್ರಾಲ್ ಸಿಗುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಗೆ ಹಾಕುತ್ತದೆ.
#ಬೆಲ್ಲ ಮತ್ತು ಕಡಲೆಕಾಯಿ ತಿನ್ನೋದ್ರಿಂದ ಮಹಿಳೆಯರಲ್ಲಿ ತಿಂಗಳ ಮುಟ್ಟಿನ ಸಮಯದಲ್ಲಿ ಆಗುವಂತ ಸಮಸ್ಯೆಗೆ ನಿವಾರಣೆಯನ್ನು ಕಾಣಬಹುದು. ಇವುಗಳಷ್ಟೇ ಅಲ್ಲದೆ ಇನ್ನು ಹಲವು ಪ್ರಯೋಜನಗಳಿಗೆ.
#ಚಳಿಗಾಲದಲ್ಲಿ ನೆನೆಸಿಟ್ಟ ಶೇಂಗಾ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಉಷ್ಣತೆ ದೊರಕುವುದಲ್ಲದೇ, ಶಕ್ತಿಯುತವಾಗಿರಲು ಸಹಾಯವಾಗುತ್ತದೆ.
#ಜಿಮ್‌ಗೆ ಹೋಗುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಬೀಜದ ಸೇವನೆ ಮಾಡಬೇಕು. ಇದರಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಬಾಡಿ ಬಿಲ್ಡ್ ಮಾಡುವಲ್ಲಿ ಸಹಾಯವಾಗುತ್ತದೆ.
#ಹೃದಯದ ಸಮಸ್ಯೆಗಳು, ನರಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ.- ತೈಲದಂಶವನ್ನೊಳಗೊಂಡಿರುವುದರಿಂದ ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ.- ಗರ್ಭಿಣಿಯರು ಹೆಚ್ಚಾಗಿ ಸೇವಿಸುವುದರಿಂದ ಮಗುವಿಗೆ ನರಸಂಬಂಧಿ ಕಾಯಿಲೆಗಳು ಬರದಂತೆ ತಡೆಯಬಹುದು.
#ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಶೇಂಗಾ :ನಿಮಗೆ ಮಲಬದ್ಧತೆ(Loose Motion) ಸಮಸ್ಯೆ ಇದ್ದರೆ ವಾರಕ್ಕೆ 100 ಗ್ರಾಂ ಶೇಂಗಾ ತಿನ್ನಿರಿ. ಹೀಗೆ ಮಾಡುವುದರಿಂದ, ಶೇಂಗಾದಲ್ಲಿರುವ ಅಂಶಗಳು ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.#ಶೇಂಗಾ ಬೀಜಗಳನ್ನು ಸೇವಿಸುವ ಮೂಲಕ ತೂಕ ಇಳಿಸಿಕೊಳ್ಳಲು ಮತ್ತು ಇಳಿಸಿದ ತೂಕವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಏಕೆಂದರೆ ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಕರಗುವ ನಾರಿನಂಶವಿದೆ. ಅಲ್ಲದೇ ಸಮೃದ್ಧವಾಗಿರುವ ಪ್ರೋಟೀನ್ ಅಂಶವು ನಿಮ್ಮನ್ನು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತದೆ. ಶೇಂಗಾಬೀಜಗಳಲ್ಲಿ. ಕ್ಯಾಲೊರಿಗಳು ಹೆಚ್ಚಿದ್ದರೂ, ಮಿತ ಪ್ರಮಾಣದಲ್ಲಿ ಸೇವಿಸಿದಾಗ ಅವು ನಿಮ್ಮ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಬಹುದು.
#ಕೆಲವು ಸಂಶೋಧನೆಯ ಪ್ರಕಾರ ಶೇಂಗಾ ಬೀಜವನ್ನು ಸೇವಿಸುತ್ತಾ ಬಂದರೆ ಮಧುಮೇಹ ಬರುವುದು ಸುಮಾರು 90% ನಷ್ಟು ಕಡಿಮೆ ಇರುತ್ತದೆ. ಶೇಂಗಾ ಬೀಜ ತಿನ್ನುವುದರಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ. ಶೇಂಗಾದಲ್ಲಿರುವ ವಿಟಮಿನ್ ಬಿ 2, ನಿಯಾಸಿನ್ ಸಹ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.