ತೂಕ ಹೆಚ್ಚಿಸಿಕೊಳ್ಳಲು ಆರೋಗ್ಯಕರವಾದ ಸಲಹೆಗಳು

ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೇ ತೂಕ ಕಡಿಮೆ ಇದ್ದರೂ ಕೂಡ ಕಷ್ಟ.ನೋಡಲು ಮೈ ತುಂಬಿಕೊಂಡಿದ್ದರೆ ಅದರ ಅಂದವೇ ಚಂದ.ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹೆಂಗಳೆಯರು ಕಷ್ಟ ಪಡುತ್ತಿರುತ್ತಾರೆ. ಕಡಿಮೆ ತೂಕ ಸಾಕಷ್ಟು ತೊಂದರೆಯನ್ನು ತರುತ್ತದೆ. ಆಯಾಸ, ನಿರುತ್ಸಾಹ ಇವುಗಳಿಗೆಲ್ಲ ಮೈಯಲ್ಲಿ ಶಕ್ತಿ ಇಲ್ಲದಿರುವುದು ಕೂಡ ಕಾರಣವಾಗುತ್ತದೆ. ಝೀರೋ ಗಾತ್ರದಿಂದ ಆರೋಗ್ಯಕರ ಮೈಕಟ್ಟನ್ನು ಹೊಂದುವುದು ಕೂಡ ಅಗತ್ಯ.

#ಹಣ್ಣಿನ ರಸ ಅಥವಾ ಸಲಾಡ್:​ಜ್ಯೂಸ್​ ಮತ್ತು ಸಲಾಡ್​ ಆರೊಗ್ಯಕ್ಕೆ ಒಳ್ಳೆಯದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಒಳ್ಳೆಯ ಆಹಾರ ಪದ್ಧತಿ ನಮ್ಮದಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಹಣ್ಣುಗಳು ಮತ್ತು ತರಕಾರಿಗಳು ನಮ್ಮದಾಗಿರಬೇಕು. ಹಣ್ಣುಗಳ ರಸ ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

#ತೂಕ ಹೆಚ್ಚಿಸಲು ನಟ್ಸ್ ಅತ್ಯುತ್ತಮವಾದ ಆಹಾರವಾಗಿದೆ. ಇವುಗಳಲ್ಲಿ ಕೊಬ್ಬು ಮತ್ತು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದರ ಜೊತೆಗೆ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಬೆರಳೆಣಿಕೆಯಷ್ಟು ನಟ್ಸ್​​ಗಳ ಸೇವನೆಯು ತೂಕ ಹೆಚ್ಚಳಕ್ಕೆ ಸಹಾಯಕವಾಗಿದೆ.

#ಒಣದ್ರಾಕ್ಷಿ ಮತ್ತು ಅಂಜೂರ ಸೇವಿಸಿ ಅಂಜೂರದ ಹಣ್ಣು ಮತ್ತು ಒಣದ್ರಾಕ್ಷಿಗಳ(Dry Fruits) ಸಹಾಯದಿಂದ ನೀವು ದೇಹ ತೂಕ ಹೆಚ್ಚಿಸಿಕೊಳ್ಳಬಹುದು. ಪ್ರತಿದಿನ ಒಂದೇ ಪ್ರಮಾಣದಲ್ಲಿ ಬೆರಳೆಣಿಕೆಯಷ್ಟು ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ. ಈ ಎರಡು ಹಣ್ಣುಗಳನ್ನ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

#ತೂಕವನ್ನು ಹೆಚ್ಚಿಸಿಕೊಳ್ಳಲು ಹಾಲು ಒಂದು ಉತ್ತಮ ನೈಸರ್ಗಿಕ ಪದಾರ್ಥವಾಗಿದೆ. ಸಂಪೂರ್ಣ ಪ್ಯಾಟನ್ನು ಹೊಂದಿರುವ ಹಾಲನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಜೀವಸತ್ವಗಳು ಮತ್ತು ಪೋಷಕಾಂಶಗಳು ದೊರೆಯುತ್ತವೆ. ಹಾಲಿನಲ್ಲಿ ವಿಟಮಿನ್ ಡಿ ಮತ್ತು ಎ ಹೇರಳವಾಗಿ ತುಂಬಿಕೊಂಡಿವೆ. ನೀವು ಹಾಲನ್ನು ಹೇಗೆ ಬಳಸುತ್ತಿರೋ ಹಾಗೆ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತವೆ.

#ನಮ್ಮ ತೂಕವನ್ನು ಹೆಚ್ಚಿಸಲು ಬಾಳೆಹಣ್ಣು ಕೂಡ ಸಾಹಾಯಕವಾಗಿದೆ. ಬಾಳೆಹಣ್ಣು ಸೇವನೆಯಿಂದ ತೂಕ ಹೆಚ್ಚಿಸುವ ಒಂದು ಅತ್ಯುತ್ತಮ ಆಹಾರವಾಗಿದೆ ಇದರಲ್ಲಿ ಹೆಚ್ಚಿನ ಖನಿಜಗಳು ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲರಿಗಳನ್ನು ಇವು ಹೊಂದಿವೆ ನೀವು ತೂಕ ಹೆಚ್ಚಿಸಿಕೊಳ್ಳಲು ದಿನಕ್ಕೆ 4 ರಿಂದ 5 ಮಾಗಿದ ಬಾಳೆಹಣ್ಣುಗಳನ್ನು ತಿನ್ನಬಹುದು.

#ಡಾರ್ಕ್ ಚಾಕಲೇಟ್ ಕೂಡ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಇಂದಿನ ದಿನಗಳಲ್ಲಿ ತುಂಬಾ ಜನರು ಚಾಕಲೇಟ್ ಅನ್ನು ಇಷ್ಟಪಡುತ್ತಾರೆ. ಹಾಗೆ ಈ ಡಾರ್ಕ್ ಚಾಕಲೇಟ್ ಕೂಡ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ ಆದರೆ ಇದರಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ ಆದ್ದರಿಂದ ಇದನ್ನು ನಿಯಮಿತವಾಗಿ ಬಳಸಿ.

#ನಿಮ್ಮ ತೂಕವನ್ನು ಹೆಚ್ಚಿಸಲು ಗೋಧಿ ಬ್ರೆಡ್ ಅನ್ನು ಬಳಸಬಹುದು ಈ ಗೋಧಿ ಬ್ರೆಡ್ ಉತ್ಪನ್ನ ತಿನ್ನುವುದರಿಂದ ನಮ್ಮ ತೂಕವು ಹೆಚ್ಚಾಗುತ್ತದೆ. ಇಂತಹ ಸಿಂಪಲ್ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಮ್ಮ ತೂಕವು ಹೆಚ್ಚಾಗುತ್ತದೆ.

#ಸೀಗಡಿ ಮತ್ತು ಸಾಲ್ಮನ್ ಮೀನುಗಳು: ಈ ಮೀನುಗಳಲ್ಲಿ ಅಗತ್ಯವಾದ ಪೋಷಕಾಂಶಗಳು, ಆರೋಗ್ಯಕ್ಕೆ ಬೇಕಾದ ಕ್ಯಾಲೋರಿಗಳು ಮತ್ತು ಪ್ರೋಟೀನ್‌ಗಳು ಇರುತ್ತವೆ. ಇದು ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

#ಮೊಟ್ಟೆಗಳು: ಮೊಟ್ಟೆಯಲ್ಲಿ ಅಮೈನೋ ಆಮ್ಲದ ಸಾಂದ್ರತೆ ಹೆಚ್ಚಿರುತ್ತದೆ ಅಲ್ಲದೇ ಮೊಟ್ಟೆಯ ಹಳದಿ ಭಾಗದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ಇದು ದೇಹದ ಕ್ಯಾಲೋರಿ ಕೂಡಾ ಹೆಚ್ಚಿಸುತ್ತದೆ. ದಿನಕ್ಕೆ 2 ಮೊಟ್ಟೆ ತಿಂದರೆ ತೂಕ ಹೆಚ್ಚುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group