ಗಡ್ಡವನ್ನು ನೈಸರ್ಗಿಕವಾಗಿ ವೇಗವಾಗಿ ಬೆಳೆಸಲು ಕೆಲವು ವಿಧಾನಗಳು !

ಗಡ್ಡ ಬೆಳೆಸುವುದು ತುಂಬಾ ಸುಲಭವೆಂದು ಹೆಚ್ಚಿನವರು ಭಾವಿಸಿದ್ದಾರೆ. ಇಂದಿನ ದಿನಗಳಲ್ಲಿ ಗಡ್ಡ ಬೆಳೆಸುವ ಮಂದಿ ಹೆಚ್ಚಾಗುತ್ತಾ ಇದ್ದಾರೆ. ಇದಕ್ಕೆ ಬಾಲಿವುಡ್ ಕೂಡ ಸಾಕ್ಷಿಯಾಗಿದೆ. ವಯಸ್ಸನ್ನು ಅನುಸರಿಸಿಕೊಂಡು ಮುಖದ ಮೇಲಿನ ಕೂದಲು ದಪ್ಪ ಹಾಗೂ ಉದ್ದಗೆ ಬೆಳೆಯುತ್ತದೆ. ಆದರೆ ಗಡ್ಡವನ್ನು ನೈಸರ್ಗಿಕವಾಗಿ ವೇಗವಾಗಿ ಬೆಳೆಸಲು ಕೆಲವು ವಿಧಾನಗಳು ಕೂಡ ಇವೆ. ಗಡ್ಡವು ವೇಗ ಹಾಗೂ ಬಲಿಷ್ಠವಾಗಿ ಬೆಳೆಯಬೇಕೆಂದರೆ ಅದಕ್ಕೆ ಸರಿಯಾಗಿ ಪೋಷಣೆ ನೀಡಬೇಕು. ಅಂತಹ ಕೆಲವು ಸಲಹಗಳಿವೆ
ನೀವು ಮಾಂಸಾಹಾರಿಗಳಾಗಿದ್ದರೆ ಗಡ್ಡ ಬೆಳೆಯಲು ಟ್ಯೂನ ಮೀನುಗಳನ್ನು ಸೇವಿಸಬಹುದು. ಒಮೆಗಾ-3 ಕೊಬ್ಬಿನಾಮ್ಲಗಳು ಟ್ಯೂನ ಮೀನುಗಳಲ್ಲಿ ಕಂಡುಬರುತ್ತವೆ. ಟ್ಯೂನ ಮೀನು ತಿನ್ನುವುದರಿಂದ ನಿಮ್ಮ ಚರ್ಮವು ಹೊಳೆಯುತ್ತದೆ ಮತ್ತು ನಿಮ್ಮ ಕೂದಲು ಉತ್ತಮವಾಗಿ ಬೆಳೆಯುತ್ತದೆ. ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಟ್ಯೂನ ಮೀನುಗಳನ್ನು ಸೇವಿಸಬಹುದು.
ಪ್ರೋಟೀನ್ ಅಧಿಕವಾಗಿರುವ ಆಹಾರ, ಕಡಿಮೆ ಒತ್ತಡ ಮತ್ತು ಸರಿಯಾದ ನಿದ್ರೆಯಿದ್ದರೆ ಗಡ್ಡವು ವೇಗವಾಗಿ ಬೆಳೆಯುವುದು. ಪ್ರೋಟೀನ್ ನಿಂದ ದೇಹಕ್ಕೆ ಬೇಕಾಗುವಂತಹ ಸರಿಯಾದ ಪೋಷಕಾಂಶಗಳು ಸಿಗುತ್ತದೆ. ಇದರಿಂದ ಕೂದಲು ಬೆಳೆಯುವುದು. ಸರಿಯಾಗಿ ನಿದ್ರೆ ಮಾಡಿದರೆ ಕೂದಲು ವೇಗವಾಗಿ ಬೆಳೆಯಲು ನೆರವಾಗುವುದು. ದಿನದಲ್ಲಿ ಎಂಟು ಲೋಟ ನೀರು ಕುಡಿದರೆ ಕೂದಲು ದಪ್ಪ ಹಾಗೂ ಆರೋಗ್ಯಕರವಾಗಿ ಬೆಳೆಯುವುದು. ಒತ್ತಡದಿಂದ ಮುಕ್ತವಾಗಿದ್ದರೆ ಕೂದಲು ಉದುರುವುದನ್ನು ತಪ್ಪಿಸಬಹುದು ಮತ್ತು ಬೆಳೆವಣಿಗೆ ಹೆಚ್ಚಿಸಬಹುದು.
ಪಾಲಕ್ ಸೊಪ್ಪು: ಸೊಪ್ಪುಗಳಿಂದ ದೇಹಕ್ಕೆ ಉತ್ತಮ ಪೌಷ್ಟಿಕತೆ ದೊರಕುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ, ಫೋಲಿಕ್ ಆಮ್ಲ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ದೇಹಕ್ಕೆ ಅಗತ್ಯವಾಗಿ ಪೋಷಾಕಾಂಶಗಳನ್ನು ನೀಡುತ್ತದೆ. ಇದು ಗಡ್ಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಆಹಾರ ಮತ್ತು ಸೌಂದರ್ಯವರ್ಧಕಗಳಲ್ಲಿ ವಿಟಮಿನ್ ಬಿಯನ್ನು ಸೇರಿಸಿಕೊಳ್ಳಿ. ವಿಟಮಿನ್ ಬಿ1, ಬಿ6 ಮತ್ತು ಬಿ12 ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಪ್ರತಿನಿತ್ಯ ಬಯೋಟಿನ್ ಸೇವಿಸಿ. ಈ ಆಹಾರ ಪೂರಕವು ಕೂದಲು ಮತ್ತು ಉಗುರು ಬೆಳೆಯಲು ನೆರವಾಗುವುದು. ಪ್ರಾಣಿಗಳ ಯಕೃತ್, ಸಿಂಪಿ, ಹೂಕೋಸು, ಬೀನ್ಸ್, ಮೀನು, ಕ್ಯಾರೆಟ್, ಬಾಳೆಹಣ್ಣು, ಸೋಯಾ ಹಿಟ್ಟು, ಮೊಟ್ಟೆಯ ಹಳದಿ ಭಾಗ, ಧಾನ್ಯಗಳು ಇತ್ಯಾದಿಗಳಲ್ಲಿ ಇದು ಕಂಡುಬರುವುದು.
ಬೆಳೆಯಲು ಬಿಡಿ:ಕೂದಲು ಬೆಳೆಯಲು ಆರಂಭವಾಗುತ್ತಾ ಇರುವಂತೆ ಅದು ಅಲ್ಲಲ್ಲಿ ಬೆಳೆದಂತೆ ಮತ್ತು ಸಂಪೂರ್ಣವಾಗಿರದಂತೆ ಕಾಣುವುದು. ಕೂದಲು ದೊಡ್ಡದಾಗುತ್ತಾ ಇರುವಂತೆ ನಿಧಾನವಾಗಿ ಬೆಳೆಯುವಂತಹ ಕಿರುಚೀಲಗಳು ತಮ್ಮ ಕೂದಲನ್ನು ಮೊಳಕೆ ಭರಿಸಲು ಸಮಯ ತೆಗೆದುಕೊಳ್ಳುವುದು. ಕೂದಲು ದೊಡ್ಡದಾಗಿ ಬೆಳೆಯುವುದರಿಂದ ಅಲ್ಲಲ್ಲಿ ಇರುವ ಖಾಲಿ ಜಾಗಗಳು ತುಂಬುವುದು ಮತ್ತು ಸಣ್ಣ ಕೂದಲುಗಳು ನಿಧಾನವಾಗಿ ಬೆಳೆಯುವುದು. ತಾಳ್ಮೆಯಿಂದ ಇದ್ದರೆ ಕೂದಲು ಮೊಳಕೆ ಬಂದು ಬೆಳೆಯುವುದು.
ಕೂದಲು ಬೆಳೆದ ಬಳಿಕ:ಕೂದಲು ಬೆಳೆದ ಬಳಿಕ ಅದನ್ನು ಒಳ್ಳೆಯ ಸ್ಥಿತಿಯಲ್ಲಿ ಇಟ್ಟುಕೊಂಡರೆ ಆಗ ಕೂದಲನ್ನು ಟ್ರಿಮ್ ಮಾಡಿ ಮತ್ತೆ ಬೆಳೆಸುವ ಅಗತ್ಯ ಕಾಣಿಸುವುದಿಲ್ಲ. ಹರಳೆಣ್ಣೆಯು ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾದ ತೈಲವಾಗಿದೆ. ಇದು ಕೂದಲನ್ನು ಸರಿಯಾದ ಮಾರ್ಗದಲ್ಲಿ ಬೆಳೆಯುವಂತೆ ಮಾಡುವುದು. ಆಲಿವ್ ತೈಲ, ತೆಂಗಿನೆಣ್ಣೆ, ಪುದೀನಾ ಎಣ್ಣೆ ಕೂಡ ಕೂದಲಿಗೆ ಪೋಷಣೆ ನೀಡಲು ತುಂಬಾ ಒಳ್ಳೆಯದು.
ಕುಂಬಳಕಾಯಿ ಬೀಜಗಳಲ್ಲಿ ಸತುವು ಸಮೃದ್ಧವಾಗಿದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದ್ದರಿಂದ ನೀವು ಅದನ್ನು ಕಾಲಕಾಲಕ್ಕೆ ಸೇವಿಸಬಹುದು. ಇದನ್ನು ತಿನ್ನುವುದರಿಂದ ಗಡ್ಡ ಬೆಳೆಯಲು ಸಹಾಯವಾಗುತ್ತದೆ